ಬೆಂಗಳೂರು: ಅವಿವಾಹಿತ ಯುವತಿಯರು ಉತ್ತಮ ವರನ ಅನ್ವೇಷಣೆಯಲ್ಲಿರುವ ಕನ್ಯೆಯರು ಪ್ರತಿನಿತ್ಯ ದೀಪ ಬೆಳೆಗಿ ದೇವಿಯನ್ನು ಆರಾಧಿಸುವುದರಿಂದ ಅವರಿಗೆ ಬೇಗನೇ ಕಂಕಣ ಬಲ ಕೂಡಿಬರುತ್ತದೆ ಎಂಬ ನಂಬಿಕೆಯಿದೆ.
ದೀಪದಲ್ಲಿ ರಾಜರಾಜೇಶ್ವರಿ ದೇವಿಯ ಸಾನಿಧ್ಯವಿರುತ್ತದಂತೆ. ಈಕೆ ದುರ್ಗೆ, ಲಕ್ಷ್ಮಿ ಮತ್ತು ಸರಸ್ವತಿಯ ಅಂಶವನ್ನೂ ಹೊಂದಿರುತ್ತಾಳೆ. ಹಾಗಾಗಿ ದೀಪಲಕ್ಷ್ಮಿಯನ್ನು ಪ್ರತಿನಿತ್ಯ ಅರಿಶಿನ, ಕುಂಕುಮ ಮತ್ತು ಹೂವುಗಳಿಂದ ಅಲಂಕರಿಸಿ ಪೂಜಿಸುವುದರಿಂದ ವಿವಾಹ ಮಾತ್ರವಲ್ಲ, ಎಲ್ಲಾ ರೀತಿಯ ಅಷ್ಟೈಶ್ವರ್ಯಗಳೂ ಸಿದ್ಧಿಸಿ ದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಎಂಬ ನಂಬಿಕೆಯಿದೆ.