ಮೇಷ: ದೇವತಾನುಗ್ರಹದಿಂದ ಮನೆಯಲ್ಲಿ ಸಂತೋಷದ ವಾತಾವರಣವಿರಲಿದೆ. ಅಪರೂಪದ ಅತಿಥಿಗಳ ಆಗಮನವಾಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ತಾಳ್ಮೆಯಿರಲಿ.
ವೃಷಭ: ಆಸ್ತಿ ವಿಚಾರದಲ್ಲಿ ಅಭಿವೃದ್ಧಿ ಕಂಡುಬರಲಿದೆ. ನೂತನ ಬಂಧು ಮಿತ್ರರ ಸಮಾಗಮವಾಗಲಿದೆ. ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಅಧ್ಯಯನ ಪ್ರವೃತ್ತರಿಗೆ ಹೆಚ್ಚಿನ ಅವಕಾಶಗಳು ಲಭಿಸೀತು. ಬಳಸಿಕೊಳ್ಳಿ.
ಮಿಥುನ: ವಿದೇಶೀ ಮೂಲಗಳಿಂದ ಧನಾಗಮನವಾಗಲಿದೆ. ಹಿರಿಯರಿಗೆ ತೀರ್ಥ ಕ್ಷೇತ್ರಗಳ ಸಂದರ್ಶನ ಯೋಗ ಕಂಡುಬರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ. ಕಿರು ಓಡಾಟ ನಡೆಸಬೇಕಾಗುತ್ತದೆ.
ಕರ್ಕಟಕ: ಆಸ್ತಿ ವಿಚಾರಗಳಲ್ಲಿ ಸಹೋದರಾದಿ ಸಂಬಂಧಿಗಳೊಂದಿಗೆ ಭಿನ್ನಾಭಿಪ್ರಾಯ ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆ ಹರಿಸಿಕೊಳ್ಳಲಿದ್ದೀರಿ. ನಿರಂತರ ಓಡಾಟದಿಂದ ದೇಹಾಯಾಸವಾದೀತು. ದೇವತಾ ಪ್ರಾರ್ಥನೆ ಮಾಡಿ.
ಸಿಂಹ: ಬೇಡದ ಮಾತು ಹೇಳಿ ಇನ್ನೊಬ್ಬರ ಅನಾದರಣೆಗೆ ಒಳಗಾಗದಿರಿ. ಮಾತಿನ ಮೇಲೆ ಸಂಯಮವಿರಲಿ. ಉದ್ಯೋಗ ವ್ಯವಹಾರದಲ್ಲಿ ಚೇತರಿಕೆ ಕಂಡುಬರಲಿದೆ. ಮಹಿಳೆಯರಿಗೆ ಚಿನ್ನಾಭರಣಗಳನ್ನು ಸಂರಕ್ಷಿಸುವ ಜವಾಬ್ಧಾರಿ ಹೆಗಲಿಗೇರಲಿದೆ.
ಕನ್ಯಾ: ಕೆಲಸ ಕಾರ್ಯಗಳಲ್ಲಿ ನಿಮ್ಮ ತಲ್ಲೀನತೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಇಷ್ಟಮಿತ್ರರೊಂದಿಗೆ ಭೋಜನ ಮಾಡುವ ಯೋಗ ನಿಮ್ಮದಾಗಲಿದೆ. ದಾಂಪತ್ಯದಲ್ಲಿ ತೃಪ್ತಿದಾಯಕ ವಾತಾವರಣ. ಆರೋಗ್ಯದಲ್ಲಿ ಕಾಳಜಿಯಿರಲಿ.
ತುಲಾ: ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಜಾಗರೂಕತೆ ಅಗತ್ಯ. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣವಿರಲಿದೆ.
ವೃಶ್ಚಿಕ: ವೃತ್ತಿರಂಗದಲ್ಲಿ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಲಿದ್ದೀರಿ. ಗುರುಹಿರಿಯರೊಂದಿಗೆ ಅನಗತ್ಯ ಸಂಘರ್ಷ ಬೇಡ. ಬಹಳ ದಿನಗಳ ನಂತರ ಬಂಧು ಮಿತ್ರರ ಭೇಟಿಯಾಗಲಿದ್ದೀರಿ. ಕಾರ್ಯಸಾಧನೆಗಾಗಿ ಅಧಿಕ ಪರಿಶ್ರಮಪಡಬೇಕಾಗುತ್ತದೆ.
ಧನು: ಯಂತ್ರೋಪಕರಣಗಳ ಕೆಲಸ ಮಾಡುವವರಿಗೆ ಬಿಡುವಿನ ದಿನದ ಖುಷಿ ಸಿಗುವುದು. ಮಕ್ಕಳಿಗೆ ಅನಿರೀಕ್ಷಿತ ಉಡುಗೊರೆಗಳ ಮೂಲಕ ಸಂತೋಷ ನೀಡಲಿದ್ದೀರಿ. ಕೌಟುಂಬಿಕವಾಗಿ ಹೆಚ್ಚಿನ ಜವಾಬ್ಧಾರಿ ಹೆಗಲಿಗೇರಲಿದೆ.
ಮಕರ: ಕಾರ್ಯನಿಮಿತ್ತ ದೂರ ಪ್ರಯಾಣ ಮಾಡುವ ಸಂಭವವಿದೆ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಮಕ್ಕಳಿಗಾಗಿ ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ. ದಿನದಂತ್ಯಕ್ಕೆ ನೆಮ್ಮದಿ ಇರಲಿದೆ.
ಕುಂಭ: ನಿರೀಕ್ಷೆಯಂತೇ ಧನಾಗಮನವಾಗಲಿದ್ದು, ಹೊಸ ಕೆಲಸಗಳಿಗೆ ಕೈ ಹಾಕಲಿದ್ದೀರಿ. ದೇಹಾರೋಗ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಪ್ರೇಮಿಗಳಿಗೆ ಅಡೆತಡೆಗಳು ಬಂದೀತು. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.
ಮೀನ: ಮನಸ್ಸಿನಲ್ಲಿರುವ ಕ್ರಿಯಾತ್ಮಕ ಯೋಚನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದೀರಿ. ಭೂಮಿ ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಮನೆಗೆ ಅನಿರೀಕ್ಷಿತ ನೆಂಟರಿಷ್ಟರ ಆಗಮನವಾಗಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.