Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 18 ಡಿಸೆಂಬರ್ 2022 (08:50 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ನಿಮಗೆ ಅತೀವ ಕಷ್ಟವೆನಿಸುವ ವಿಚಾರಗಳನ್ನು ಆದಷ್ಟು ಮರೆಯಲು ಪ್ರಯತ್ನಿಸುವಿರಿ. ಸಂಗಾತಿಯು ಅನಗತ್ಯವಾಗಿ ಅಪಾರ್ಥ ಮಾಡಿಕೊಳ್ಳುವಂತಾಗಲಿದೆ. ಹೊಸ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ.

ವೃಷಭ: ಉದ್ಯೋಗ, ವ್ಯವಹಾರದಲ್ಲಿ ಮುನ್ನಡೆ ಕಂಡುಬರಲಿದೆ. ವ್ಯಾವಹಾರಿಕವಾಗಿ ಹಿತ ಶತ್ರುಗಳ ಕಾಟ ಕಂಡುಬಂದೀತು. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗುವುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆಯ ಕೊರತೆಯುಂಟಾದೀತು.

ಮಿಥುನ: ಮನಸ್ಸಿನ ಭಾವನೆಗಳನ್ನು ಬಲವಂತವಾಗಿ ಅದುಮಿಟ್ಟುಕೊಳ್ಳಬೇಕಾಗುತ್ತದೆ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಇದ್ದರೆ ಆರೋಗ್ಯ ಸಮಸ್ಯೆಯಾದೀತು. ಯೋಗ್ಯ ವಯಸ್ಕರಿಗೆ ವೈವಾಹಿಕ ಪ್ರಸ್ತಾಪಗಳು ಬರಲಿವೆ.

ಕರ್ಕಟಕ: ಹೊಸ ಜನರನ್ನು ಭೇಟಿಯಾಗುವುದರಿಂದ ನಿಮ್ಮ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಪಲ್ಲಟವಾಗುವ ಸಾಧ‍್ಯತೆ. ಕಾರ್ಯನಿಮಿತ್ತ ಪರವೂರಿಗೆ ಸಂಚರಿಸಬೇಕಾದೀತು.

ಸಿಂಹ: ಬಹಳ ದಿನಗಳ ನಂತರ ಆಪ್ತರನ್ನು ಭೇಟಿಯಾದ ಸಂತೋಷ ನಿಮ್ಮದಾಗುವುದು. ಮಾತೃ ಸಮಾನರಿಂದ ನಿಮಗೆ ಅನುಕೂಲವಾದೀತು. ಕಟ್ಟಡ ಕಾಮಗಾರಿ ಕೆಲಸಗಳನ್ನು ಅನಿವಾರ್ಯವಾಗಿ ಮುಂದೂಡಲಿದ್ದೀರಿ.

ಕನ್ಯಾ: ದಾಯಾದಿ ಕಲಹಗಳಿಗೆ ಅಂತ್ಯ ಸಿಗಲಿದೆ. ಅನ್ಯರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಹಿರಿಯರ ದೇಹಾರೋಗ್ಯ ಚಿಂತೆಗೆ ಕಾರಣವಾದೀತು. ವೈಯಕ್ತಿಕ ವಿಚಾರಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ.

ತುಲಾ: ಅಧ್ಯಯನ ಶೀಲರಿಗೆ ಉನ್ನತಿಯ ಯೋಗವಿದೆ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಕ್ರಯ-ವಿಕ್ರಯಾದಿ ವ್ಯವಹಾರಗಳಲ್ಲಿ ಲಾಭವಾದೀತು. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು.

ವೃಶ್ಚಿಕ: ಇನ್ನೊಬ್ಬರ ಬಗ್ಗೆ ಅತಿಯಾಗಿ ಯೋಚನೆ ಮಾಡುವುದರಿಂದ ನಿಮ್ಮ ಮನಸ್ಸು ಹಾಳು. ಸಾಂಸಾರಿಕವಾಗಿ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲಿದ್ದೀರಿ. ಹಿರಿಯರಿಗೆ ದೇವತಾ ಕಾರ್ಯಗಳಲ್ಲಿ ಭಾಗಿಯಾಗುವ ಯೋಗ.

ಧನು: ಎಷ್ಟೇ ಕಾರ್ಯದೊತ್ತಡವಿದ್ದರೂ ನಿಮ್ಮ ಪ್ರೀತಿ ಪಾತ್ರರಿಗೆ ಸಮಯ ಮೀಸಲಿಡಲಿದ್ದೀರಿ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಮಕ್ಕಳಿಂದ ಸಂತೋಷದ ವಾರ್ತೆ ಕೇಳಿಬರಲಿದೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸುವಿರಿ.

ಮಕರ: ವೈಯಕ್ತಿಕ ಜೀವನದಲ್ಲಿ ಮಹತ್ತರ ಬದಲಾವಣೆಗಳಿಗೆ ಸಿದ್ಧರಾಗಬೇಕಾಗುತ್ತದೆ. ಕೆಳ ಹಂತದ ನೌಕರರಿಗೆ ಉದ್ಯೋಗ ನಷ್ಟದ ಭೀತಿ. ಕ್ರಿಯಾತ್ಮಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದೀರಿ. ತಾಳ್ಮೆಯಿರಲಿ.

ಕುಂಭ: ಸರಕಾರಿ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಮೇಲ್ ಹಂತದ ನೌಕರರಿಗೆ ಕಿರಿ ಕಿರಿ ಎದುರಾದೀತು. ತಾಳ್ಮೆಯಿಂದ ನಿಭಾಯಿಸಬೇಕಾಗುತ್ತದೆ. ಸಂಗಾತಿಯ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ಮೀನ: ದಾಂಪತ್ಯದಲ್ಲಿ ಅನುರಾಗ ವೃದ್ಧಿಯಾಗಲಿದೆ. ಕೌಟುಂಬಿಕವಾಗಿ ಸುಖ, ಸಮೃದ್ಧಿ ಕಂಡುಬರುವುದು. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ಮನರಂಜನೆಗಾಗಿ ಧನವ್ಯಯ ಮಾಡಲಿದ್ದೀರಿ. ದೇವತಾ ಪ್ರಾರ್ಥನೆ ಮರೆಯದಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?