Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಮಂಗಳವಾರ, 27 ಸೆಪ್ಟಂಬರ್ 2022 (07:30 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ವಾಹನ-ಭೂಮಿ ವಿಚಾರದಲ್ಲಿ ಅಪರಿಚಿತರೊಂದಿಗೆ ವ್ಯವಹಾರ ಬೇಡ. ಕಾರ್ಯಕ್ಷೇತ್ರದಲ್ಲಿ ಎದುರಾಳಿಗಳಿಂದ ಪೈಪೋಟಿ ಎದುರಾದೀತು. ಸಂಗಾತಿಯೊಂದಿಗೆ ಅನಗತ್ಯ ಘರ್ಷಣೆ ಬೇಡ. ಕಿರು ಸಂಚಾರ ಮಾಡಲಿದ್ದೀರಿ.

ವೃಷಭ: ರಾಜಕೀಯ ರಂಗದಲ್ಲಿ ಎದುರಾಳಿಗಳಿಗೆ ಹಿನ್ನಡೆಯಾದೀತು. ಇಷ್ಟಮಿತ್ರರ ಭೇಟಿ ಯೋಗ. ನಾಲಿಗೆ ಮೇಲೆ ಕಡಿವಾಣವಿರಲಿ. ಮಹಿಳೆಯರಿಗೆ ಕೌಟುಂಬಿಕವಾಗಿ ಜವಾಬ್ಧಾರಿಗಳು ಹೆಚ್ಚಲಿವೆ. ದಿನದಂತ್ಯಕ್ಕೆ ನೆಮ್ಮದಿ.

ಮಿಥುನ: ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ಹಣ ಗಳಿಕೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಹೊಸ ಜನರ ಭೇಟಿಯಾಗಲಿದ್ದು ನಿಮ್ಮ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ.

ಕರ್ಕಟಕ: ಪಾಲುದಾರಿಕೆ ಕ್ಷೇತ್ರದಲ್ಲಿ ಅನಿರೀಕ್ಷಿತ ಲಾಭ ಸಾಧ‍್ಯತೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಯತ್ನಿಸಲಿದ್ದೀರಿ.

ಸಿಂಹ: ಹೊಸದಾಗಿ ಹೂಡಿದ್ದ ಬಂಡವಾಳಕ್ಕೆ ತಕ್ಕ ಫಲ ಸಿಗಲಿದೆ. ಹಿರಿಯರೊಂದಿಗೆ ಅನಗತ್ಯ ವಾದ ವಿವಾದ ಬೇಡ. ನಿಮ್ಮ ಕಾರ್ಯವೈಖರಿಯಿಂದ ಇತರರ ಗೌರವಕ್ಕೆ ಪಾತ್ರರಾಗಲಿದ್ದೀರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ಕನ್ಯಾ: ಉದ್ಯೋಗ, ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಪ್ರಗತಿ ಕಂಡುಬರಲಿದೆ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆಯಿರಲಿ. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ. ತಾಳ್ಮೆಯಿರಲಿ.

ತುಲಾ: ಉನ್ನತ ಹುದ್ದೆಗೇರುವ ನಿಮ್ಮ ಕನಸು ಸದ್ಯದಲ್ಲೇ ನನಸಾಗಲಿದೆ. ಹಲವು ದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಧಾರ್ಮಿಕ ಕಾರ್ಯಗಳ ನೇತೃತ್ವ ವಹಿಸಲಿದ್ದೀರಿ.

ವೃಶ್ಚಿಕ: ವಿಶೇಷ ವ್ಯಕ್ತಿಗಳು ನಿಮ್ಮ ಜೀವನಕ್ಕೆ ತಿರುವ ನೀಡಲಿದ್ದಾರೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿರಲಿ. ಇಂದು ಯಾರಿಗೂ ಸಾಲ ಕೊಡಲು ಹೋಗಬೇಡಿ, ಮರಳಿ ಬಾರದು. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಧನು: ಸಾಂಸಾರಿಕವಾಗಿ ಅಭಿವೃದ್ಧಿ ಕಂಡುಬರಲಿದೆ. ವ್ಯಾಪಾರೀ ವರ್ಗದವರಿಗೆ ಉನ್ನತಿಯ ಯೋಗ. ಪಾಲುದಾರಿಕೆ ವ್ಯವಹಾರದಲ್ಲಿ ಅಭಿವೃದ್ಧಿ. ಸಂಗಾತಿಯ ಸಲಹೆಗಳನ್ನು ಪಾಲಿಸುವುದು ಉತ್ತಮ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಕರ: ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ ಸಿಗಲಿದೆ. ನಿರುದ್ಯೋಗಿಗಳಿಗೆ ಪಾಲಿಗೆ ಬಂದ ಅವಕಾಶಗಳನ್ನು ಬಳಸಿಕೊಳ್ಳಬೇಕು. ಸರಕಾರಿ ನೌಕರರಿಗೆ ಪಗಾರ ಹೆಚ್ಚಳ ಸಂಭವ. ಅನಗತ್ಯ ಚಿಂತೆ ಬೇಡ.

ಕುಂಭ: ಹೊಸ ಕೆಲಸಕ್ಕೆ ಕೈ ಹಾಕುವಾಗ ಲೆಕ್ಕಪತ್ರಗಳ ವಿಚಾರದಲ್ಲಿ ತೊಂದರೆಗಳು ಎದುರಾದೀತು. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ದೊರೆಯಲಿದೆ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ಯೋಗ.

ಮೀನ: ಬೇರೊಬ್ಬರೊಂದಿಗೆ ವ್ಯವಹರಿಸುವಾಗ ಹಣಕಾಸಿನ ದಾಕ್ಷಿಣ್ಯಕ್ಕೊಳಗಾಗಬೇಡಿ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ