Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶುಕ್ರವಾರ, 2 ಸೆಪ್ಟಂಬರ್ 2022 (07:27 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಜೀವನದಲ್ಲಿ ಕೆಲವೊಂದು ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಂದರ್ಭಗಳು ಎದುರಾದೀತು. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಅನಗತ್ಯ ಚಿಂತೆ ಬೇಡ. ಪ್ರೀತಿ ಪಾತ್ರರನ್ನು ಭೇಟಿಯಾಗಲು ಮನಸ್ಸು ಹಾತೊರೆಯುವುದು.

ವೃಷಭ: ನಿಮ್ಮಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಸಿಗಲಿದೆ. ಯಾತ್ರಾರ್ಥಿಗಳಿಗೆ ಅಡ್ಡಿ ಆತಂಕಗಳು ಎದುರಾದೀತು. ಹಿರಿಯರ ಸಲಹೆಗಳನ್ನು ಪಾಲಿಸುವುದು ಉತ್ತಮ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಮುನ್ನಡೆ ಕಂಡುಬರುವುದು.

ಮಿಥುನ: ಇಷ್ಟಾರ್ಥ ಸಿದ್ಧಿಗಾಗಿ ದೇವರ ಮೊರೆ ಹೋಗಲಿದ್ದೀರಿ. ಆದಾಯ ವೃದ್ಧಿಗೆ ನಾನಾ ದಾರಿಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಮಹಿಳೆಯರಿಗೆ ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ.

ಕರ್ಕಟಕ: ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಫಲ ಪಡೆಯಲಿದ್ದಾರೆ. ಹೊಸ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೆ ಅಭಿವೃದ್ಧಿ ಕಂಡುಬರಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ತಾಳ್ಮೆಯಿರಲಿ.

ಸಿಂಹ: ಕೆಲಸ ಕಾರ್ಯಗಳಲ್ಲಿ ನಿಮ್ಮ ಚುರುಕುತನ ಎಲ್ಲರ ಗಮನ ಸೆಳೆಯುವುದು. ವ್ಯಾವಹಾರಿಕವಾಗಿ ಕೆಲವೊಂದು ಅಡೆತಡೆಗಳು ಎದುರಾದರೂ ಕಾರ್ಯಸಾಧನೆಯಾಗಲಿದೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು.

ಕನ್ಯಾ: ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರುವುದು. ಮೆಚ್ಚಿನ ವ್ಯಕ್ತಿಗಳನ್ನು ಭೇಟಿ ಮಾಡುವ ಯೋಗ. ಹಿರಿಯರ ಮನೋಭಿಲಾಷೆ ಪೂರ್ತಿ ಮಾಡಲು ಮುಂದಾಗಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ತುಲಾ: ಹೊಸದಾಗಿ ಉದ್ದಿಮೆ ಆರಂಭಿಸುವವರು ಲೆಕ್ಕಪತ್ರಗಳ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ. ಕೋರ್ಟು ಕಚೇರಿ ವ್ಯವಹಾರಗಳಿಗೆ ಓಡಾಟ ನಡೆಸಲಿದ್ದೀರಿ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ.

ವೃಶ್ಚಿಕ: ಕೈಗೆತ್ತಿಕೊಂಡಿರುವ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಪಾಲು ಬಂಡವಾಳ ಹೂಡಿಕೆ ವ್ಯವಹಾರದಲ್ಲಿ ಲಾಭ ಕಂಡುಕೊಳ್ಳಲಿದ್ದೀರಿ. ಕೌಟುಂಬಿಕವಾಗಿ ಸಂಗಾತಿಯ ಸಹಕಾರದಿಂದ ಕೆಲಸಗಳು ಸುಗಮವಾಗಲಿದೆ.

ಧನು: ಮನೆಗೆ ನೆಂಟರಿಷ್ಟರ ಆಗಮನವಾಗಲಿದ್ದು, ಸಂಭ್ರಮದ ವಾತಾವರಣವಿರಲಿದೆ. ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗವಿದೆ. ಇಷ್ಟ ಭೋಜನ ಮಾಡುವ ಯೋಗವಿದೆ. ದೇಹಾರೋಗ್ಯದಲ್ಲಿ ಸುಧಾರಣೆಯಾಗುವುದು.

ಮಕರ: ಸನ್ಮಿತ್ರರ ಸಹವಾಸ ನಿಮ್ಮ ಯೋಚನಾ ಲಹರಿಯನ್ನು ಬದಲಾಯಿಸಲಿದೆ. ಮಹಿಳೆಯರಿಗೆ ಆರೋಗ್ಯ ಸಮಸ್ಯೆಗಳು ಕಂಡುಬಂದೀತು. ನೆರೆಹೊರೆಯವರಿಂದ ಸಹಾಯ ಸಿಗಲಿದೆ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆ.

ಕುಂಭ: ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡದಿಂದ ದೇಹಾಯಾಸವಾದೀತು. ವಾಹನ, ಆಸ್ತಿ ಖರೀದಿ ಮಾಡುವ ನಿಮ್ಮ ಕನಸು ಸದ್ಯದಲ್ಲೇ ನನಸಾಗಲಿದೆ. ಮಕ್ಕಳ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ಮೀನ: ಎಷ್ಟೋ ದಿನಗಳಿಂದ ಬಾಕಿಯಿದ್ದ ಕೆಲಸ ಪೂರ್ತಿ ಮಾಡಲಿದ್ದೀರಿ. ಹಣಕಾಸಿನ ಹರಿವಿಗೆ ತೊಂದರೆಯಾಗದು. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಕ್ರಿಯಾತ್ಮಕ ಕೆಲಸಗಳಿಂದ ಇತರರ ಗಮನ ಸೆಳೆಯಲಿದ್ದೀರಿ. ತಾಳ್ಮೆಯಿರಲಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ