Publish Date: Sat, 16 Feb 2019 (08:55 IST)
Updated Date: Sat, 16 Feb 2019 (08:56 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ಒಂದೊಂದು ರೀತಿಯಿರುತ್ತದೆ. ದಿನಕ್ಕೊಂದು ರಾಶಿಯವರ ಗುಣ ಮತ್ತು ಅವಗುಣಗಳನ್ನು ತಿಳಿಯುತ್ತಾ ಸಾಗೋಣ.
ಕನ್ಯಾ ರಾಶಿ
ಈ ರಾಶಿಯವರು ಒಂಥರಾ ಪರ್ಫೆಕ್ಷನಿಸ್ಟ್ ಗಳು. ಇವರಿಗೆ ಜೀವನದಲ್ಲಿ ಎಲ್ಲವೂ ಕಟ್ಟುನಿಟ್ಟಾಗಿ ಇದಮಿತ್ತಂ ಎನ್ನುವ ರೀತಿಯಲ್ಲೇ ನಡೆಯಬೇಕು. ಇವರು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹಾಗೆಯೇ ಇನ್ನೊಬ್ಬರಿಗೆ ಅತ್ಯುತ್ತಮ ಸಲಹೆ ಕೊಡುತ್ತಾರೆ.
ಅವಗುಣಗಳೆಂದರೆ, ಇವರು ಬೇಗನೇ ಗಮನವನ್ನೂ ಕಳೆದುಕೊಳ್ಳುತ್ತಾರೆ. ಸಣ್ಣ ವಿಚಾರಗಳು ಇವರ ಮನಸ್ಸಿಗೆ ಬೇಗನೇ ಪರಿಣಾಮ ಬೀರುತ್ತವೆ. ಒಂದು ವಿಚಾರದಿಂದ ಇವರ ಗಮನ ಸರಿಸುವುದು ತುಂಬಾ ಸುಲಭ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ