ಮೇಷ: ಉದ್ಯೋಗ, ವ್ಯವಹಾರದಲ್ಲಿ ಅನಿರೀಕ್ಷಿತ ಪ್ರಗತಿ. ಧನಾರ್ಜನೆ ವಿಷಯದಲ್ಲಿ ಮುನ್ನಡೆ ಕಂಡುಬರಲಿದೆ. ನಿಮ್ಮ ಕರ್ತವ್ಯ ನಿಷ್ಠೆಗೆ ಪ್ರಶಂಸೆ ವ್ಯಕ್ತವಾಗಲಿದೆ. ಮಕ್ಕಳ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಚಿಂತೆ ಬೇಡ.
ವೃಷಭ: ಸ್ಪರ್ಧೆಗಳಲ್ಲಿ ಜಯ ಸಿಗುವುದು. ಗುರುಹಿರಿಯರೊಂದಿಗೆ ಅನಗತ್ಯ ಸಂಘರ್ಷ ಬೇಡ. ಇಷ್ಟಮಿತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ವಿವಾಹ ಭಾಗ್ಯ ಕೂಡಿಬರಲಿದೆ. ತಾಳ್ಮೆಯಿರಲಿ.
ಮಿಥುನ: ಧಾರ್ಮಿಕ ಕಾರ್ಯಗಳ ನೇತೃತ್ವ ವಹಿಸಲಿದ್ದೀರಿ. ಮಕ್ಕಳ ವಿದ್ಯಾಭ್ಯಾಸದ ವಿಚಾರವಾಗಿ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದೀರಿ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಕಾರ್ಯನಿಮಿತ್ತ ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.
ಕರ್ಕಟಕ: ವ್ಯಾಪಾರಿ ವರ್ಗದವರಿಗೆ ಆರ್ಥಿಕವಾಗಿ ಮುನ್ನಡೆ ಕಂಡುಬರಲಿದೆ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ಇಷ್ಟಮಿತ್ರರೊಂದಿಗೆ ಕಿರು ಪ್ರವಾಸ ಮಾಡುವ ಯೋಗ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.
ಸಿಂಹ: ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯುವ ಯೋಗ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ದಾಂಪತ್ಯದಲ್ಲಿ ಅನುರಾಗ ವೃದ್ಧಿಯಾಗಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗುವುದು.
ಕನ್ಯಾ: ಮನೆಯಲ್ಲಿ ಸುಖ ಸಂತೋಷ, ಅಭಿವೃದ್ಧಿ ಕಂಡುಬರಲಿದೆ. ಮಕ್ಕಳ ಸಂತೋಷದಲ್ಲಿ ಭಾಗಿಯಾಗಲಿದ್ದೀರಿ. ನೆರೆಹೊರೆಯವರ ಕಷ್ಟಗಳಿಗೆ ಸ್ಪಂದಿಸಲಿದ್ದೀರಿ. ನಿಮ್ಮ ಉದಾರತೆಯನ್ನು ದುರುಪಯೋಗ ಪಡಿಸಿಕೊಳ್ಳುವವರಿರುತ್ತಾರೆ. ಎಚ್ಚರ.
ತುಲಾ: ಹೊಸದಾಗಿ ಪರಿಚಯವಾದ ವ್ಯಕ್ತಿಗಳಿಂದ ನಿಮ್ಮ ಕಾರ್ಯಕ್ಕೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಒದಗಿ ಬರುವುದು. ನಿರುದ್ಯೋಗಿಗಳು ಸಂದರ್ಶನಕ್ಕೆ ತಯಾರಾಗಲಿದ್ದಾರೆ.
ವೃಶ್ಚಿಕ: ಎಂದೋ ಆಗಬೇಕಿದ್ದ ಕೆಲಸ ಈಗಲಾದರೂ ಪೂರ್ತಿ ಮಾಡುವ ಮನಸ್ಸು ಮಾಡಲಿದ್ದೀರಿ. ಮಹಿಳೆಯರಿಗೆ ಗಂಟು, ಕೀಲು ನೋವು ಇತ್ಯಾದಿ ಸಮಸ್ಯೆಗಳು ಕಂಡುಬರಲಿದೆ. ಹಿರಿಯರ ಸಲಹೆ ಪಾಲಿಸುವುದು ಉತ್ತಮ.
ಧನು: ನಿಮ್ಮ ಬಹು ದಿನಗಳ ಕನಸು ನನಸು ಮಾಡಿಕೊಳ್ಳಲಿದ್ದೀರಿ. ಗೃಹ ರಿಪೇರಿ ಕೆಲಸಗಳಿಗಾಗಿ ಅಧಿಕ ಓಡಾಟ ನಡೆಸಬೇಕಾಗುತ್ತದೆ. ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ದೇವರ ಪ್ರಾರ್ಥನೆ ಮಾಡಿ.
ಮಕರ: ನಿಮ್ಮಲ್ಲಿರುವ ಒಳ್ಳೆಯತನ ಇತರರು ದುರುಪಯೋಗಪಡಿಸಿಕೊಳ್ಳದಂತೆ ಎಚ್ಚರಿಕೆ ವಹಿಸಿ. ವ್ಯಾವಹಾರಿಕವಾಗಿ ನಿಮ್ಮ ಮುನ್ನಡೆಯನ್ನು ತಡೆಯಲು ಯಾರಿಂದಲೂ ಆಗದು. ವೈಯಕ್ತಿಕ ಜೀವನದಲ್ಲಿ ಮಹತ್ತರ ಬದಲಾವಣೆಯಾಗಲಿದೆ.
ಕುಂಭ: ವೈದ್ಯಕೀಯ ವೃತ್ತಿಯವರಿಗೆ ಮಾನ ಹಾನಿಯಂತಹ ಘಟನೆಗಳು ಎದುರಾದೀತು. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿರಲಿ. ಸರಕಾರಿ ಉದ್ಯೋಗಿಗಳಿಗೆ ಮುಂಬಡ್ತಿಯ ಕನಸು ಸದ್ಯದಲ್ಲೇ ನನಸಾಗಲಿದೆ.
ಮೀನ: ಮಹಿಳೆಯರಿಗೆ ಕೌಟುಂಬಿಕವಾಗಿ ಹೆಚ್ಚಿನ ಹೊಣೆಗಾರಿಕೆ ಹೆಗಲಿಗೇರಲಿದೆ. ವ್ಯವಹಾರದಲ್ಲಿ ಅನ್ಯರ ಮಧ್ಯಸ್ಥಿಕೆಗೆ ಅವಕಾಶ ಕೊಡಬೇಡಿ. ಸಾಮಾಜಿಕವಾಗಿ ನಿರೀಕ್ಷಿತ ಸ್ಥಾನ ಮಾನ ನಿಮ್ಮದಾಗುವುದು. ಅನಗತ್ಯ ಚಿಂತೆ ಬೇಡ.