Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶನಿವಾರ, 4 ಜೂನ್ 2022 (08:05 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಸಾಮಾಜಿಕವಾಗಿ ಉತ್ತಮ ಜನಮನ್ನಣೆಗೆ ಪಾತ್ರರಾಗಲಿದ್ದೀರಿ. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಮನೆ ರಿಪೇರಿ ಕೆಲಸಗಳಿಗಾಗಿ ಕೊಂಚ ಓಡಾಟ ನಡೆಸಬೇಕಾದೀತು.

ವೃಷಭ: ಅನಗತ್ಯವಾಗಿ ಮೂರನೇ ವ್ಯಕ್ತಿಗಳು ನಿಮ್ಮ ವೈಯಕ್ತಿಕ ಜೀವನದಲ್ಲಿ ಮೂಗು ತೂರಿಸಲು ಅವಕಾಶ ಕೊಡಬೇಡಿ. ಮಕ್ಕಳ ವಿಚಾರದಲ್ಲಿ ಜವಾಬ್ಧಾರಿ ಹೆಚ್ಚಲಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರಗತಿ ಕಂಡುಬರಲಿದೆ.

ಮಿಥುನ: ಮನಸ್ಸಿನಲ್ಲಿ ಅನಗತ್ಯದ ಗೊಂದಲಗಳಿಗೆ ಅವಕಾಶ ಕೊಡಬೇಡಿ. ಭೂಮಿ, ವಾಹನ ಖರೀದಿ ವಿಚಾರದಲ್ಲಿ ಮುನ್ನಡೆ ಕಂಡುಬಂದೀತು. ಪ್ರೀತಿ ಪಾತ್ರರನ್ನು ಭೇಟಿಯಾಗುವ ಯೋಗ. ಕಾರ್ಯನಿಮಿತ್ತ ಓಡಾಟ ನಡೆಸಲಿದ್ದೀರಿ.

ಕರ್ಕಟಕ: ಸರಕಾರಿ ಲೆಕ್ಕಪತ್ರಗಳ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಾಗುತ್ತದೆ. ಆದಾಯ ವೃದ್ಧಿಗೆ ನಾನಾ ದಾರಿಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ವ್ಯಾಪಾರಿಗಳಿಗೆ ಹಿತಶತ್ರುಗಳ ಕಾಟ ಕಂಡುಬಂದೀತು. ತಾಳ್ಮೆ, ಸಂಯಮ ಅಗತ್ಯ.

ಸಿಂಹ: ಮನಸ್ಸಿನಲ್ಲಿರುವ ಮಾತುಗಳನ್ನು ಆಪ್ತರೊಂದಿಗೆ ಹಂಚಿಕೊಂಡು ಹಗುರವಾಗಲಿದ್ದೀರಿ. ಬಹಳ ದಿನಗಳ ನಂತರ ಆಪ್ತರನ್ನು ಭೇಟಿಯಾದ ಸಂತೋಷ ನಿಮ್ಮದಾಗಿಲಿದೆ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ.

ಕನ್ಯಾ: ವೈಯಕ್ತಿಕವಾಗಿ ನಿಮ್ಮ ಕಷ್ಟಗಳಿಗೆ ಆಪ್ತರ ನೆರವು ಸಿಗಲಿದೆ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಲಿದ್ದೀರಿ. ದೀರ್ಘ ಪ್ರಯಾಣದಿಂದ ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ಮಕ್ಕಳಿಂದ ಸಂತೋಷ ಸಿಗುವುದು. ಚಿಂತೆ ಬೇಡ.

ತುಲಾ: ಮಾನಸಿಕವಾಗಿ ಗೊಂದಲಕ್ಕೆ ಅವಕಾಶ ಮಾಡಿಕೊಡದೇ ಹೊಸ ಕೆಲಸಗಳಿಗೆ ಕೈಹಾಕಿ. ಸಂಗಾತಿಯ ಸಹಕಾರ ನಿಮಗೆ ಸಿಗಲಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿದ್ದರೂ ಅಷ್ಟೇ ಖರ್ಚೂ ಇರಲಿದೆ. ದೇವತಾ ಪ್ರಾರ್ಥನೆ ಮಾಡಿ.

ವೃಶ್ಚಿಕ: ವೃತ್ತಿರಂಗದಲ್ಲಿ ನಿಮ್ಮ ವಿಚಾರಧಾರೆಗಳಿಗೆ ಬೆಲೆ ಸಿಗದೇ ನಿರಾಸೆಯಾದೀತು. ಹಿರಿಯರಿಗೆ ದಾನ ಧರ್ಮಾದಿಗಳನ್ನು ಮಾಡುವ ಮನಸ್ಸು ಬರಲಿದೆ. ಸಾಂಸಾರಿಕವಾಗಿ ಪರಸ್ಪರ ಸಹಕಾರ ಕಂಡುಬರಲಿದೆ. ಆರೋಗ್ಯದಲ್ಲಿ ಸುಧಾರಣೆಯಾದೀತು.

ಧನು: ಅನಗತ್ಯವಾಗಿ ಇನ್ನೊಬ್ಬರ ಮೇಲೆ ಗೂಬೆ ಕೂರಿಸಲು ಹೋಗಿ ನೀವೇ ಹಳ್ಳಕ್ಕೆ ಬೀಳುವ ಸಂದರ್ಭ ಎದುರಾದೀತು. ಮಕ್ಕಳ ವಿಚಾರದಲ್ಲಿ ಅನಗತ್ಯ ಚಿಂತೆ ಬೇಡ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯ ಲಾಭವಾಗಲಿದೆ.

ಮಕರ: ಬಯಸಿದ ವ್ಯಕ್ತಿಗಳನ್ನು ಭೇಟಿಯಾದ ಸಂತೋಷ ನಿಮ್ಮದಾಗಲಿದೆ. ಕೌಟುಂಬಿಕವಾಗಿ ಹೊಸ ಅತಿಥಿಗಳ ಆಗಮನಕ್ಕೆ ಸಿದ್ಧತೆ ನಡಸಲಿದ್ದೀರಿ. ಕ್ರಿಯಾತ್ಮಕ ಕೆಲಸಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಅನಗತ್ಯ ಚಿಂತೆ ಬೇಡ.

ಕುಂಭ: ವಿಚಿತ್ರವಾದ ಅನುಭವಗಳು ಇಂದು ನಿಮ್ಮದಾಗಲಿದೆ. ಮಾನಸಿಕವಾಗಿ ಸಮತೋಲನದಲ್ಲಿರಲು ಪ್ರಯತ್ನಿಸಲಿದ್ದೀರಿ. ಸಂಗಾತಿಯ ಸಲಹೆಗಳನ್ನು ಪಾಲಿಸುವುದು ಉತ್ತಮ. ಮನಸ್ಸಿನ ನೆಮ್ಮದಿಗಾಗಿ ದೇವರ ಮೊರೆ ಹೋಗಲಿದ್ದೀರಿ.

ಮೀನ: ಆಪ್ತರು ಕೊಡುವ ಸಲಹೆಗಳು ನಿಮ್ಮ ಜೀವನಕ್ಕೆ ತಿರುವ ಕೊಡಬಹುದು. ಸ್ವಯಂ ವ್ಯಾಪಾರಿಗಳಿಗೆ ಆರ್ಥಿಕವಾಗಿ ಲಾಭವಾಗಲಿದೆ. ಧಾರ್ಮಿಕ ಶ್ರದ್ಧೆ ಕಂಡುಬರಲಿದೆ. ಗುರುಹಿರಿಯರೊಂದಿಗೆ ಅನಗತ್ಯ ಸಂಘರ್ಷ ಬೇಡ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ