ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ವೃತ್ತಿರಂಗದಲ್ಲಿ ಮೇಲಧಿಕಾರಿಗಳ ಗಮನ ಸೆಳೆಯಲು ಪ್ರಯತ್ನಿಸಲಿದ್ದೀರಿ. ನಿಮ್ಮ ಕೆಲಸದಲ್ಲಿ ನಿಮಗೆ ತೃಪ್ತಿ ಕಂಡುಬರಲಿದೆ. ಆರ್ಥಿಕವಾಗಿ ಅನಿರೀಕ್ಷಿತ ಖರ್ಚು ವೆಚ್ಚಗಳಿಗೆ ಸಿದ್ದರಾಗಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ವೃಷಭ: ವ್ಯಾಪಾರೀ ವರ್ಗದವರಿಗೆ ಆರ್ಥಿಕವಾಗಿ ಧನಗಳಿಕೆಗೆ ಮಾರ್ಗಕಂಡುಬರಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಕೃಷಿಕರಿಗೆ ಕೈಗೆ ಬಂದ ಬೆಳೆಗೆ ತಕ್ಕ ಬೆಲೆ ಸಿಗಲಿದೆ. ಚಿಂತೆ ಬೇಡ.
ಮಿಥುನ: ವೃತ್ತಿರಂಗದಲ್ಲಿ ನಿಮ್ಮದಲ್ಲದ ತಪ್ಪಿಗೆ ಬೆಲೆ ತೆರುವ ಸಂದರ್ಭ ಎದುರಾದೀತು. ಆಪ್ತರೊಂದಿಗೆ ನಿಮ್ಮ ಮನಸ್ಸಿನ ಮಾತುಗಳನ್ನು ಹೇಳಿಕೊಳ್ಳಲಿದ್ದೀರಿ. ಧನಾರ್ಜನೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ.
ಕರ್ಕಟಕ: ಆಸ್ತಿ ವ್ಯವಹಾರದಲ್ಲಿ ವ್ಯಾಜ್ಯಗಳ ಪರಿಹಾರಕ್ಕೆ ಹಿರಿಯರ ಮಧ್ಯಸ್ಥಿಕೆ ಪಡೆಯಲಿದ್ದೀರಿ. ಆರ್ಥಿಕವಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಭವಿಷ್ಯಕ್ಕೆ ಪೂರಕವಾದ ಯೋಜನೆ ಹಾಕಿಕೊಳ್ಳಬೇಕಾಗುತ್ತದೆ.
ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಕಂಡುಬರಲಿದೆ. ಆತ್ಮೀಯರೊಂದಿಗೆ ಸಂಘರ್ಷಗಳಾಗದಂತೆ ಎಚ್ಚರಿಕೆ ವಹಿಸಿ. ವಿದ್ಯಾರ್ಥಿಗಳು ಅಧ್ಯಯನ ನಿಮಿತ್ತ ಪರವೂರಿಗೆ ಹೋಗುವ ಸಂದರ್ಭಗಳು ಬರಲಿವೆ. ದಿನದಂತ್ಯಕ್ಕೆ ನೆಮ್ಮದಿ.
ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಇದುವರೆಗೆ ನಿಮ್ಮನ್ನು ತುಳಿದವರಿಗೆ ತಕ್ಕ ಉತ್ತರ ಕೊಡಲು ಕಾಲ ಸನ್ನಿಹಿತವಾಗಿದೆ. ಸಾಮಾಜಿಕವಾಗಿ ಸ್ಥಾನ ಮಾನ ಹೆಚ್ಚಾಗಲಿದೆ. ವಿಚಾರವಂತರ ಸಂಘದಿಂದ ಹೊಸ ವಿಷಯಗಳನ್ನು ಕಲಿಯಲಿದ್ದೀರಿ.
ತುಲಾ: ಕೌಟುಂಬಿಕವಾಗಿ ಸಂಬಂಧಗಳನ್ನು ಸೂಕ್ಷ್ಮವಾಗಿ ನಿಭಾಯಿಸಬೇಕಾದ ಅನಿವಾರ್ಯತೆ. ಮಾತಿನ ಮೇಲೆ ನಿಗಾ ಇರಲಿ. ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುವ ಸಂದರ್ಭಗಳು ಎದುರಾದೀತು. ತಾಳ್ಮೆ ಅಗತ್ಯ.
ವೃಶ್ಚಿಕ: ಮನೆಯಲ್ಲಿ ಸಂತೋಷದ ವಾತಾವರಣವಿರಲಿದೆ. ಸಂಗಾತಿಯಿಂದ ನಿಮ್ಮ ಕೆಲಸಗಳಿಗೆ ಸಹಕಾರ ಸಿಗುವುದು. ಉದ್ಯೋಗ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಮನೋಭಾವ ಕಂಡುಬರಲಿದೆ. ಕ್ರಿಯಾತ್ಮಕವಾಗಿ ಯೋಚಿಸಿ.
ಧನು: ಮಹಿಳೆಯರಿಗೆ ನೆರೆಹೊರೆಯವರಿಂದ ಸಂಕಷ್ಟಗಳು ಎದುರಾದೀತು. ನಿಮ್ಮ ಮನೆಯ ಸೂಕ್ಷ್ಮತೆಗಳನ್ನು ಬೇರೆಯವರ ಮುಂದೆ ಬಿಟ್ಟುಕೊಡಬೇಡಿ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದ ಬಗ್ಗೆ ಆಸಕ್ತಿ ಕಂಡುಬರಲಿದೆ.
ಮಕರ: ದಂಪತಿಗಳಲ್ಲಿ ಇದುವರೆಗೆ ಇದ್ದ ವೈಮನ್ಯಗಳು ವೃದ್ಧಿಯಾಗಿ ಅನುರಾಗ ಮೂಡಲಿದೆ. ಬೇಡದ ವಿಚಾರಗಳ ಬಗ್ಗೆ ತಲೆಕೆಡಿಸಿಕೊಂಡು ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲಿದ್ದೀರಿ.
ಕುಂಭ: ಬಹುದಿನಗಳ ನಂತರ ನಿಮ್ಮ ಮೆಚ್ಚಿನ ವ್ಯಕ್ತಿಗಳ ಭೇಟಿಯಾಗುವ ಯೋಗ ನಿಮ್ಮದಾಗಲಿದೆ. ಇಷ್ಟಭೋಜನ ಮಾಡುವ ಯೋಗ ನಿಮ್ಮದಾಗಲಿದೆ. ಪ್ರೇಮಿಗಳಿಗೆ ಶುಭದಿನವಾಗಲಿದೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ.
ಮೀನ: ಸರಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದವರಿಗೆ ಸದ್ಯದಲ್ಲೇ ಸಿಹಿ ಸುದ್ದಿ. ವಿದ್ಯಾರ್ಥಿಗಳಿಗೆ ಭವಿಷ್ಯಕ್ಕೆ ಪೂರಕವಾದ ಅವಕಾಶಗಳು ಸಿಗಲಿವೆ. ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಹಿರಿಯರ ಮಾತುಗಳಿಗೆ ಬೆಲೆಕೊಡಿ.