Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಗುರುವಾರ, 23 ಫೆಬ್ರವರಿ 2023 (08:20 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ವ್ಯಾಪಾರ, ವ್ಯವಹಾರಗಳಲ್ಲಿ ಇತರರ ವಿಶ್ವಾಸ ಗಳಿಸಲಿದ್ದೀರಿ. ಪಾರದರ್ಶಕತೆಯಿಂದ ಹಣಕಾಸಿನ ವ್ಯವಹಾರ ಮಾಡಿ. ಇಷ್ಟಮಿತ್ರರೊಂದಿಗೆ ಇಷ್ಟಭೋಜನ ಮಾಡುವ ಯೋಗ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಮಕ್ಕಳ ದೇಹಾರೋಗ್ಯ ಚಿಂತೆಗೆ ಕಾರಣವಾದೀತು. ಅನಿರೀಕ್ಷಿತ ಖರ್ಚು ವೆಚ್ಚಗಳಿಗೆ ಸಿದ್ಧರಾಗಿ. ಹಿರಿಯರ ಸಲಹೆಗಳನ್ನು ಪಾಲಿಸುವುದು ಉತ್ತಮ. ಮಾತಿನ ಮೇಲೆ ನಿಗಾ ಇರಲಿ. ದಿನದಂತ್ಯಕ್ಕೆ ನೆಮ್ಮದಿಯಾಗಲಿದೆ.

ಮಿಥುನ: ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದೀರಿ. ಕೋರ್ಟು ಕಚೇರಿ ವ್ಯವಹಾರಗಳಿಗೆ ಓಡಾಟ ನಡೆಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಕಂಡುಬರಲಿದೆ.

ಕರ್ಕಟಕ: ಹಿಂದೆ ಮಾಡಿದ್ದ ಸಾಲ ಮರು ಪಾವತಿ ಮಾಡುವ ಅನಿವಾರ್ಯತೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಒದಗಿಬರುವುದು. ಅವಿವಾಹಿತರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ತಾಳ್ಮೆಯಿರಲಿ.

ಸಿಂಹ: ಗೃಹ, ವಾಹನಾದಿ ಸೌಕರ್ಯಗಳು ಸದ್ಯದಲ್ಲೇ ನಿಮ್ಮದಾಗಲಿದೆ. ಮನಸ್ಸಿಗೆ ಉಲ್ಲಾಸ ಕೊಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಸಂದರ್ಭಕ್ಕೆ ಸರಿಯಾಗಿ ನಿರ್ಧಾರ ತೆಗೆದುಕೊಂಡರೆ ಸಮಸ್ಯೆಗಳಿಂದ ಪಾರಾಗಲಿದ್ದೀರಿ.

ಕನ್ಯಾ: ನಿಮ್ಮಲ್ಲಿರುವ ಕ್ರಿಯಾತ್ಮಕ ಯೋಜನೆಯನ್ನು ಹೊರ ತರಲಿದ್ದೀರಿ. ಹಿರಿಯರಿಗೆ ದೇವತಾ ಸ್ಥಳಗಳ ಸಂದರ್ಶನ ಯೋಗ. ಹಠಮಾರಿತನ ಮನೋಭಾವ ಇನ್ನೊಬ್ಬರಿಗೆ ಕಿರಿ ಕಿರಿಯಾದೀತು. ಕಿರು ಸಂಚಾರ ಮಾಡಲಿದ್ದೀರಿ.

ತುಲಾ: ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ಧಾರಿ ನಿಮ್ಮ ಹೆಗಲಿಗೇರಲಿದೆ. ಮಾತಿನಲ್ಲಿ ಸಹನೆ ಇರಲಿ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಹಣಕಾಸಿನ ವಿಚಾರದಲ್ಲಿ ವಂಚನೆಗೊಳಗಾಗದಂತೆ ಎಚ್ಚರಿಕೆ ವಹಿಸಿ.

ವೃಶ್ಚಿಕ: ಪಾಲುದಾರಿಕಾ ವ್ಯವಹಾರದಲ್ಲಿ ಹೆಚ್ಚಿನ ಧನ ಲಾಭವಾದೀತು. ದಾಂಪತ್ಯದಲ್ಲಿ ಅನುರಾಗ ವೃದ್ಧಿಯಾಗಲಿದೆ. ಆಸ್ತಿ ವಿಚಾರದಲ್ಲಿ ಹಿರಿಯರ ಮಧ್ಯಸ್ಥಿಕೆಯಿದ್ದರೆ ಉತ್ತಮ. ಮಕ್ಕಳಿಂದ ಸಂತೋಷದ ವಾರ್ತೆ ಕೇಳಿಬರಲಿದೆ.

ಧನು: ಮನೆಯಲ್ಲಿ ಶುಭ ಮಂಗಲ ಕಾರ್ಯನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ದೈಹಿಕವಾಗಿ ಆರೋಗ್ಯ ಕೈ ಕೊಟ್ಟರೂ ಕುಟುಂಬ ಸದಸ್ಯರ ಬೆಂಬಲವಿರಲಿದೆ. ಹಣಕಾಸಿನ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.

ಮಕರ: ನಿರೀಕ್ಷೆಗೂ ಮೀರಿ ಧನ ಸಂಪಾದನೆ ಮಾಡಿದ ತೃಪ್ತಿ ನಿಮ್ಮದಾಗಲಿದೆ. ಮನೆಯಲ್ಲಿ ಸಂತೋಷದಾಯಕ ವಾತಾವರಣವಿರಲಿದೆ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಕಂಡುಬರಲಿದೆ.

ಕುಂಭ: ಕಾರ್ಯರಂಗದಲ್ಲಿ ನಿಮ್ಮ ಮೇಲೆ ಇರುವ ವಿಶ್ವಾಸ ಹೆಚ್ಚಾಗಲಿದೆ. ಯೋಜಿತ ರೀತಿಯಲ್ಲೇ ಕೆಲಸ ನಡೆಯಲಿದೆ. ಮಹಿಳೆಯರಿಗೆ ಗೃಹ ಕೃತ್ಯಗಳಿಂದ ಬಿಡುವು ಸಿಗಲಿದೆ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.

ಮೀನ: ಕೆಲಸ ಕಾರ್ಯಗಳಲ್ಲಿ ಯಶಸ್ಸು, ಗೌರವ ವೃದ್ಧಿಯಾಗಲಿದೆ. ಮಾನಸಿಕವಾಗಿ ಕಾಡುತ್ತಿರುವ ಚಿಂತೆಯನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ಬಂಧು ಮಿತ್ರರ ಸಹಕಾರವಿರಲಿದೆ. ಹೂಡಿಕೆಗಳಿಂದ ಲಾಭ ಕಂಡುಕೊಳ್ಳಲಿದ್ದೀರಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?