Publish Date: Mon, 16 Nov 2020 (09:27 IST)
Updated Date: Mon, 16 Nov 2020 (09:29 IST)
ಬೆಂಗಳೂರು: ತಾಂಬೂಲ ಕೊಡುವಾಗ ಅಥವಾ ದಕ್ಷಿಣೆ ಕೊಡುವಾಗ ಕೆಲವೊಂದು ವಿಚಾರಗಳನ್ನು ನಾವು ತಪ್ಪದೇ ಪಾಲಿಸಿದರೆ ಮಾತ್ರ ಅದರ ಫಲ ನಮಗೆ ಸಿಗುವುದು.
ದಕ್ಷಿಣೆ ಕೊಡುವಾಗ ವೀಳ್ಯದೆಲೆ ಕೊಡುವುದು ಪದ್ಧತಿ. ಈ ವೀಳ್ಯದೆಲೆಗಳು ಐದು ಅಥವಾ ಮೂರು ಸಂಖ್ಯೆಯಲ್ಲಿರಬೇಕು ಮತ್ತು ಇವುಗಳು ಹಚ್ಚಹಸಿರಾಗಿರಬೇಕು. ತೆಂಗಿನ ಕಾಯಿ ವೀಳ್ಯದ ಮೇಲೆ ದಾನ ಕೊಡುವವರಿಗೆ ಮುಖ ಮಾಡಿದಂತೆ ಇಟ್ಟು ಕೊಡಬೇಕು. ದಕ್ಷಿಣೆ ರೂಪದಲ್ಲಿ ನಗದು ಕೊಡುತ್ತಿದ್ದರೆ ತಪ್ಪದೇ ಒಂದು ನಾಣ್ಯವನ್ನೂ ಜತೆಗಿಟ್ಟುಕೊಡುವುದು ಸರಿಯಾದ ಕ್ರಮ.