ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗಲಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರಗತಿ. ಆರ್ಥಿಕವಾಗಿ ಹಣಕಾಸಿನ ಖರ್ಚು ವೆಚ್ಚಗಳು ಕಂಡುಬರಲಿದೆ.
ವೃಷಭ: ವೃತ್ತಿರಂಗದಲ್ಲಿ ಹೆಚ್ಚಿನ ಸ್ಥಾನ ಮಾನ ಸಿಗಲಿದೆ. ಆದರೆ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕು. ಮನಸ್ಸಿನ ಭಾವನೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದಾರೆ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಲಿದ್ದೀರಿ.
ಮಿಥುನ: ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ವ್ಯಾಪಾರೀ ವರ್ಗದವರಿಗೆ ಆರ್ಥಿಕವಾಗಿ ಲಾಭವಾದೀತು. ಹಿರಿಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ಯೋಗ.
ಕರ್ಕಟಕ: ಮೇಲ್ವರ್ಗದ ಅಧಿಕಾರಿಗಳೊಂದಿಗೆ ಸಂಘರ್ಷಗಳಾಗದಂತೆ ಎಚ್ಚರಿಕೆ ವಹಿಸಿ. ಇಷ್ಟಾರ್ಥ ಸಿದ್ಧಿಗಾಗಿ ದೇವರ ಪ್ರಾರ್ಥನೆ ಮಾಡಿ. ನೆರೆಹೊರೆಯವರಿಗೆ ಸಹಾಯ ಮಾಡಲು ಮುಂದಾಗಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.
ಸಿಂಹ: ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ವ್ಯಾಪಾರೀ ವರ್ಗದವರಿಗೆ ಹಿತಶತ್ರುಗಳ ಕಾಟ ಕಂಡುಬಂದೀತು. ಆದರೂ ಅಂತಿಮ ಜಯ ನಿಮ್ಮದಾಗಲಿದೆ. ಕಾರ್ಯನಿಮಿತ್ತ ಓಡಾಟ ನಡೆಸಲಿದ್ದೀರಿ.
ಕನ್ಯಾ: ಹೊಸದಾಗಿ ಕೆಲಸ ಆರಂಭಿಸಲು ಇದು ಸಕಾಲ. ಆರ್ಥಿಕವಾಗಿ ಹಣಕಾಸಿನ ಅಡಚಣೆಗಳು ದೂರವಾಗಲಿದೆ. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ದೇಹಾರೋಗ್ಯದಲ್ಲಿ ಕಂಡುಬರುವ ಸಮಸ್ಯೆಗಳನ್ನು ಉಪೇಕ್ಷಿಸದಿರಿ.
ತುಲಾ: ನಿಮ್ಮ ಸ್ವಯಂ ಪ್ರಯತ್ನಗಳಿಗೆ ತಕ್ಕ ಫಲ ಸಿಗಲಿದೆ. ವಾಹನ ಖರೀದಿ ಯೋಗ ಶೀಘ್ರದಲ್ಲೇ ಕೂಡಿಬರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಪ್ರೋತ್ಸಾಹದಿಂದ ಸಾಧನೆ ಮಾಡಲಿದ್ದೀರಿ. ಚಿಂತೆ ಬೇಡ.
ವೃಶ್ಚಿಕ: ಉದ್ಯೋಗ ಕ್ಷೇತ್ರದಲ್ಲಿ ಜವಾಬ್ಧಾರಿಯುತ ಸ್ಥಾನಗಳು ನಿಮ್ಮದಾಗಲಿದೆ. ಕೋರ್ಟು ಕಚೇರಿ ಕೆಲಸಗಳಲ್ಲಿ ಜಯ. ನೆರೆಹೊರೆಯವರೊಂದಿಗೆ ಸಂಬಂಧ ವೃದ್ಧಿಯಾಗಲಿದೆ. ಹಳೆಯ ಮಿತ್ರರ ಭೇಟಿಯಿಂದ ಸಂತೋಷವಾಗಲಿದೆ.
ಧನು: ಕೈಗೊಂಡ ಕೆಲಸ ಕಾರ್ಯಗಳಲ್ಲಿ ಜಯವಿರಲಿದ್ದು, ಸಂತೋಷ, ನೆಮ್ಮದಿ ನಿಮ್ಮದಾಗಲಿದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಲಾಭ ಕಂಡುಬರುವುದು. ದಾಂಪತ್ಯದಲ್ಲಿ ಹೊಂದಾಣಿಕೆ ಕಂಡುಬರುವುದು.
ಮಕರ: ಬಂಧು ಮಿತ್ರರಿಂದ ಪರಸ್ಪರ ಸಹಕಾರ ಕಂಡುಬರಲಿದೆ. ಸಾಂಸಾರಿಕವಾಗಿ ನೆಮ್ಮದಿಯ ದಿನಗಳಾಗಲಿವೆ. ದೇವತಾ ಕಾರ್ಯಗಳಲ್ಲಿ ಆಸಕ್ತಿ ಕಂಡುಬರುವುದು. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ತಾಳ್ಮೆಯಿರಲಿ.
ಕುಂಭ: ನಿಮ್ಮ ಸಾಮರ್ಥ್ಯಕ್ಕೆ ಮೀರಿದ ದುಡಿಮೆಯಿಂದ ದೇಹಾಯಾಸವಾದೀತು. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸರ್ಕಾರಿ ಉದ್ಯೋಗಿಗಳಿಗೆ ಮುಂಬಡ್ತಿಯ ಯೋಗ. ಅನ್ಯರ ಸಹಾಯ ನಿರೀಕ್ಷಿಸದಿರಿ. ದೇವತಾ ಪ್ರಾರ್ಥನೆ ಮರೆಯದಿರಿ.
ಮೀನ: ಕಾರ್ಯರಂಗದಲ್ಲಿ ಶತ್ರುಭಯ ಕಂಡುಬಂದೀತು. ಯಂತ್ರೋಪಕರಣಗಳ ಕೆಲಸದಲ್ಲಿರುವವರಿಗೆ ಅಪಘಾತದ ಭಯವಿದೆ. ಎಚ್ಚರಿಕೆ ಅಗತ್ಯ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸುವಿರಿ.