Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗೌರಿ ಹಬ್ಬಕ್ಕೆ ಬಾಗಿನ ಕೊಡುವುದರ ಅರ್ಥವೇನು?

ಗೌರಿ ಹಬ್ಬಕ್ಕೆ ಬಾಗಿನ ಕೊಡುವುದರ ಅರ್ಥವೇನು?
ಬೆಂಗಳೂರು , ಶುಕ್ರವಾರ, 21 ಆಗಸ್ಟ್ 2020 (08:45 IST)
ಬೆಂಗಳೂರು: ಇಂದು ಗೌರಿ ಹಬ್ಬದ ಸಂಭ್ರಮ. ಹೆಂಗಳೆಯರು ಇಂದು ತಮ್ಮ ಮುತ್ತೈದೆ ಭಾಗ್ಯ ಗಟ್ಟಿಯಾಗಿರಲೆಂದು ಬಾಗಿನ ಕೊಟ್ಟು ಸುಮಂಗಲಿಯರ ಆಶೀರ್ವಾದ ಪಡೆಯುತ್ತಾರೆ. ಇಂದು ಬಾಗಿನ ಕೊಡುವುದು ಯಾಕೆ ಅದರ ಅರ್ಥವೇನು ಎಂದು ನಿಮಗೆ ಗೊತ್ತಾ?


ಮೊರದ ಬಾಗಿನಕ್ಕೆ ಸಂಸ್ಕೃತದಲ್ಲಿ ವೇಣು ಪಾತ್ರ ಎಂದು ಕರೆಯು6ತ್ತಾರೆ. ಮೊರದ ಬಾಗಿನದಲ್ಲಿ ನಾರಾಯಣನ ಅಂಶ ಇರುತ್ತದೆ. ಮೊರವೆಂಬ ನಾರಾಯಣ ಮತ್ತು ಮೊರದ ಒಳಗೆ ತುಂಬಿಡುವ ವಿವಿಧ ಧಾನ್ಯ, ಧವಸಗಳ ಮೂಲಕ ನೆಲೆಯಾಗಿರುವ ಲಕ್ಷ್ಮೀ ದೇವಿಯ ರೀತಿ ದಂಪತಿಗಳು ಲಕ್ಷ್ಮೀ-ನಾರಾಯಣರ ರೀತಿ ಇರಲಿ ಎಂಬ ಕಾರಣಕ್ಕೆ ಮತ್ತು ಸುಮಂಗಲಿ ಭಾಗ್ಯ ಯಾವಾಗಲೂ ಇರಲಿ ಎಂದು ಸುಮಂಗಲೀ ದೇವತೆಯರ ಸಾಕ್ಷಿಯಾಗಿ ಭಾಗಿನ ಕೊಡಲಾಗುತ್ತದೆ.

ಮದುವೆಯಾದ ಹೆಣ್ಣು 16 ಸುಮಂಗಲಿಯರಿಗೆ ಸಮವಂತೆ. ಸೀರೆಯ ಸೆರಗಿನಲ್ಲಿ ಮಹಾಲಕ್ಷ್ಮಿಯು ಸೌಭಾಗ್ಯದ ರೂಪದಲ್ಲಿ ನೆಲೆಸಿರುತ್ತಾಳಂತೆ. ಇದಕ್ಕೇ ಸೆರಗು ಹಿಡಿದು ಮೊರದ ಬಾಗಿನ ಕೊಡಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೌರಿ ಪೂಜೆ ಮಾಡುವಾಗ ಈ ಮಂತ್ರ ಜಪಿಸಿದರೆ ಶಿವಪಾರ್ವತಿಯ ಅನುಗ್ರಹ ಪ್ರಾಪ್ತಿ