ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ದೇಹಾರೋಗ್ಯದ ಸಮಸ್ಯೆಗಳು ಮನಸ್ಸಿಗೆ ಸಂತೋಷ ಕೊಡಲಿದೆ. ಉದ್ಯೋಗಿಗಳಿಗೆ ಭವಿಷ್ಯದ ಚಿಂತೆ ಕಾಡೀತು. ಆರ್ಥಿಕವಾಗಿ ಭವಿಷ್ಯದ ಯೋಜನೆಗಳ ಬಗ್ಗೆ ಚಿಂತನೆ ಮಾಡಲಿದ್ದೀರಿ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.
ವೃಷಭ: ಮನೆಯಲ್ಲಿ ಸಂತೋಷದ ವಾತಾವರಣವಿರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾಗಲಿವೆ. ದೇಹಾರೋಗ್ಯದ ವಿಚಾರದಲ್ಲಿ ಉದಾಸೀನ ತೋರಬೇಡಿ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.
ಮಿಥುನ: ಕಷ್ಟದ ಸಮಯದಲ್ಲಿ ನಿಮ್ಮ ಮನೋಸ್ಥೈರ್ಯವೇ ನಿಮ್ಮನ್ನು ಕಾಪಾಡಲಿದೆ. ಕೌಟುಂಬಿಕವಾಗಿ ಕುಟುಂಬ ಸದಸ್ಯರಿಗೆ ಬೆನ್ನುಲುಬಾಗಿ ನಿಲ್ಲಲಿದ್ದೀರಿ. ಅನಿರೀಕ್ಷಿತ ಧನಲಾಭವಾದೀತು. ಕಾರ್ಯನಿಮಿತ್ತ ಓಡಾಟ ನಡೆಸಬೇಕಾಗುತ್ತದೆ.
ಕರ್ಕಟಕ: ವೃತ್ತಿರಂಗದಲ್ಲಿ ಉನ್ನತ ಸ್ಥಾನಕ್ಕೇರುವ ನಿಮ್ಮ ಕನಸು ಸದ್ಯದಲ್ಲೇ ನನಸಾಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಉತ್ತಮ.
ಸಿಂಹ: ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲಿದ್ದೀರಿ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಒದಗಿಬರಲಿದೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಒದಗಿಬರಲಿದೆ. ತಾಳ್ಮೆಯಿರಲಿ.
ಕನ್ಯಾ: ವಿಶೇಷವಾದ ವ್ಯಕ್ತಿಗಳ ಭೇಟಿಯಿಂದ ನಿಮ್ಮ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಮನೆಗೆ ಅನಿರೀಕ್ಷಿತ ನೆಂಟರಿಷ್ಟರ ಆಗಮನವಾಗಲಿದ್ದು, ಸಂತೋಷದ ದಿನವಾಗಿರಲಿದೆ. ಇಷ್ಟ ಭೋಜನ ಮಾಡಲಿದ್ದೀರಿ.
ತುಲಾ: ಸಾಮಾಜಿಕವಾಗಿ ನಿಮ್ಮ ಕೆಲಸಗಳಿಂದ ಇತರರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗುವ ಸಮಯ. ವಾಹನ ಖರೀದಿ ಮಾಡುವ ಯೋಗ ಸದ್ಯದಲ್ಲೇ ನನಸಾಗಲಿದೆ. ಚಿಂತೆ ಬೇಡ.
ವೃಶ್ಚಿಕ: ಸರಕಾರಿ ಲೆಕ್ಕ ಪತ್ರಗಳ ಬಗ್ಗೆ ಎಚ್ಚರಿಕೆಯಿರಲಿ. ಸಹೋದರರೊಂದಿಗಿನ ಭಿನ್ನಾಭಿಪ್ರಾಯಗಳಿಗೆ ಅಂತ್ಯ ಹಾಡಲಿದ್ದೀರಿ. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ಪ್ರೀತಿ ಪಾತ್ರರನ್ನು ಭೇಟಿಯಾಗಲಿದ್ದೀರಿ.
ಧನು: ಮನಸ್ಸಿನ ಮಾತುಗಳಿಗೆ ಕಿವಿಗೊಡುವುದು ಉತ್ತಮ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಅನುಕೂಲವಾಗಲಿದೆ. ವ್ಯಾಪಾರಿಗಳಿಗೆ ಆದಾಯ ವೃದ್ಧಿಯಾಗಲಿದೆ.
ಮಕರ: ನಿಮ್ಮ ಹಳೆಯ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಿ. ಸಾಂಸಾರಿಕವಾಗಿ ಕೆಲವೊಂದು ವಿಚಾರಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಬಂಧು ಮಿತ್ರರ ಭೇಟಿಯಾಗುವ ಯೋಗ.
ಕುಂಭ: ಹೊಸದಾಗಿ ಆರಂಭಿಸಿದ ಉದ್ಯಮದಲ್ಲಿ ಮುನ್ನಡೆ ಕಂಡುಬರುವುದು. ಸೂಕ್ತ ಸಮಯದಲ್ಲಿ ಧನಾಗಮನವಾಗುವುದರಿಂದ ವ್ಯವಹಾರದಲ್ಲಿ ಚೇತರಿಕೆ ಕಂಡುಬರುವುದು. ದೇವತಾ ಪ್ರಾರ್ಥನೆ ಮಾಡಿ.
ಮೀನ: ಸಂಗಾತಿಯ ಕಷ್ಟಕ್ಕೆ ಹೆಗಲುಕೊಡಲಿದ್ದೀರಿ. ನಿಮ್ಮ ವಿಶ್ವಾಸ, ನಂಬಿಕೆ ದುರುಪಯೋಗವಾಗುವ ಸಾಧ್ಯತೆಯಿದೆ. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿರಲಿ. ನಿರುದ್ಯೋಗಿಗಳಿಗೆ ಒಳ್ಳೆಯ ಅವಕಾಶ ಸಿಗಲಿದೆ.