Publish Date: Fri, 29 Nov 2019 (08:46 IST)
Updated Date: Fri, 29 Nov 2019 (08:49 IST)
ಬೆಂಗಳೂರು: ನೀವು ಹುಟ್ಟಿದ ತಿಂಗಳಿಗೆ ಅನುಗುಣವಾಗಿ ನಿಮ್ಮ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳಬಹುದು. ಆಗಸ್ಟ್ ನಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ತಿಳಿದುಕೊಳ್ಳೋಣ.
ಆಗಸ್ಟ್
ಸಾಮಾಜಿಕವಾಗಿ ಕಾಳಜಿಯುಳ್ಳ, ಸಮಾಜಕ್ಕಾಗಿ ದುಡಿಯುವ ವ್ಯಕ್ತಿ. ಹೆಚ್ಚಿಗೆ ಕೆಲಸ ಮಾಡಿ ಇಲ್ಲದ ಕಾಯಿಲೆ ಮೈಮೇಲೆ ಎಳೆದುಕೊಳ್ಳುತ್ತೀರಿ. ಆದರೆ ಬೇರೆಯವರಿಗೆ ಸ್ಪೂರ್ತಿ ತುಂಬುತ್ತೀರಿ. ಹಣಕಾಸಿಗೆ ತೊಂದರೆ ಇರೋದಿಲ್ಲ. ಇತರರನ್ನು ನಗಿಸುವ ಗುಣ ಹೊಂದಿರುತ್ತೀರಿ. ಯಾರಿಗೂ ಹೆದರಲ್ಲ, ನಾಯಕತ್ವದ ಗುಣವಿರುತ್ತದೆ. ಆದರೆ ಸುಲಭವಾಗಿ ಕೋಪ ಮಾಡಿಕೊಳ್ಳುತ್ತೀರಿ. ಬಹಳ ಹೊಟ್ಟೆ ಉರಿಯೂ ಇರುತ್ತದೆ. ಸ್ವತಂತ್ರವಾಗಿ ಆಲೋಚನೆ, ನಿರ್ಧಾರ ತೆಗೆದುಕೊಳ್ಳುತ್ತೀರಿ. ಆದರೆ ವಿಶ್ವಾಸಾರ್ಹರು, ರೊಮ್ಯಾಂಟಿಕ್ ಆಗಿರುತ್ತಾರೆ.