ಬೆಂಗಳೂರು: ಇಂದು ಗೌರಿ ಹಬ್ಬದ ಸಂಭ್ರಮ. ಹೆಂಗಳೆಯರು ಇಂದು ತಮ್ಮ ಮುತ್ತೈದೆ ಭಾಗ್ಯ ಗಟ್ಟಿಯಾಗಿರಲೆಂದು ಬಾಗಿನ ಕೊಟ್ಟು ಸುಮಂಗಲಿಯರ ಆಶೀರ್ವಾದ ಪಡೆಯುತ್ತಾರೆ. ಇಂದು ಬಾಗಿನ ಕೊಡುವುದು ಯಾಕೆ ಅದರ ಅರ್ಥವೇನು ಎಂದು ನಿಮಗೆ ಗೊತ್ತಾ?
ಮೊರದ ಬಾಗಿನಕ್ಕೆ ಸಂಸ್ಕೃತದಲ್ಲಿ ವೇಣು ಪಾತ್ರ ಎಂದು ಕರೆಯು6ತ್ತಾರೆ. ಮೊರದ ಬಾಗಿನದಲ್ಲಿ ನಾರಾಯಣನ ಅಂಶ ಇರುತ್ತದೆ. ಮೊರವೆಂಬ ನಾರಾಯಣ ಮತ್ತು ಮೊರದ ಒಳಗೆ ತುಂಬಿಡುವ ವಿವಿಧ ಧಾನ್ಯ, ಧವಸಗಳ ಮೂಲಕ ನೆಲೆಯಾಗಿರುವ ಲಕ್ಷ್ಮೀ ದೇವಿಯ ರೀತಿ ದಂಪತಿಗಳು ಲಕ್ಷ್ಮೀ-ನಾರಾಯಣರ ರೀತಿ ಇರಲಿ ಎಂಬ ಕಾರಣಕ್ಕೆ ಮತ್ತು ಸುಮಂಗಲಿ ಭಾಗ್ಯ ಯಾವಾಗಲೂ ಇರಲಿ ಎಂದು ಸುಮಂಗಲೀ ದೇವತೆಯರ ಸಾಕ್ಷಿಯಾಗಿ ಭಾಗಿನ ಕೊಡಲಾಗುತ್ತದೆ.
ಮದುವೆಯಾದ ಹೆಣ್ಣು 16 ಸುಮಂಗಲಿಯರಿಗೆ ಸಮವಂತೆ. ಸೀರೆಯ ಸೆರಗಿನಲ್ಲಿ ಮಹಾಲಕ್ಷ್ಮಿಯು ಸೌಭಾಗ್ಯದ ರೂಪದಲ್ಲಿ ನೆಲೆಸಿರುತ್ತಾಳಂತೆ. ಇದಕ್ಕೇ ಸೆರಗು ಹಿಡಿದು ಮೊರದ ಬಾಗಿನ ಕೊಡಲಾಗುತ್ತದೆ.