ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಹೊಸದಾಗಿ ವೃತ್ತಿಜೀವನ ಆರಂಭಿಸಿದವರಿಗೆ ಸವಾಲುಗಳು ಎದುರಾಗಲಿವೆ. ಆರ್ಥಿಕವಾಗಿ ಧನ ಗಳಿಕೆಗೆ ಹೊಸ ಮಾರ್ಗಗಳು ಕಂಡುಬರಲಿದೆ. ಕಾರ್ಯನಿಮಿತ್ತ ದೂರ ಪ್ರಯಾಣಕ್ಕೆ ಸಿದ್ಧತೆ ನಡೆಸಲಿದ್ದೀರಿ. ತಾಳ್ಮೆಯಿರಲಿ.
ವೃಷಭ: ಬೆಲೆ ಬಾಳುವ ವಸ್ತುಗಳನ್ನು ಜೋಪಾನ ಮಾಡುವ ಹೊಣೆಗಾರಿಕೆ ನಿಮ್ಮದಾಗಲಿದೆ. ವೃತ್ತಿರಂಗದಲ್ಲಿ ಹೊಸ ಮಿತ್ರರನ್ನು ಸಂಪಾದಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಾಗುವ ಅನಿವಾರ್ಯತೆ ಎದುರಾಗಲಿದೆ.
ಮಿಥುನ: ಯೋಗ್ಯ ವಯಸ್ಕರು ಸೂಕ್ತ ವೈವಾಹಿಕ ಸಂಬಂಧಕ್ಕಾಗಿ ಕೆಲವು ದಿನ ಕಾಯುವುದು ಒಳಿತು. ಯಾವುದೇ ವಿಚಾರವನ್ನೂ ಸರಿಯಾಗಿ ಪರಾಮರ್ಶಿಸಿ ನಿರ್ಧಾರಕ್ಕೆ ಬರುವುದು ಉತ್ತಮ. ದೇವತಾ ಪ್ರಾರ್ಥನೆ ಮಾಡಿ.
ಕರ್ಕಟಕ: ಎಲ್ಲವೂ ಸರಿಯಿದೆ ಎಂದು ನೀವಂದುಕೊಂಡರೂ ನಿಮ್ಮಿಂದ ತಪ್ಪುಗಳಾಗುವ ಸಾಧ್ಯತೆಗಳಿವೆ. ಸಂಗಾತಿಯ ಸಲಹೆಗಳಿಗೆ ಕಿವಿಗೊಡುವುದು ಉತ್ತಮ. ಹಣಕಾಸಿನ ವಿಚಾರಗಳಲ್ಲಿ ಲೆಕ್ಕಪತ್ರಗಳು ಸರಿಯಾಗಿರುವಂತೆ ನೋಡಿಕೊಳ್ಳಿ.
ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ಎಲ್ಲವೂ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಡೆಯಲಿದೆ. ಮೇಲಧಿಕಾರಿಗಳ ಪ್ರಶಂಸೆಗೊಳಗಾಗಲಿದ್ದೀರಿ. ಹೊಸಜನರ ಭೇಟಿಯಿಂದ ನಿಮ್ಮ ಕಾರ್ಯಸಾಧನೆಗೆ ಅನುಕೂಲವಾಗಲಿದೆ.
ಕನ್ಯಾ: ವಿಶೇಷವಾದ ಕೆಲಸಗಳಿಗೆ ಇಂದು ಕೈಹಾಕಲಿದ್ದೀರಿ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ಹಿರಿಯರ ದೇಹಾರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.
ತುಲಾ: ಆಸ್ತಿ ಖರೀದಿ ವಿಚಾರದಲ್ಲಿ ಹಿರಿಯರ ಸಲಹೆಗಳಿಗೆ ಕಿವಿಗೊಡುವುದು ಉತ್ತಮ. ವೃತ್ತಿರಂಗದಲ್ಲಿ ನಿಮ್ಮ ಪ್ರಾಮಾಣಿಕತೆಗೆ ತಕ್ಕ ಬೆಲೆ ಸಿಗಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ.
ವೃಶ್ಚಿಕ: ಸರಕಾರಿ ಕೆಲಸಗಳಲ್ಲಿ ಮುನ್ನಡೆ ಕಂಡುಬರಲಿದೆ. ಕೃಷಿ ಮತ್ತು ಸಂಬಂಧಿತ ಕೆಲಸದಲ್ಲಿರುವವರಿಗೆ ಮುನ್ನಡೆಯ ಯೋಗ. ಪಾಲು ಬಂಡವಾಳ ವ್ಯವಹಾರಗಳಲ್ಲಿ ವಂಚನೆಯಾಗದಂತೆ ಎಚ್ಚರಿಕೆ ವಹಿಸಿ.
ಧನು: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಎಚ್ಚರಿಕೆಯಲ್ಲಿ ನೀವಿದ್ದರೆ ಉತ್ತಮ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಮಕರ: ಹಣಕಾಸಿನ ವಿಚಾರದಲ್ಲಿ ಅನಗತ್ಯ ವಿವಾದಗಳಾಗದಂತೆ ಎಚ್ಚರಿಕೆ ವಹಿಸಿ. ಆಹಾರೋತ್ಪನ್ನಗಳ ಕೆಲಸ ಮಾಡುವವರಿಗೆ ಲಾಭವಾಗುವುದು. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ.
ಕುಂಭ: ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಹಿನ್ನಡೆಯಾದೀತು. ಆದರೆ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ. ದಾಂಪತ್ಯದಲ್ಲಿ ವೈಮನಸ್ಯಳಾಗದಂತೆ ಎಚ್ಚರಿಕೆ ವಹಿಸಿ.
ಮೀನ: ಕಷ್ಟದ ಸಮಯದಲ್ಲಿ ಮಿತ್ರರ ಸಹಾಯವೊದಗಿಬರಲಿದೆ. ವಿದ್ಯಾರ್ಥಿಗಳಿಗೆ, ಅಧ್ಯಯನ ಶೀಲರಿಗೆ ಪ್ರಗತಿ. ಆರೋಗ್ಯದ ವಿಚಾರದಲ್ಲಿ ಉದಾಸೀನ ಬೇಡ. ಹಿರಿಯರ ಮಾರ್ಗದರ್ಶನದಂತೆ ನಡೆದುಕೊಂಡರೆ ಉತ್ತಮ. ದೇವತಾ ಪ್ರಾರ್ಥನೆ ಮಾಡಿ.