ಬೆಂಗಳೂರು: ಸಹೋದರತ್ವದ ಬಾಂಧವ್ಯ ಸಾರುವ ಸಲುವಾಗಿ ಆಚರಿಸುವ ರಾಖಿ ಹಬ್ಬ ಇಂದು. ಈ ದಿನವನ್ನು ಹೇಗೆ ಆಚರಿಸಬೇಕು ಮತ್ತು ಯಾರು ಆಚರಿಸಬೇಕು ಎಂದು ನೋಡೋಣ.
ಸಾಮಾನ್ಯವಾಗಿ ರಾಖಿ ಹಬ್ಬದ ದಿನ ಒಡಹುಟ್ಟಿದ ಅಥವಾ ಸಹೋದರ ಸಮಾನರಾದವರ ಪೂಜೆ ಮಾಡಿ ರಾಖಿ ಕಂಕಣ ಕಟ್ಟಿ ಆಚರಣೆ ಮಾಡಲಾಗುತ್ತದೆ. ಅಣ್ಣ-ತಂಗಿ ಬಾಂಧವ್ಯ ಗಟ್ಟಿಯಾಗಿರಲಿ, ಸಹೋದರರ ಆಯಸ್ಸು ವೃದ್ಧಿಯಾಗಲಿ, ಅವರು ಸಹೋದರಿಯರಿಗೆ ಶ್ರೀರಕ್ಷೆಯಾಗಿರಲಿ ಎಂಬ ಕಾರಣಕ್ಕೆ ರಾಖಿ ಹಬ್ಬ ಆಚರಿಸಲಾಗುತ್ತದೆ.
ಹೀಗಾಗಿ ಅಕ್ಕ-ತಂಗಿಯರು ಅಥವಾ ಅಣ್ಣ-ತಮ್ಮ ಈ ಹಬ್ಬ ಆಚರಿಸಲ್ಲ. ಈ ಹಬ್ಬದ ಮೂಲಕ ಒಡಹುಟ್ಟಿದವರ ಅಥವಾ ಸಹೋದರ-ಸಹೋದರಿಯರ ನಡುವಿನ ಬಾಂಧವ್ಯ ವೃದ್ಧಿಯಾಗಲಿ ಎಂಬುದು ಆಶಯ.