Daily Horoscope
✕

ಶಿವನು ಮಲಗಿರುವ ಸ್ಥಿತಿಯಲ್ಲಿರುವ ಏಕೈಕ ದೇವಾಲಯವಿದು!

Webdunia
ಸೋಮವಾರ, 16 ಸೆಪ್ಟಂಬರ್ 2019 (08:36 IST)
ಬೆಂಗಳೂರು: ನಮ್ಮಲ್ಲಿ ಹಲವು ಶಿವ ದೇವಾಲಯಗಳಿವೆ. ಆದರೆ ಶಿವನನ್ನು ಲಿಂಗದ ರೂಪದಲ್ಲಿ ಪೂಜಿಸುವುದನ್ನು ಮಾತ್ರ ನೋಡಿದ್ದೇವೆ. ಆದರೆ ಆಂಧ್ರಪ್ರದೇಶದಲ್ಲಿರುವ ಈ ದೇವಲಾಯದಲ್ಲಿ ಶಿವ ಪಾರ್ವತಿಯ ಮಡಿಲಲ್ಲಿ ಮಲಗಿದ ಸ್ಥಿತಿಯಲ್ಲಿದ್ದಾನೆ.


ಪಲ್ಲಿ ಕೊಂಡೇಶ್ವರ ದೇವಾಲಯದಲ್ಲಿ ಶಿವನು ಪಾರ್ವತಿ ಮಡಿಲಲ್ಲಿ ಮಲಗಿರುವ ರೂಪದಲ್ಲಿ ಕಾಣಸಿಗುತ್ತಾನೆ. ಇಂತಹ ದೇವಾಲಯವಿರುವುದು ದೇಶದಲ್ಲಿ ಇಲ್ಲಿ ಮಾತ್ರ.

ಸಮುದ್ರ ಮಥನದ ಸಂದರ್ಭದಲ್ಲಿ ವಿಷ ಕುಡಿದ ಶ್ರೀಕಂಠ ಪಾರ್ವತಿ ದೇವಿಯೊಂದಿಗೆ ಮರಳಿ ಕೈಲಾಸಕ್ಕೆ ಸಾಗುವಾಗ ಕೊಂಡೇಶ್ವರ ಬಳಿ ಬಂದಾಗ ವಿಷದ ಪ್ರಭಾವದಿಂದಾಗಿ ಶಿವ ಸುಧಾರಿಸಿಕೊಳ್ಳಲು ಇಲ್ಲೇ ಪಾರ್ವತಿಯ ಮಡಿಲಲ್ಲಿ ಮಲಗಿ  ವಿಶ್ರಮಿಸುತ್ತಾನಂತೆ. ಈ ಕಾರಣಕ್ಕೇ ಇದು ಶಿವ ಶಯನ ಕ್ಷೇತ್ರವಾಯಿತು.

ವಿಶೇಷವೆಂದರೆ ಈ ಶಿವನ ಮೂರ್ತಿಗೆ ಅಭಿಷೇಕ ಮಾಡುವ ಸಂಪ್ರದಾಯವಿಲ್ಲ. ವಿಷದ ಪ್ರಭಾವವಿರುವುದರಿಂದ ಅಭಿಷೇಕ ಮಾಡುವುದಿಲ್ಲವಂತೆ. ಬದಲಾಗಿ ಗುಪ್ತ ಸ್ಥಳದಿಂದ ಚಂದನ ತೈಲ ತಂದು ವಿಗ್ರಹಕ್ಕೆ ಲೇಪಿಸಲಾಗುತ್ತದೆ. ಇದರಿಂದ ವಿಷದ ಪ್ರಭಾವ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಾನಸಿಕ ಮತ್ತು ದೈಹಿಕ ಪ್ರಯೋಜನಗಳಿಗಾಗಿ ಶ್ರೀ ದುರ್ಗಾ ಚಂದ್ರಕಳಾ ಸ್ತುತಿ

ಮಾನಸಿಕ ಒತ್ತಡ ಶಮನ ಮಾಡಲು ಶ್ರೀ ರುದ್ರಸ್ತವನಂ ಸ್ತೋತ್ರ ಪಠಿಸಿ

ಸೂರ್ಯನ ಅನುಗ್ರಹಕ್ಕೆ ಶ್ರೀ ಭಾಸ್ಕರ ಸಪ್ತಕಂ ಸ್ತೋತ್ರ

ಸರ್ಪ ದೋಷ ನಿವಾರಣೆಗೆ ಈ ಸ್ತೋತ್ರ ಪಠಿಸಿ

ಶುಕ್ರವಾರ ಪಠಿಸಬೇಕಾದ ಲಕ್ಷ್ಮೀ ಸ್ತೋತ್ರ

ಮುಂದಿನ ಸುದ್ದಿ
Show comments