Publish Date: Tue, 27 Oct 2020 (07:39 IST)
Updated Date: Tue, 27 Oct 2020 (07:41 IST)
ಬೆಂಗಳೂರು: ನಮ್ಮ ಮನೆಯ ಮಲಗುವ ಕೋಣೆ ಅಥವಾ ಬೆಡ್ ರೂಂನಲ್ಲಿ ಕೆಲವೊಂದು ವಸ್ತುಗಳನ್ನಿಟ್ಟುಕೊಳ್ಳುವುದು ನಮ್ಮ ಮನೆಯ ಶಾಂತಿ-ಅಶಾಂತಿಗೆ ಕಾರಣವಾಗುತ್ತದೆ ಎಂದರೆ ನೀವು ನಂಬಲೇಬೇಕು.
ಹೆಚ್ಚಿನವರಿಗೆ ಈ ಅಭ್ಯಾಸವಿದ್ದೇ ಇರುತ್ತದೆ. ಒದ್ದೆ ಬಟ್ಟೆಯನ್ನು ತಂದು ಬೆಡ್ ಮೇಲೋ ಎಲ್ಲೆಂದರಲ್ಲೋ ಬಿಸಾಕುವುದು. ಇನ್ನು ಕೆಲವರು ಬೆಡ್ ರೂಂನಲ್ಲೂ ಒಂದು ಜತೆ ಚಪ್ಪಲಿ, ಇಲ್ಲವೇ ಸುಲಭವಾಗಿ ಕ್ಲೀನ್ ಮಾಡುವಾಗ ಕೈಗೆಟುಕಲೆಂದು ಪೊರಕೆ ತಂದಿಟ್ಟುಕೊಳ್ಳುತ್ತಾರೆ. ವಾಸ್ತು ಪ್ರಕಾರವಾಗಿ ನೋಡುವುದಾದರೆ ಇವೆಲ್ಲವೂ ನಿಮ್ಮ ಮನೆಯಲ್ಲಿ ಅಶಾಂತಿ ಅಥವಾ ಮನಸ್ಸಿನ ನೆಮ್ಮದಿ ಹಾಳು ಮಾಡಬಹುದು.