ಬೆಂಗಳೂರು: ಇಂದು ಎಲ್ಲೆಡೆ ಮಕರ ಸಂಕ್ರಾಂತಿ ಅಥವಾ ಪೊಂಗಲ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ದಿನ ಕೆಲವೊಂದು ವಸ್ತುಗಳನ್ನು ದಾನ ಮಾಡುವುದರಿಂದ ಶುಭವಾಗುತ್ತದೆ. ಅವುಗಳು ಯಾವುವು ನೋಡೋಣ.
ಮಕರ ಸಂಕ್ರಮಣದ ದಿನ ಎಳ್ಳು, ಬೆಲ್ಲ ಹಂಚುವುದು ಸಂಪ್ರದಾಯ. ಇದು ಉತ್ತರಾಯಣದ ಕಾಲವಾಗಿದ್ದು ಸಮಸ್ತ ದೇವತಾ ಕಾರ್ಯಗಳಿಗೆ ಶುಭ ದಿನವಾಗಿದೆ. ಈ ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ ಎಳ್ಳು ದಾನ ಮಾಡಬೇಕು. ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚಬೇಕು. ಇಂದಿನ ದಿನ ಮಾಡಿದ ದಾನದ ಫಲ ನಮಗೆ ಜನ್ಮ ಜನ್ಮಾಂತರಗಳಲ್ಲೂ ಸಿಕ್ಕಿ ಸೂರ್ಯ ದೇವನ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂಬ ನಂಬಿಕೆಯಿದೆ.