ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಅತಿಯಾಗಿ ಖರ್ಚು ಮಾಡುವುದರಿಂದ ಆರ್ಥಿಕವಾಗಿ ನಷ್ಟಕ್ಕೀಡಾಗುವ ಸಾಧ್ಯತೆ. ಸಾಂಸಾರಿಕವಾಗಿ ನಿರ್ಧಾರ ಕೈಗೊಳ್ಳುವಾಗ ಸಂಗಾತಿಯ ಸಲಹೆ ಪಡೆಯಿರಿ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.
ವೃಷಭ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಬರಲಿದೆ. ಸ್ವಯಂ ವೃತ್ತಿಯವರಿಗೆ ಆರ್ಥಿಕವಾಗಿ ಲಾಭವಾದೀತು. ಉದ್ಯೋಗ ಬದಲಾವಣೆಗೆ ಪ್ರಯತ್ನಿಸಲಿದ್ದೀರಿ. ಸರಕಾರಿ ಲೆಕ್ಕಪತ್ರಗಳ ಬಗ್ಗೆ ನಿಗಾ ಇರಲಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ಮಿಥುನ: ಹಿಂದೆ ಮಾಡಿದ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಿ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ಮಕ್ಕಳ ವಿಚಾರದಲ್ಲಿ ಸಂಗಾತಿಯೊಂದಿಗೆ ಚರ್ಚೆಗಳಾದೀತು. ಕಿರು ಓಡಾಟ ನಡೆಸುವಿರಿ.
ಕರ್ಕಟಕ: ನಿರ್ಧಾರ ಕೈಗೊಳ್ಳುವಾಗ ಗೊಂದಲಗಳು ಕಾಡಿ ಬರಲಿವೆ. ಆತುರದ ಕೈಗೆ ಬುದ್ಧಿ ಕೊಡಬೇಡಿ. ಉದ್ಯೋಗ ಕ್ಷೇತ್ರದಲ್ಲಿ ಕಠಿಣ ಸವಾಲುಗಳು ಎದುರಾಗಲಿವೆ. ಇಂದು ಯಾರಿಗೂ ಸಾಲ ಕೊಡಲು ಹೋಗಬೇಡಿ.
ಸಿಂಹ: ನಿಮ್ಮ ಭವಿಷ್ಯಕ್ಕಾಗಿ ಕೆಲವು ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗುವುದು. ವ್ಯಾಪಾರೀ ವರ್ಗದವರಿಗೆ ಹಿತಶತ್ರುಗಳ ಕಾಟದಿಂದ ಮುಕ್ತಿ ಸಿಗುವುದು. ನೆರೆಹೊರೆಯವರಿಂದ ಸಹಕಾರ ಕಂಡುಬರುವುದು.
ಕನ್ಯಾ: ಸಂಗಾತಿಯ ಬಹುದಿನಗಳ ಆಸೆ ಈಡೇರಿಸಲಿದ್ದೀರಿ. ವಾಹನ ಸಂಚಾರ ಮಾಡುವಾಗ ಹೆಚ್ಚಿನ ಜಾಗರೂಕತೆ ಅಗತ್ಯ. ಮಕ್ಕಳಿಂದ ಸಂತೋಷ ಸಿಗಲಿದೆ. ಶೈಕ್ಷಣಿಕ ರಂಗದಲ್ಲಿರುವವರಿಗೆ ಪ್ರಗತಿ ಕಂಡುಬರಲಿದೆ. ಚಿಂತೆ ಬೇಡ.
ತುಲಾ: ಪಾಲು ಬಂಡವಾಳ ಹೂಡಿಕೆಗೆ ಇದು ಸಕಾಲ. ಸಹೋದ್ಯೋಗಿಗಳಿಂದ ನಿಮ್ಮ ಕಷ್ಟಕ್ಕೆ ಪರಿಹಾರ ಸಿಗಲಿದೆ. ಮಹಿಳೆಯರಿಗೆ ಚಿನ್ನಾಭರಣಗಳನ್ನು ಜೋಪಾನ ಮಾಡುವ ಜವಾಬ್ಧಾರಿ ಹೆಗಲಿಗೇರಲಿದೆ. ಎಚ್ಚರಿಕೆಯಿರಲಿ.
ವೃಶ್ಚಿಕ: ಬಹಳ ದಿನಗಳ ನಂತರ ಹಳೆಯ ಮಿತ್ರರನ್ನು ಭೇಟಿಯಾದ ಸಂತೋಷ ನಿಮ್ಮದಾಗುವುದು. ಆಹಾರೋತ್ಪನ್ನಗಳ ಉದ್ಯಮಗಳಿಗೆ ಮುನ್ನಡೆಯ ಯೋಗ. ಆರ್ಥಿಕವಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳಿತು.
ಧನು: ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ನೀರಿನ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ಕಾರ್ಯನಿಮಿತ್ತ ದೂರ ಸಂಚಾರಕ್ಕೆ ಸಿದ್ಧರಾಗಲಿದ್ದೀರಿ.
ಮಕರ: ವಿಶೇಷವಾದ ವ್ಯಕ್ತಿಗಳ ಭೇಟಿಯಿಂದ ನಿಮಗೆ ಕಾರ್ಯಾನುಕೂಲವಾಗಲಿದೆ. ನಿಶ್ಚಿತ ಕೆಲಸಗಳನ್ನು ನಿಗದಿತ ಸಮಯದಲ್ಲಿ ಮಾಡಿ ಮುಗಿಸಲಿದ್ದೀರಿ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಇದ್ದರೆ ಆರೋಗ್ಯ ಸಮಸ್ಯೆಯಾದೀತು.
ಕುಂಭ: ಸರಕಾರಿ ಉದ್ಯೋಗಿಗಳಿಗೆ ಉನ್ನತ ಸ್ಥಾನಕ್ಕೇರುವ ಕನಸು ಸದ್ಯದಲ್ಲೇ ನನಸಾಗುವುದು. ಬೇರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಮನೆಗೆ ಅನಿರೀಕ್ಷಿತ ಬಂಧು ಮಿತ್ರರ ಆಗಮನವಾಗಲಿದೆ.
ಮೀನ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಆರ್ಥಿಕವಾಗಿ ಧನ ಗಳಿಕೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ಮಾಡಲಿದ್ದೀರಿ. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ.