Publish Date: Tue, 01 Sep 2020 (08:59 IST)
Updated Date: Tue, 01 Sep 2020 (09:01 IST)
ಬೆಂಗಳೂರು: ಎಲ್ಲಾ ರಾಶಿಯವರಿಗೂ ಪ್ರತ್ಯೇಕ ಗುಣ ಸ್ವಭಾವಗಳಿರುತ್ತವೆ. ಆದರೆ ಪ್ರತಿಯೊಂದು ರಾಶಿಯವರೂ ಒಂದೊಂದು ವಿಚಾರಕ್ಕೆ ಇನ್ನೊಬ್ಬರಿಗೆ ಇಷ್ಟವಾಗುತ್ತಾರೆ. ಇಂದಿನಿಂದ ಯಾವ ರಾಶಿಯವರಲ್ಲಿ ಯಾವ ಒಳ್ಳೆಯ ಗುಣ ಸ್ವಭಾವಗಳಿರುತ್ತವೆ ನೋಡೋಣ.
ಮೀನ
ಈ ರಾಶಿಯವರು ತಮ್ಮ ಗೆಳೆಯರನ್ನು ಆಯ್ಕೆ ಮಾಡುವಾಗಲೂ ತುಂಬಾ ಎಚ್ಚರಿಕೆಯಿಂದ ಆರಿಸುತ್ತಾರೆ. ಬೇಗನೇ ದಾರಿ ತಪ್ಪುವವರಲ್ಲ. ಆದರೆ ಗೆಳೆಯ ಅಂತ ಒಮ್ಮೆ ಒಪ್ಪಿಕೊಂಡು ಬಿಟ್ಟರೆ ಅವರ ಜತೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ತುಂಬಾ ಕ್ರಿಯಾತ್ಮಕವಾಗಿ ಯೋಚಿಸಬಲ್ಲರು. ಸ್ವಾರ್ಥರಹಿತ ಸ್ವಭಾವದವರು. ವೈಯಕ್ತಿಕ ಖುಷಿಗಿಂತ ಬೇರೆಯವರ ಖುಷಿಯೇ ಮುಖ್ಯ ಎನ್ನುವವರು.