ಬೆಂಗಳೂರು: ಭಗವಾನ್ ಶಿವನನ್ನು ನಾವು ತ್ರಿನೇತ್ರ, ಕರ್ಪೂರಗೌರ ಮತ್ತು ಮಹಾದೇವ ಎಂಬ ಹೆಸರಿನಿಂದ ಕರೆಯುತ್ತೇವೆ. ಈ ಮೂರೂ ಹೆಸರುಗಳ ಹಿಂದಿರುವ ಅರ್ಥ ನಿಮಗೆ ಗೊತ್ತಾ?
ಮಹದೇವ ಎಂದರೆ ಶಿವನಲ್ಲಿ ಪರಿಪೂರ್ಣ ಪಾವಿತ್ರ್ಯ ಮತ್ತು ಜ್ಞಾನವಿದೆ. ಅದಕ್ಕಾಗಿ ಅವನನ್ನು ಮಹಾದೇವ ಎನ್ನುತ್ತೇವೆ. ಅವನ ಉಪಾಸನೆ ಮಾಡಿದರೆ ನಾವೂ ಪರಿಪೂರ್ಣರಾಗಬಹುದು.
ಇನ್ನು, ಶಂಕರನನ್ನು ತ್ರಿನೇತ್ರ ಎಂದೂ ಕರೆಯುತ್ತಾರೆ. ಭೂತಕಾಲ, ವರ್ತಮಾನ ಕಾಲ ಮತ್ತು ಭವಿಷ್ಯತ್ ಕಾಲವನ್ನು ನೋಡಬಲ್ಲವರಿಗೆ ತ್ರಿನೇತ್ರ ಎನ್ನಲಾಗುತ್ತದೆ. ಕರ್ಪೂರಗೌರ ಎಂದರೆ ಶಿವನ ಬಣ್ಣ ಕರ್ಪೂರದಂತಿದೆ. ಆದುದರಿಂದ ಅವನನ್ನು ಕರ್ಪೂರಗೌರ ಎಂದು ಕರೆಯುತ್ತೇವೆ.