2017ರ ಹೊಸ ವರ್ಷದ ರಾಶಿ ಭವಿಷ್ಯ ಜ್ಯೋತಿಷ್ಯಶಾಸ್ತ್ರದ ಪಂಡಿತರಿಂದ ತಯಾರಿಸಲಾಗಿದೆ. ಭವಿಷ್ಯದ ಜೊತೆಗೆ ನಿಮ್ಮ ರಾಶಿಗಳ ಮೇಲೆ ಶನಿ ಪ್ರಭಾವ, ಅವುಗಳಿಂದ ದೂರವಿರುವ ಮುನ್ಸೂಚನೆಗಳನ್ನು ನೀಡಲಾಗಿದೆ. ಹೊಸ ವರುಷ ಓದುಗರಿಗೆ ಹೊಸ ಹರುಷ ತರಲಿ ಎಂದು ಹಾರೈಸುತ್ತೇವೆ
ಮೇಷ
ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳ ಮೂಲಕ, ನೀವು ಕೆಲವು ಪ್ರಮುಖ ಜನರನ್ನು ಭೇಟಿಯಾಗುತ್ತೀರಿ. ಕಠಿಣ ಪರಿಶ್ರಮದಿಂದ ನೀವು ಏನನ್ನಾದರೂ ಪ್ರಾರಂಭಿಸಿದರೆ, ಇದು ನಿಮಗೆ ಉತ್ತಮ ಫಲಿತಾಂಶ ನೀಡುತ್ತದೆ. ನೀವು ಪುರಸ್ಕಾರವನ್ನೂ ಪಡೆಯುತ್ತೀರಿ. ಧನಾತ್ಮಕ ಚಿಂತನೆ ನಿಮಗೆ ತುಂಬಾ ಸಹಾಯ ಮಾಡುತ್ತದೆ. ಕುಟುಂಬ ಸದಸ್ಯರೊಂದಿಗೆ ಭೇಟಿ ಹೆಚ್ಚಿರಲಿ. 2017ರ ರಾಶಿ ಭವಿಷ್ಯದ ಪ್ರಕಾರ, ನಿಮ್ಮ ವೈವಾಹಿಕ ಜೀವನಕ್ಕೆ ಸಮಯ ಮೀಸಲಿಟ್ಟು ನಿಮ್ಮ ಜೀವನ ಸಂಗಾತಿಯನ್ನು ಹೊರಗಡೆ ಕರೆದುಕೊಂಡು ಹೋಗಿ. ಇದು ಸಂಬಂಧವನ್ನು ವೃದ್ಧಿಸುತ್ತದೆ. ಪ್ರೇಮ ಸಂಬಂಧದಲ್ಲಿ ತಪ್ಪು ತಿಳಿವಳಿಕೆಯನ್ನು ದೂರವಿಡಿ; ಇಲ್ಲವಾದರೆ ಸಮಸ್ಯೆ ಕಂಡುಬರುತ್ತದೆ. ಯಾರನ್ನಾದರೂ ತಕ್ಷಣಕ್ಕೆ ತೀರ್ಮಾನಿಸಬೇಡಿ; ಇದು ಇತರರ ಭಾವನೆಗಳ ಮೇಲೆ ಪ್ರಭಾವ ಬೀರಬಹುದು. ನಿಮ್ಮ ಆರೋಗ್ಯದ ವಿಚಾರದಲ್ಲೂ ಸ್ವಲ್ಪ ಎಚ್ಚರದಿಂದ ಇರಬೇಕು. ತಪ್ಪಾದ ಆಹಾರ ಸೇವನೆಯಿಂದ, ಹೊಟ್ಟೆ ಹಾಗೂ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನೀವು ಸೇವಿಸುವ ಆಹಾರದ ಆಧಾರದಲ್ಲಿ ಈ ಸಮಸ್ಯೆಗಳನ್ನು ದೂರವಿಡಬಹುದು. ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡರೆ, ಉತ್ತಮವಾಗಿರುತ್ತದೆ.
ವೃಷಭ
2017 ನಿಮ್ಮ ಆರ್ಥಿಕ ಜೀವನವನ್ನು ಅದ್ಭುತವಾಗಿಡುತ್ತದೆ. ನೀವು ಆನಂದಿಸಲು ಕೇವಲ ಹಣಕಾಸು ಮಾತ್ರವೇ ಕಾರಣವಾಗದೇ ಸ್ನೇಹಿತರೂ ಉಪಯುಕ್ತವೆಂದು ಸಾಬೀತಾಗುತ್ತಾರೆ. ಆದರೆ ಇದರರ್ಥ ಭಾವನೆಗಳಲ್ಲಿ ತೇಲಿಹೋಗಿ ನಿಮ್ಮ ಸ್ನೇಹ ಮತ್ತು ಬಂಧಗಳಿಗೆ ಹಾನಿ ಮಾಡಿಕೊಳ್ಳಬೇಕೆಂದಲ್ಲ. ಉದ್ಯೋಗಗಳಲ್ಲಿರುವ ಕುಂಭರಾಶಿಯವರು ಈ ವರ್ಷ ಅವರಿಗೆ ಹೆಸರು, ಕೀರ್ತಿ, ಘನತೆ, ಮತ್ತು ಪ್ರಗತಿಗಳ ಮಳೆಯಾಗುವುದನ್ನು ನೋಡುತ್ತಾರೆ. ನಿಮ್ಮ ಮೇಲಿನವರಾಗಲೀ ಅಥವಾ ಸಹೋದ್ಯೋಗಿಗಳಾಗಲೀ ಎಲ್ಲರೂ ನಿಮ್ಮಲ್ಲಿರುವ ಪರಿಣಿತ ಉದ್ಯೋಗಿಯನ್ನು ಗುರುತಿಸುತ್ತಾರೆ ಹಾಗೂ ನಿಮ್ಮನ್ನು ಮುಕ್ತವಾಗಿ ಶ್ಲಾಘಿಸುತ್ತಾರೆ. ಅಧೀರರಾಗಬೇಡಿ, ನೀವು ಉದ್ಯಮಿಯಾಗಿದ್ದರೂ 2016 ನಿಮಗೆ ಲಾಭದಾಯಕವಾಗಿಯೇ ಇರುತ್ತದೆ. ಕಡೆಯದಾಗಿ; ಪ್ರೀತಿ ಜೀವನವೂ ಸರಿಯಾದ ನಿಟ್ಟಿನಲ್ಲಿಯೇ ಸಾಗುತ್ತದೆ.
ಮಿಥುನ
ಉದ್ಯೋಗಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳಿಗೂ ಈ ವರ್ಷ ಉತ್ತಮವಾಗಿರುತ್ತದೆ. ಬಡ್ತಿಯ ಸಾಧ್ಯತೆಗಳೂ ಇವೆ. ಹೀಗಾಗಿ, ಕಠಿಣ ಪರಿಶ್ರಮ ಮುಂದುವರಿಸಿ, ನಿರಾಶರಾಗಬೇಡಿ. ಉದ್ಯೋಗ ಹುಡುಕುತ್ತಿರುವವರಿಗೆ ಯಶಸ್ಸಿದೆ. ವೃತ್ತಿ ಜೀವನದಲ್ಲೂ ಉತ್ತಮ ಆರಂಭವಿದೆ. ಕಾನೂನು, ಔಷಧ, ವಾಣಿಜ್ಯ ಇತ್ಯಾದಿಗೆ ಸಂಬಂಧಿಸಿದ ವ್ಯಕ್ತಿಗಳು ಧನಾತ್ಮಕ ಸಮಯವನ್ನು ಪಡೆಯುತ್ತಾರೆ.ನಿಮ್ಮ ಕೆಲಸದ ಗುಣಮಟ್ಟದಿಂದ ಚಕಿತರಾಗುತ್ತೀರಿ. ದ್ವೇಷಿಗಳು ನಿಮ್ಮೊಂದಿಗೆ ಎಲ್ಲ ವಿಚಾರಗಳನ್ನೂ ಪರಿಹರಿಸಲು ಪ್ರಯತ್ನಿಸುತ್ತಾರೆ. ನಿಮ್ಮ ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರುತ್ತದೆ. ಇತರರಿಗೆ ನೆರವಾಗುವ ಮುನ್ನ, ನಿಮ್ಮ ಹಣಕಾಸಿನ ಸನ್ನಿವೇಶವನ್ನು ಮೊದಲು ಪರಿಗಣಿಸಿ. ಅತಿಯಾದ ವೆಚ್ಚದಿಂದ ಭವಿಷ್ಯದಲ್ಲಿನ ಸಮಸ್ಯೆಗಳನ್ನು ನೀವು ಎದುರಿಸಬೇಕಾದೀತು. ಉಳಿಸಿದ ಹಣ ಮುಂದಿನ ದಿನಗಳಲ್ಲಿ ನಿಮಗೆ ಲಾಭ ತಂದುಕೊಡಲಿದೆ. ವರ್ಷದ ಎರಡನೇ ಭಾಗದಲ್ಲಿ, ನಿಮ್ಮ ಹಣದ ಬಗ್ಗೆ ಎಚ್ಚರ ವಹಿಸಬೇಕು. ಆಸ್ತಿಗೆ ಸಂಬಂಧಿಸಿದ ವಿಚಾರದಲ್ಲಿ ನೀವು ಲಾಭ ಪಡೆಯುತ್ತೀರಿ. ವ್ಯಾಪಾರಿಗಳು ಮತ್ತು ಅವರಿಗೆ ಸಂಬಂಧಿಸಿದ ಜನರಿಗೆ ಈ ಸಮಯ ಅನುಕೂಲಕರ ಎಂದು ಭಾವಿಸಲಾಗಿದೆ.
ಕರ್ಕ
2017ರ ರಾಶಿ ಭವಿಷ್ಯದದ ಪ್ರಕಾರ, ಈ ಹಿಂದೆ ನೀವು ಮಾಡಿರುವ ಕಠಿಣ ಪರಿಶ್ರಮವು ಈಗ ಫಲ ನೀಡುತ್ತದೆ; ಜೂನ್ನಂತರ ನಿಮ್ಮ ಯಶಸ್ಸಿನ ದರ ಹೆಚ್ಚುತ್ತದೆ. ಆದಾಗ್ಯೂ, ನೀವು ಆಪ್ತರ ಜತೆಗೆ ಯಾವುದೇ ವಾಗ್ವಾದದಿಂದ ದೂರವಿರಬೇಕು. ಸಿಟ್ಟಾಗಬೇಡಿ; ಇದು ನಿಮ್ಮನ್ನು ನಾಶ ಮಾಡುತ್ತದೆ. ನಿಮ್ಮ ಹಣಕಾಸಿನ ಬಗ್ಗೆ ಮಾತನಾಡುವುದಾದರೆ, ಮಕ್ಕಳಿಗೆ ನೀವು ತಕ್ಷಣದ ಹೂಡಿಕೆ ಮಾಡಬೇಕಾದೀತು. ವರ್ಷದ ಕೊನೆಗೆ ನಿಮ್ಮ ಗೌರವ ವೃದ್ಧಿಸುತ್ತದೆ ಮತ್ತು ನೀವು ಹೆಚ್ಚು ಆದಾಯದ ಮೂಲವನ್ನು ಪಡೆಯುತ್ತೀರಿ. ನೀವು ಉದ್ಯಮಿಯಾಗಿದ್ದರೆ, ನಿಮ್ಮ ವ್ಯಾಪಾರವನ್ನು ವೃದ್ಧಿಸುವ ಅವಕಾಶವನ್ನು ಪಡೆಯುತ್ತೀರಿ. ಆದರೆ, ನೀವು ನಿಮ್ಮ ಐಷಾರಾಮಿ ಚಟುವಟಿಕೆಗಳಿಗೆ ನೀವು ವೆಚ್ಚ ಮಾಡಬೇಕಾದೀತು. ಕಠಿಣ ಪರಿಶ್ರಮದಿಂದ ನೀವು ಹಣ ಮಾಡುತ್ತೀರಿ ಎಂದು ಭವಿಷ್ಯ ಹೇಳುತ್ತಿದೆ. ಹಲವು ಅಂಶಗಳನ್ನು ಉತ್ತಮಗೊಳಿಸಲು ಪಾಲಕರೂ ನಿಮಗೆ ಸಹಾಯ ಮಾಡುತ್ತಾರೆ. ಹೊಸ ಕೆಲಸದ ಯೋಜನೆಗಳನ್ನು ಮಾಡಲಾಗುತ್ತದೆ, ಇದು ನಿಮಗೆ ಯಶಸ್ಸು ನೀಡುತ್ತದೆ. ಹಾಗೆಯೇ, ನೀವು ತೀರ್ಥಯಾತ್ರೆಗೆ ತೆರಳುವ ಅವಕಾಶವೂ ಇದೆ. ನಿಮ್ಮೊಳಗಿರುವ ಶೌರ್ಯದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಇದರ ಜತೆಗೆ, ನಿಮ್ಮ ಅದೃಷ್ಟವನ್ನು ಸುಧಾರಿಸಿಕೊಳ್ಳಲು ಹಲವು ಅವಕಾಶಗಳನ್ನು ನೀವು ಪಡೆಯುತ್ತೀರಿ. ನಿಮ್ಮ ಪ್ರೇಮ ಜೀವನದಲ್ಲಿ ನೀವು ಸಮತೋಲನವನ್ನು ನಿರ್ವಹಿಸುವುದು ಉತ್ತಮ. ನಿಮ್ಮ ಪ್ರೇಮಿಗೆ ಸ್ವಲ್ಪ ಸಮಯ ಮೀಸಲಿಡಿ ಮತ್ತು ಹೊರಗೆ ಸುತ್ತಾಡಿ. ಆರೋಗ್ಯ ವಿಚಾರದಲ್ಲಿ, ನೀವು ನನಿಜವಾಗಿಯೂ ಎಚ್ಚರ ವಹಿಸಬೇಕು.
ಸಿಂಹ
ನಿಮ್ಮ ಎಲ್ಲ ಕುಟುಂಬ ಸದಸ್ಯರೂ ನಿಮಗೆ ಬೆಂಬಲ ನೀಡುತ್ತಾರೆ. ಮಕ್ಕಳು ನಿಮ್ಮ ಜೀವನದಲ್ಲಿ ಖುಷಿ ನೀಡುತ್ತಾರೆ. ನಿಮ್ಮ ಜೀವನ ಸಂಗಾತಿಯ ಜತೆ ಉತ್ತಮ ಸಂಬಂಧ ಕಾಪಾಡಿಕೊಳ್ಳಿ. ಇದರ ಜತೆಗೆ, ನಿಮ್ಮ ಸಂಗಾತಿಯ ಆರೋಗ್ಯ ಕಾಯ್ದುಕೊಳ್ಳಿ. ಆದಾಗ್ಯೂ, ಈ ಕಷ್ಟದ ಸನ್ನಿವೇಶ ಕಡಿಮೆ ಅವಧಿಯದಾಗಿದೆ ಮತ್ತು ಶೀಘ್ರದಲ್ಲೇ ಇದಕ್ಕೆ ನೀವು ಹೊಂದಿಕೊಳ್ಳುತ್ತೀರಿ. ನೀವು ಒಂಟಿಯಾಗಿದ್ದರೆ, ನೀವು ಹೊಸ ಪ್ರೀತಿಪಾತ್ರರನ್ನು ಕಂಡುಕೊಳ್ಳಬಹುದು. ನೀವು ಈಗಾಗಲೇ ಸಂಬಂಧದಲ್ಲಿದ್ದರೆ, ಇದು ಇನ್ನಷ್ಟು ಬಲವಾಗುತ್ತದೆ. ವರ್ಷದ ಅಂತ್ಯದಲ್ಲಿ, ಹಣಕಾಸಿನ ಸ್ಥಿತಿ ಉತ್ತಮವಾಗುತ್ತದೆ. ಆದಾಯದ ಹೊಸ ಮೂಲವನ್ನು ಕಂಡುಕೊಳ್ಳಬಹುದಾಗಿದೆ. ಹೂಡಿದ ಹಣ ನಿಮಗೆ ಲಾಭ ಕೊಡುತ್ತದೆ. ಪ್ರಮುಖವಲ್ಲದ ವೆಚ್ಚಗಳನ್ನು ದೂರವಿಡುವುದರಿಂದ ಉಳಿತಾಯ ಹಾಗೂ ಲಾಭಗಳು ಸುಧಾರಿಸುತ್ತವೆ.
ಕನ್ಯಾರಾಶಿ
ತಕ್ಷಣವೇ ಹೊಸ ಸಂಬಂಧವನ್ನು ರೂಪಿಸಿದ್ದರೆ ಅದರ ಮೇಲೆ ನಂಬಿಕೆ ಇಡಬೇಡಿ. ಶತ್ರುಗಳು ನಿಮ್ಮ ಬೆಂಬಲದಿಂದ ಲಾಭ ಪಡೆಯುತ್ತಾರೆ. ನಿಮ್ಮ ಬಯಕೆಗಳು ಪುಣ್ಯ ಹಾಗೂ ಧಾರ್ಮಿಕ ಕಾರ್ಯಗಳಿಂದ ಹೆಚ್ಚಾಗುತ್ತವೆ. ಸಮಾಜ, ಕುಟುಂಬ ಮತ್ತು ನಿಮ್ಮ ಕೌಶಲ್ಯಗಳಿಗೆ ವ್ಯವಹಾರದಿಂದ ಮೆಚ್ಚಿಗೆ ಪಡೆಯುತ್ತವೆ. ಪ್ರೇಮಿಗಳ ಬಗ್ಗೆ ಮಾತನಾಡುವುದಿದ್ದರೆ, ಅವರಿಗೂ ಸಮಯ ಧನಾತ್ಮಕವಾಗಿರುತ್ತದೆ. ಆದಾಗ್ಯೂ, ಸಂಗಾತಿಯ ಅನುಮಾನಕರ ನಡೆಯಿಂದ ಕೆಲವು ಸಂಬಂಧಗಳು ತೊಂದರೆಗೊಳಗಾಗಬಹುದು ಮತ್ತು ಇಬ್ಬರೂ ಕಡಿಮೆ ಸಮಯವನ್ನು ಕಳೆಯುತ್ತೀರಿ. ಆದಾಗ್ಯೂ, ಸನ್ನಿವೇಶವನ್ನು ನಿಯಂತ್ರಣದಲ್ಲಿ ಇಡಬಹುದು. ಅನುಮಾನ ಪಟ್ಟು ವಾದ ಮಾಡುವ ಮೊದಲು ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಯೋಚಿಸಿ. ಈ ವರ್ಷದಲ್ಲಿ ಹಲವು ಪ್ರಯಾಣವನ್ನು ನಿಮಗಾಗಿ ಯೋಜಿಸಲಾಗಿದೆ. ಈ ಪ್ರಯಾಣವೂ ನಿಮಗೆ ಲಾಭ ತಂದು ಕೊಡುತ್ತದೆ. ವ್ಯಾಪಾರಿಗಳಿಗೆ ವ್ಯಾಪಾರ ಉದ್ದೇಶಕ್ಕಾಗಿ ವಿದೇಶಕ್ಕೆ ಪ್ರಯಾಣಿಸುವ ಅವಕಾಶವನ್ನು ಪಡೆಯುತ್ತಾರೆ. ನಿಮ್ಮ ಆರೋಗ್ಯದ ವಿಚಾರದಲ್ಲಿ ನಿಶ್ಚಿಂತರಾಗಿರುವಂತಿಲ್ಲ. ಸಾತ್ವಿಕ ಪಥ್ಯ ಮತ್ತು ನಿರಂತರ ಯೋಗದಿಂದ ಎಲ್ಲ ಸಮಸ್ಯೆಗಳನ್ನೂ ನಿವಾರಿಸಬಹುದು. ವರ್ಷಾಂತ್ಯದಲ್ಲಿ ಆರೋಗ್ಯ ಉತ್ತಮವಾಗುತ್ತದೆ ಮತ್ತು ನಿಮ್ಮ ಕೆಲಸದ ದಕ್ಷತೆಯೂ ಹೆಚ್ಚುತ್ತದೆ.
ತುಲಾ
ನೀವು ಕೆಲವು ಹೊಸ ಕೆಲಸಗಳಿಗೆ ಯೋಜನೆ ಮಾಡುತ್ತೀರಿ, ಇದು ಯಶಸ್ವಿಯಾಗುತ್ತದೆ. ಗ್ಯಾಂಬ್ಲಿಂಗ್, ಲಾಟರಿ ಇತ್ಯಾದಿಯಂಥ ಉತ್ತಮವಲ್ಲದ ಚಟುವಟಿಕೆಗಳಿಂದ ದೂರವಿರಿ; ಇಲ್ಲವಾದರೆ ನೀವು ಸಮಸ್ಯೆಯನ್ನು ಎದುರಿಸಬೇಕಾದೀತು. ಸೆಪ್ಟೆಂಬರ್ ನಂತರ ಎಲ್ಲದರಲ್ಲೂ ಅದೃಷ್ಟ ನಿಮ್ಮನ್ನು ಹುಡುಕಿ ಬರುತ್ತದೆ. ನೀವು ರಾಜಕೀಯದಲ್ಲಿದ್ದರೆ, ನಿಮ್ಮ ಕೀರ್ತಿ ಎಲ್ಲೆಡೆ ಹರಡುತ್ತದೆ. ಹೊಸ ಸ್ನೇಹ ನಿಮಗೆ ಖುಷಿ ನೀಡುತ್ತದೆ. ಅಕ್ಟೋಬರ್ನಿಂದ ನವೆಂಬರ್ವರೆಗೆ ಎಚ್ಚರಿಕೆಯಿಂದ ಮಾಡಿ. ಇಲ್ಲವಾದರೆ ನೀವು ಕೆಲವು ಉತ್ತಮ ಅವಕಾಶಗಳನ್ನು ಕಳೆದುಕೊಳ್ಳಬಹುದು. ಹಲವು ಹೊಸ ಸಂಬಂಧಗಳು ರೂಪುಗೊಳ್ಳುತ್ತವೆ ಮತ್ತು ಹೊಸ ಸುದ್ದಿ ನಿಮ್ಮ ಒತ್ತಡವನ್ನು ನಿವಾರಿಸುತ್ತದೆ. ವೇದ ಜ್ಯೋತಿಷಶಾಸ್ತ್ರದ 2017 ರ ರಾಶಿ ಭವಿಷ್ಯದಪ್ರಕಾರ, ಆದಾಯದ ಹೊಸ ಮೂಲಗಳೂ ನಿಮ್ಮದಾಗುತ್ತವೆ. ಹಾಗೆಯೇ, ನಿಮ್ಮ ಆಸಕ್ತಿಯು ಹೊಸ ವಿಚಾರಗಳಿಗೆ ಹರಿಯುತ್ತದೆ. ದೀರ್ಘ ಪ್ರಯಾಣವನ್ನು ದೂರವಿಡಿ.
ವೃಶ್ಚಿಕ
ಸಣ್ಣ ಉದ್ಯಮದಿಂದಲೂ ಉತ್ತಮ ಲಾಭವನ್ನು ಪಡೆಯುತ್ತೀರಿ. ವಿದೇಶಕ್ಕೆ ಪ್ರಯಾಣಿಸಲು ತುಂಬಾ ಕಡಿಮೆ ಅವಕಾಶವಿರುತ್ತದೆ. ಆದರೆ, ಕೆಲಸಕ್ಕೆ ಸಂಬಂಧಿಸಿದಂತೆ ಸಣ್ಣ ಪ್ರವಾಸಗಳನ್ನು ನೀವು ಮಾಡುತ್ತೀರಿ. ವರ್ಷದ ಆರಂಭದಲ್ಲಿ ಪ್ರೇಮ ವಿಚಾರದಲ್ಲಿ ಸಮಸ್ಯೆ ಎದುರಿಸಿದರೆ, ಚಿಂತಿಸಬೇಡಿ. ನಿಮ್ಮ ಪ್ರೇಮ ಜೀವನದಲ್ಲಿ ಸಮಸ್ಯೆಯಿಲ್ಲ ಎಂದು ರಾಶಿ ಹೇಳುತ್ತದೆ; ನೀವೆಣಿಸಿದಂತೆಯೇ ಎಲ್ಲವೂ ನಡೆಯುತ್ತದೆ. ಸಂಬಂಧಗಳಲ್ಲಿ ತಪ್ಪು ತಿಳುವಳಿಕೆ ಇದ್ದರೆ, ಇದನ್ನು ಪರಿಹರಿಸಿಕೊಂಡರೆ ಶೀಘ್ರ ನಿಮಗೆ ಲಾಭ ಉಂಟಾಗುತ್ತದೆ. ನಿಮ್ಮ ಆಹಾರದ ಮೇಲೆ ವಿಶೇಷ ಗಮನವಿರಲಿ. ಇದು ನಿಮ್ಮ ಆರೋಗ್ಯಕ್ಕೆ ಅತ್ಯಂತ ಪ್ರಮುಖ. ನಿಮ್ಮ ಜೀವನಶೈಲಿಯ ಸುಧಾರಣೆಗೆ ನೀವು ಪ್ರಯತ್ನಿಸಬೇಕಿದೆ. ಹೃದಯ ಮತ್ತು ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ನಿಮ್ಮನ್ನು ಎದುರಿಸಬಹುದು. ಆದಾಗ್ಯೂ, ಇದು ತುಂಬಾ ಕಡಿಮೆ ಸಮಯದವರೆಗೆ ಇರುತ್ತದೆ.
ಧನು ರಾಶಿ
ನಿಮ್ಮ ಪ್ರೇಮ ಜೀವನದಲ್ಲಿ ಉತ್ತಮ ಸಮತೋಲನ ಕಾಯ್ದುಕೊಳ್ಳಿ. ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಿ. ವಿದ್ಯಾರ್ಥಿಗಳ ಬಗ್ಗೆ ಮಾತನಾಡುವುದಾದರೆ, ಈ ವರ್ಷ ಉತ್ತಮವಾಗಿರುತ್ತದೆ ಮತ್ತು ಅಧ್ಯಯನ, ಬ್ಯಾಂಕಿಂಗ್ ಮತ್ತು ನಿರ್ವಹಣೆ ವಿಚಾರದಲ್ಲಿ ಉತ್ತಮವಾಗಿದೆ. ನೀವು ಸ್ವಲ್ಪ ಕಠಿಣ ಪರಿಶ್ರಮವಹಿಸಿದರೂ, ಇದರ ಸಂಪೂರ್ಣ ಫಲಿತಾಂಶವನ್ನು ನೀವು ಪಡೆಯುತ್ತೀರಿ. ನಿಮ್ಮ ಜತೆ ಶಿಕ್ಷಕರು ಖುಷಿಯಾಗಿರುತ್ತಾರೆ ಮತ್ತು ಶಿಕ್ಷಣದಲ್ಲಿ ನೀವು ಯಶಸ್ವಿಯಾಗುತ್ತೀರಿ. ಉದ್ಯೋಗಿಗಳಿಗೆ ಈ ವರ್ಷ ಉತ್ತಮವಾಗಿದೆ. ಯಾವ ಕ್ಷೇತ್ರದಲ್ಲಿ ನೀವು ಕೆಲಸ ಮಾಡುತ್ತಿದ್ದರೂ, ಬೆಂಬಲ, ಪ್ರಶಂಸೆಗಳು ನಿಮ್ಮನ್ನರಸಿ ಬರುತ್ತದೆ.ಮ್ಮ ಆಸಕ್ತಿಯು ಹೊಸ ವಿಚಾರಗಳಿಗೆ ಹರಿಯುತ್ತದೆ. ದೀರ್ಘ ಪ್ರಯಾಣವನ್ನು ದೂರವಿಡಿ. ನಿಮ್ಮ ಪ್ರೇಮಜೀವನದ ಬಗ್ಗೆ ಮಾತನಾಡುವುದಾದರೆ, ಸಂಬಂಧ ಗಟ್ಟಿಯಾಗುತ್ತದೆ ಮತ್ತು ನಿಮ್ಮ ಪ್ರೀತಿಪಾತ್ರರರು ನಿಮ್ಮನ್ನು ತುಂಬಾ ಬೆಂಬಲಿಸುತ್ತಾರೆ. ನಿಮ್ಮ ಕೆಲಸವು ಬೆಳವಣಿಗೆಯ ಅವಕಾಶವನ್ನು ಪಡೆಯುತ್ತದೆ. ತಡೆಹಿಡಿಯಲ್ಪಟ್ಟ ಹಣವನ್ನು ನೀವು ಸ್ವೀಕರಿಸುವುದರಿಂದ ನಿಮ್ಮ ಚಿಂತೆ ನಿವಾರಣೆಯಾಗುತ್ತದೆ. ಶಾಂತಿ ಮತ್ತು ಸೌಹಾರ್ದತೆ ನಿಮ್ಮ ಕುಟುಂಬದಲ್ಲಿ ನೆಲೆಸುತ್ತದೆ.
ಮಕರ
ಮನೋಭಾವ ಬದಲಿಸಿಕೊಳ್ಳಿ, ಶಿಸ್ತನ್ನು ರೂಢಿಸಿಕೊಳ್ಳಿ, ಯೋಜನೆ ರೂಪಿಸಿಕೊಳ್ಳಿ, ಅಂದುಕೊಂಡಂತೆ ಎಲ್ಲ ಕೆಲಸಗಳನ್ನು ನಿಭಾಯಿಸಿ. ಹೊಸ ಕಲಿಕೆಯೆಂಬುದು ಯಾರಪ್ಪನ ಸ್ವತ್ತಲ್ಲ. ಪ್ರಯತ್ನಪಟ್ಟರೆ ಎಲ್ಲವೂ ಹಿಡಿತಕ್ಕೆ ಬರುತ್ತದೆ. ಕೆಲವರು ನಿಮ್ಮ ಕೆಲಸ ಕೆಡಿಸಲು ಹೊಂಚುಹಾಕುತ್ತಿರುತ್ತಾರೆ, ಎಚ್ಚರದಿಂದಿರಿ. ಅಂತಿಮವಾಗಿ ಗೆಲುವು ಮಾತ್ರ ನಿಮ್ಮದೆ. ಮೀನ ಮಾಡಿದ ಖರ್ಚುವೆಚ್ಚದ ಲೆಕ್ಕ ಅಚ್ಚುಕಟ್ಟಾಗಿ ನೀಡಿ ಜಗತ್ತಿನಲ್ಲಿ ನಾನೊಬ್ಬನೇ ದುಡಿಯುತ್ತಿದ್ದೇನೆ, ಇತರರು ಕೆಲಸಕ್ಕೆ ಬಾರದವರು ಎಂಬ ಮನೋಭಾವ ನಿಮಗೆ ಒಳ್ಳೆಯದಲ್ಲ. ಗದರಿ ಯಾರಾದರೂ ಹೇಳಿದರೆ, ಅದರ ಹಿಂದೆ ಕಳಕಳಿ ಇರುತ್ತದೆ ಎಂದು ತಿಳಿಯುವಷ್ಟು ಪ್ರಬುದ್ಧತೆ ನಿಮ್ಮಲ್ಲಿರಲಿ. ಸಂಗಾತಿ ಹೇಳಿದ್ದೆಲ್ಲ ಸರ್ವಸ್ವ ಎಂದು ತಿಳಿಯುವುದು ಮೂರ್ಖತನ ಎಂಬುದು ನಿಮಗೆ ಕ್ರಮೇಣ ಅರಿವಿಗೆ ಬರಲಿದೆ. ಜವಾಬ್ದಾರಿ ನಿಭಾಯಿಸುವ ಭರದಲ್ಲಿ ಸಾಮಾಜಿಕ ಜೀವನ, ಬಂಧುಗಳನ್ನು ಮರೆಯಬೇಡಿ. ಏನೇ ಆಗ್ಲಿ ಬಿಡಿ, ಅದೃಷ್ಟ ಮಾತ್ರ ನಿಮ್ಮ ಕೈಬಿಡಲ್ಲ.
ಕುಂಭರಾಶಿ
ವೈಯಕ್ತಿಕ ಸಂಬಂಧಗಳನ್ನು ಉತ್ತಮವಾಗಿಡಲು, ನೀವು ಪರಸ್ಪರ ಅರ್ಥ ಮಾಡಿಕೊಳ್ಳಬೇಕು. ಈ ವರ್ಷದಲ್ಲಿ ತಾಯಿಯೊಂದಿಗಿನ ಸಂಬಂಧ ಉತ್ತಮವಾಗಿರಬೇಕು. ನಿತ್ಯ ಜೀವನದಲ್ಲಿ ತುಂಬಾ ಬ್ಯುಸಿಯಾಗಿದ್ದರೆ, ನಿಮ್ಮ ಜೀವನ ಸಂಗಾತಿಗೆ ಹೆಚ್ಚು ಸಮಯ ನೀಡಲಾಗದು. ಇವು ನಿಮ್ಮ ಸಂಬಂಧ ಹಳಸಲು ಕಾರಣವಾಗಬಹುದು.ಅತಿಯಾದ ವೆಚ್ಚದಿಂದ ಭವಿಷ್ಯದಲ್ಲಿನ ಸಮಸ್ಯೆಗಳನ್ನು ನೀವು ಎದುರಿಸಬೇಕಾದೀತು. ಉಳಿಸಿದ ಹಣ ಮುಂದಿನ ದಿನಗಳಲ್ಲಿ ನಿಮಗೆ ಲಾಭ ತಂದುಕೊಡಲಿದೆ. ವರ್ಷದ ಎರಡನೇ ಭಾಗದಲ್ಲಿ, ನಿಮ್ಮ ಹಣದ ಬಗ್ಗೆ ಎಚ್ಚರ ವಹಿಸಬೇಕು. ಆಸ್ತಿಗೆ ಸಂಬಂಧಿಸಿದ ವಿಚಾರದಲ್ಲಿ ನೀವು ಲಾಭ ಪಡೆಯುತ್ತೀರಿ. ವ್ಯಾಪಾರಿಗಳು ಮತ್ತು ಅವಿರಗೆ ಸಂಬಂಧಿಸಿದ ಜನರಿಗೆ ಈ ಸಮಯ ಅನುಕೂಲಕರ ಎಂದು ಭಾವಿಸಲಾಗಿದೆ. ಪಾಲುದಾರಿಕೆಯಲ್ಲಿ ಪ್ರಾಮಾಣಿಕವಾಗಿರುವಂತೆ ಸೂಚಿಸಲಾಗಿದೆ; ಇಲ್ಲವಾದರೆ ನೀವು ನಷ್ಟ ಅನುಭವಿಸುವ ಸಾಧ್ಯತೆಯಿದೆ. ವರ್ಷದ ಎರಡನೇ ಭಾಗದಲ್ಲಿ ವ್ಯಾಪಾರದಲ್ಲಿ ಸ್ವಲ್ಪ ಸಮಸ್ಯೆ ತಲೆದೋರಬಹುದು. ಆದರೆ, ಇದು ತುಂಬಾ ಕಡಿಮೆ ಸಮಯದವರೆಗೆ ಇರುತ್ತದೆ.
ಮೀನರಾಶಿ
ನಿಮ್ಮ ಮನೆಯನ್ನು ಬದಲಿಸುವುದು ಅಥವಾ ಸ್ಥಳಾಂತರಗೊಳ್ಳುವ ಸಾಧ್ಯತೆಯೂ ಇದೆ. ಉದ್ಯೋಗ ಮಾಡುತ್ತಿರುವವರು ವರ್ಗಾವಣೆಗೊಳ್ಳುವ ಸಾಧ್ಯತೆಯೂ ಇದೆ. ಗುರು ನಿಮ್ಮ ರಾಶಿಯಿಂದ ನಾಲ್ಕನೇ ಮನೆಯಲ್ಲಿ ಸಿಂಹ ರಾಶಿಯಲ್ಲಿದೆ. ಇದು ನಿಮ್ಮ ನಿತ್ಯದ ಆದಾಯದಲ್ಲಿ ಏರಿಕೆಯಾಗುವುದನ್ನು ಸೂಚಿಸುತ್ತದೆ. ನಿಮ್ಮ ತಾಯಿಯ ಕಡೆಯಲ್ಲಿ ಶುಭ ದಿನದ ಸಂಭ್ರಮಾಚರಣೆ ನಡೆಸುವ ಸಾಧ್ಯತೆಯೂ ಕಾಣಿಸುತ್ತದೆ. ನೀವು ಆಗ ನಿಮ್ಮ ಶತ್ರುಗಳನ್ನು ಮೀರಿ ನಡೆಯುತ್ತೀರಿ ಮತ್ತು ಆರೋಗ್ಯದ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ನಿಮ್ಮ ಚಟುವಟಿಕೆಯ ಕ್ಷೇತ್ರದಲ್ಲಿ ನೀವು ಯಶಸ್ವಿಯಾಗಿ ಮುಂದುವರಿಯುತ್ತೀರಿ ಎಂದೂ ಗಣೇಶ ಮುನ್ಸೂಚನೆ ನೀಡುತ್ತಾನೆ. 2017ರ ಜನವರಿ ಅಂತ್ಯದಲ್ಲಿ ರಾಹು ನಿಮ್ಮ ರಾಶಿಯ 5ನೇ ಮನೆಯಿಂದ ಹೊರಗೆ ಚಲಿಸುವ ಕಾರಣ, ಪ್ರೀತಿ ಸಂಬಂಧಗಳು ಮತ್ತು ನಿಮ್ಮ ಮಕ್ಕಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಕಡಿಮೆ ಆತಂಕವನ್ನು ಅನುಭವಿಸುತ್ತೀರಿ. ಈ ಗ್ರಹಗಳ ಹಾದು ಹೋಗುವಿಕೆ ವಿದ್ಯಾರ್ಥಿಗಳಿಗೆ ಪ್ರಗತಿಪರ ಮುನ್ನಡೆಯನ್ನೂ ಸೂಚಿಸುತ್ತದೆ. ಹಾಗಿದ್ದರೂ ನಾಲ್ಕನೇ ಮನೆಯಲ್ಲಿ ರಾಹುವಿನ ಹಾದು ಹೋಗುವಿಕೆ ಅವಿಶ್ರಾಂತಿ ಮತ್ತು ಸಿಟ್ಟಿಗೆ ಕಾರಣವಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.