Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶನಿವಾರ, 22 ಅಕ್ಟೋಬರ್ 2022 (08:00 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಸಮಯೋಚಿತ ನಿರ್ಧಾರಗಳಿಂದ ಸಂಭಾವ್ಯ ತೊಂದರೆಗಳು ದೂರವಾಗಲಿದೆ. ಗುರುಹಿರಿಯರನ್ನು ಸಂತೃಪ್ತಿ ಪಡಿಸಲಿದ್ದೀರಿ. ದೂರ ವ್ಯವಹಾರದಿಂದ ಲಾಭ ಕಂಡುಬರಲಿದೆ. ಕಿರು ಸಂಚಾರ ಮಾಡಲಿದ್ದೀರಿ.

ವೃಷಭ: ಉದ್ಯೋಗದಲ್ಲಿ ಉತ್ತಮ ಬೆಳವಣಿಗೆ ಕಂಡುಬರುವುದು. ಮೇಲಧಿಕಾರಿಗಳ ಜೊತೆ ಸಂಬಂಧ ಸುಧಾರಿಸಲಿದೆ. ಹೊಸದಾಗಿ ಮದುವೆಯಾಗಿದ್ದವರಿಗೆ ಸುಂದರ ಕ್ಷಣ ಕಳೆಯುವ ಯೋಗ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಿಥುನ: ಹಿಂದೆ ಕೂಡಿಟ್ಟ ಹಣ ಅನಿವಾರ್ಯ ಕಾರಣಗಳಿಗೆ ಖರ್ಚಾಗಿ ಹೋಗಲಿದೆ. ಕೆಲಸದ ವಿಚಾರದಲ್ಲಿ ಉದಾಸೀನ ಪ್ರವೃತ್ತಿ ಕಂಡುಬಂದೀತು. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಕೂದಲೆಳೆಯಲ್ಲಿ ತಪ್ಪಿ ಹೋದೀತು.

ಕರ್ಕಟಕ: ಮನಸ್ಸಿಟ್ಟು ಮಾಡುವ ಕೆಲಸಗಳಲ್ಲಿ ಯಶಸ್ಸು ಪಡೆಯಲಿದ್ದೀರಿ. ದಾಂಪತ್ಯದಲ್ಲಿ ಹೊಂದಾಣಿಕೆಯಿರಲಿದ್ದು, ಯಾರೂ ನಿಮ್ಮ ನಡುವೆ ಸಂಘರ್ಷ ತಂದು ಹಾಕಲಾಗದು. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ಸಿಂಹ: ಪ್ರಯಾಣದಿಂದ ದೇಹಾಯಾಸವಾದೀತು. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾದೀತು. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಅಪಘಾತದ ಸಂಭವ. ಎಚ್ಚರಿಕೆಯಿಂದಿರಿ.

ಕನ್ಯಾ: ಮನೆಯಲ್ಲಿ ಸಂತೋಷದ ವಾತಾವರಣವಿರಲಿದ್ದು, ಅತಿಥಿಗಳ ಆಗಮನಕ್ಕೆ ಸಿದ್ಧತೆ ನಡೆಸುವಿರಿ. ಇಷ್ಟಭೋಜನ ಮಾಡುವ ಯೋಗವಿದೆ. ಗೃಹೋಪಯೋಗಿ ವಸ್ತುಗಳಿಗಾಗಿ ಹಣಕಾಸಿನ ಖರ್ಚು ವೆಚ್ಚ ಕಂಡುಬಂದೀತು.

ತುಲಾ: ಕೌಟುಂಬಿಕವಾಗಿ ಅಭಿವೃದ್ಧಿ, ನೆಮ್ಮದಿ ಕಂಡುಬರುವುದು. ಉದ್ಯೋಗ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳಾಗಲಿವೆ. ಮಹಿಳೆಯರಿಗೆ ಗೃಹಕೃತ್ಯಳಿಂದ ಬಿಡುವು ಸಿಗದು. ಆತುರದ ನಿರ್ಧಾರ ಬೇಡ.

ವೃಶ್ಚಿಕ: ನಿಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ಯಾತ್ರಾರ್ಥಿಗಳಿಗೆ ಅಡೆತಡೆಗಳು ಕಂಡುಬಂದೀತು. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ಕುಲದೇವರ ಪ್ರಾರ್ಥನೆ ಮಾಡಲಿದ್ದೀರಿ.

ಧನು:  ವ್ಯಾಪಾರೀ ವರ್ಗದವರು ಆರ್ಥಿಕವಾಗಿ ಲಾಭ ಮಾಡಿಕೊಳ್ಳಲಿದ್ದಾರೆ. ಹಿರಿಯರ ಜೊತೆ ಅನಗತ್ಯ ಸಂಘರ್ಷ ಬೇಡ. ಮಕ್ಕಳ ಸಂತೋಷದಲ್ಲಿ ಭಾಗಿಯಾಗಲಿದ್ದೀರಿ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಇದ್ದಲ್ಲಿ ಆರೋಗ್ಯ ಸಮಸ್ಯೆಯಾದೀತು.

ಮಕರ: ಸಹೋದರಾದಿ ಸಂಬಂಧಿಗಳೊಂದಿಗಿನ ಭಿನ್ನಾಭಿಪ್ರಾಯಗಳು ದೂರವಾಗಲಿದೆ. ಅಧ್ಯಯನ ಶೀಲರಿಗೆ ಗೌರವ ಪ್ರಾಪ್ತಿಯಾಗುವುದು. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಮಾನಸಿಕವಾಗಿ ಗಟ್ಟಿಯಾಗಲಿದ್ದೀರಿ.

ಕುಂಭ: ಎಂದಿನ ಜಂಜಾಟದ ಬದುಕಿನಿಂದ ಕೊಂಚ ವಿರಾಮ ತೆಗೆದುಕೊಳ್ಳಲಿದ್ದೀರಿ. ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವಿರಿ. ನಿಮ್ಮ ಕೆಲಸಗಳಿಗೆ ಸಂಗಾತಿಯ ಸಹಕಾರ ಕಂಡುಬರಲಿದೆ.

ಮೀನ: ಹೊಸ ಬದುಕು ಕಟ್ಟಿಕೊಳ್ಳುವ ನಿಮ್ಮ ಪ್ರಯತ್ನಗಳಿಗೆ ಹಿನ್ನಡೆಯಾದೀತು. ಆದರೂ ನಿರಾಸೆ ಬೇಡ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ದೊರೆಯಲಿದೆ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ಚಿಂತೆ ಬೇಡ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ