Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 11 ಸೆಪ್ಟಂಬರ್ 2022 (08:00 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಹಠವಾದಿ ಮನೋಭಾವ ಬಿಟ್ಟು ಕಾರ್ಯಪ್ರವೃತ್ತರಾಗಿ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಹಣಕಾಸಿನ ಅನಿರೀಕ್ಷಿತ ಖರ್ಚು ವೆಚ್ಚಗಳು ಕಂಡುಬಂದೀತು. ಕೌಟುಂಬಿಕವಾಗಿ ಹೊಂದಾಣಿಕೆ ಅಗತ್ಯ.

ವೃಷಭ: ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಉತ್ತಮ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಮಕ್ಕಳಿಗೆ ನೀರಿನಿಂದ ಅಪಾಯವಾಗುವ ಸಾಧ‍್ಯತೆ. ಕಾರ್ಯರಂಗದಲ್ಲಿ ಹೆಚ್ಚಿನ ಹೊಣೆಗಾರಿಕೆ ಹೆಗಲಿಗೇರಲಿದೆ.

ಮಿಥುನ: ಎಷ್ಟೋ ದಿನಗಳ ನಂತರ ಆಪ್ತರನ್ನು ಭೇಟಿಯಾದ ಸಂತೋಷ ನಿಮ್ಮದಾಗುವುದು. ಕ್ರಿಯಾತ್ಮಕ ಕೆಲಸಗಳಿಂದ ಇತರರ ಗಮನ ಸೆಳೆಯಲಿದ್ದೀರಿ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಸಿಗಲಿವೆ. ಚಿಂತೆ ಬೇಡ.

ಕರ್ಕಟಕ: ಹೊಸದಾಗಿ ಅಭಿವೃದ್ಧಿ ಕೆಲಸಗಳಿಗೆ ಕೈ ಹಾಕಲು ಇದು ಸಕಾಲ. ಹಿರಿಯರ ಸಲಹೆಗಳಿಗೆ ಕಿವಿಗೊಡುವುದು ಉತ್ತಮ. ಸಂಗಾತಿಗೆ ಅನಿರೀಕ್ಷಿತ ಉಡುಗೊರೆಗಳ ಮೂಲಕ ಸಂತೋಷ ಕೊಡಲಿದ್ದೀರಿ.

ಸಿಂಹ: ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಂಡು ನೆಮ್ಮದಿ ಹಾಳುಮಾಡಿಕೊಳ್ಳಬೇಡಿ. ಸಾಂಸಾರಿಕವಾಗಿ ಕಡ್ಡಿಯೇ ಗುಡ್ಡವಾಗುವಂತಹ ಪರಿಸ್ಥಿತಿ ಎದುರಾದೀತು. ವ್ಯಾಪಾರೀ ವರ್ಗದವರಿಗೆ ಅಡೆತಡೆಗಳು ನಿವಾರಣೆಯಾಗಲಿವೆ.

ಕನ್ಯಾ: ನೀವು ಅಂದುಕೊಂಡಿದ್ದೇ ಒಂದು ಆಗುವುದೇ ಇನ್ನೊಂದು ಎಂಬ ಪರಿಸ್ಥಿತಿಯಾದೀತು. ಹಿರಿಯರ ದೇಹಾರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ಹಣಕಾಸಿನ ಅಡೆತಡೆಗಳು ಬಂದೀತು. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಒದಗಿಬರುವುದು.

ತುಲಾ: ಮೆಚ್ಚಿನ ವ್ಯಕ್ತಿಗಳಿಂದಲೇ ನಿಮ್ಮ ಮನಸ್ಸಿಗೆ ನೋವಾಗುವಂತಹ ಪ್ರಸಂಗ ಎದುರಾದೀತು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದೆ. ಯೋಗ್ಯ ವಯಸ್ಕರಿಗೆ ವೈವಾಹಿಕ ಸಂಬಂಧಗಳು ಕೂಡಿಬರಲಿವೆ. ದೇವತಾ ಪ್ರಾರ್ಥನೆ ಮಾಡಿ.

ವೃಶ್ಚಿಕ: ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ಯಾತ್ರಾರ್ಥಿಗಳಿಗೆ ಅಡೆತಡೆ ಕಂಡುಬಂದೀತು. ವೈದ್ಯಕೀಯ ವೃತ್ತಿಯವರಿಗೆ ಮುನ್ನಡೆ. ತಾಳ್ಮೆಯಿರಲಿ.

ಧನು: ಧನ-ಕನಕ ಸಂಪತ್ತು ವೃದ್ಧಿಯಾದೀತು. ಹಾಗಿದ್ದರೂ ಮಾನಸಿಕವಾಗಿ ಹಳೆಯ ನೆನಪುಗಳು ಚಿಂತೆ ತಂದೀತು. ಸಂಗಾತಿಯೊಂದಿಗೆ ಸಮಯ ಕಳೆಯಲಿದ್ದೀರಿ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆಯಿರಲಿ.

ಮಕರ: ನೀವು ತೊಡಗಿಸಿಕೊಳ್ಳುವ ಕೆಲಸದಲ್ಲಿ ಅತೃಪ್ತಿ ಕಂಡುಬಂದೀತು. ಇನ್ನೂ ಹೊಸದು ಮಾಡಬೇಕೆನ್ನುವ ಧಾವಂತದಲ್ಲಿ ತೊಂದರೆಗೆ ಸಿಲುಕಿಕೊಳ್ಳದಿರಿ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕುಂಭ: ನಿಮ್ಮ ದೈವ ಭಕ್ತಿ ಪರೀಕ್ಷೆಗೊಳಪಡಲಿದೆ. ಸತತ ಪ್ರಯತ್ನದ ಹೊರತಾಗಿಯೂ ಫಲ ಸಿಗದೇ ನಿರಾಸೆಯಾದೀತು. ಹಿರಿಯರಿಗೆ ದಾನ ಧರ್ಮಾದಿಗಳಿಂದ ನೆಮ್ಮದಿ ಸಿಗಲಿದೆ. ಇಷ್ಟಮಿತ್ರರನ್ನು ಭೇಟಿ ಮಾಡುವ ಯೋಗ.

ಮೀನ: ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡ ಕಡಿಮೆಯಾಗಲಿದೆ. ಮಹಿಳೆಯರಿಗೆ ಕೌಟುಂಬಿಕವಾಗಿ ಜವಾಬ್ಧಾರಿಗಳು ಹೆಚ್ಚಾಗಲಿವೆ. ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸುವಿರಿ. ಕುಲದೇವರ ಪ್ರಾರ್ಥನೆ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Karnataka Weather: ಈ ವಾರದಿಂದ ರಾಜ್ಯದಲ್ಲಿ ಮಳೆ ಹೇಗಿರಲಿದೆ ಇಲ್ಲಿದೆ ಸಂಪೂರ್ಣ ವರದಿ

Shiva Mantra: ಸೋಮವಾರ ಶಿವ ಅಷ್ಟೋತ್ತರ ಭಕ್ತಿಯಿಂದ ಓದಿ

Subramanya Mantra: ಸುಬ್ರಹ್ಮಣ್ಯ ಸ್ವಾಮಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಪಾಂಡುರಂಗಾಷ್ಟಕಂ ಕನ್ನಡದಲ್ಲಿ ಇಲ್ಲಿದೆ

Sai Baba astakam: ಸಾಯಿಬಾಬ ಪ್ರಾರ್ಥನಾಷ್ಟಕಂ ಕನ್ನಡದಲ್ಲಿ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments