ಮೇಷ: ಅನಿರೀಕ್ಷಿತವಾಗಿ ದೂರ ಪ್ರಯಾಣ ಮಾಡಬೇಕಾಗಿ ಬರಲಿದೆ. ಮನಸ್ಸಲ್ಲಿ ಕೊರೆಯುತ್ತಿರುವ ವಿಚಾರಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳುವುದು ಉತ್ತಮ. ಆರ್ಥಿಕವಾಗಿ ಖರ್ಚು ವೆಚ್ಚಗಳಾಗಲಿವೆ.
ವೃಷಭ: ನಿಮ್ಮ ನೆಮ್ಮದಿ ನಿಮ್ಮ ಕೈಯಲ್ಲೇ ಇದೆ. ಅನಗತ್ಯ ವಿಚಾರಗಳಿಗೆ ಮೂಗು ತೂರಿಸಲು ಹೋಗಬೇಡಿ. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಹೆಚ್ಚಿನ ಪರಿಶ್ರಮವಿಲ್ಲದೇ ಫಲ ಸಿಗದು. ಎಚ್ಚರಿಕೆ ಅಗತ್ಯ.
ಮಿಥುನ: ವ್ಯವಹಾರದಲ್ಲಿ ಧಾರಾಳತನ ಪ್ರದರ್ಶಿಸಲಿದ್ದೀರಿ. ಮನೆಯಲ್ಲಿ ಗುರುಹಿರಿಯರ ಮಾತಿಗೆ ಕಿವಿಗೊಡುವುದು ಉತ್ತಮ. ದೂರದ ವ್ಯವಹಾರಗಳಿಂದ ಆದಾಯ ಹೆಚ್ಚಲಿದೆ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ.
ಕರ್ಕಟಕ: ವೃತ್ತಿರಂಗದಲ್ಲಿ ನಿರೀಕ್ಷಿತ ಸ್ಥಾನ ಮಾನ ನಿಮ್ಮದಾಗಲಿದೆ. ಅನಿವಾರ್ಯ ಕಾರಣಗಳಿಗೆ ದೂರ ಸಂಚಾರ ಮಾಡಲಿದ್ದು, ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ಸರಕಾರಿ ಲೆಕ್ಕಪತ್ರಗಳ ಬಗ್ಗೆ ನಿಗಾ ಇರಲಿ.
ಸಿಂಹ: ಇಂದು ಎಲ್ಲರ ನಡುವೆ ನೀವೇ ಕೇಂದ್ರಬಿಂದುವಾಗಲಿದ್ದೀರಿ. ಮಾತಿನ ಮೇಲೆ ನಿಗಾ ಇರಲಿ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಚೇತರಿಕೆ ಕಂಡುಬರಲಿದೆ. ಭವಿಷ್ಯದ ಯೋಜನೆಗೆ ಬಂಡವಾಳ ಹೂಡಲಿದ್ದೀರಿ.
ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಕೆಲವೊಂದು ಬದಲಾವಣೆಗಳಾಗಲಿವೆ. ಮಹಿಳೆಯರ ಪಾಲಿಗೆ ಶುಭ ದಿನವಾಗಿದ್ದು, ಆತ್ಮೀಯರ ಭೇಟಿಯಾಗಲಿದ್ದೀರಿ. ಇನ್ನೊಬ್ಬರಿಗೆ ಸಹಾಯ ಮಾಡುವಾಗ ಪೂರ್ವಾಪರ ತಿಳಿದು ಮುನ್ನಡೆಯಿರಿ.
ತುಲಾ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರುವುದು. ವೈಯಕ್ತಿಕ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಸ್ವಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.
ವೃಶ್ಚಿಕ: ಬಹಳ ದಿನಗಳ ನಂತರ ಇಷ್ಟಜನರ ಭೇಟಿಯಾಗುವ ಯೋಗ ನಿಮ್ಮದಾಗಲಿದೆ. ನೆರೆಹೊರೆಯವರ ಚಾಡಿ ಮಾತುಗಳು ಮನಸ್ಸಿಗೆ ಬೇಸರ ತಂದೀತು. ತಾಳ್ಮೆಯಿರಲಿ. ಕುಲದೇವರ ಪ್ರಾರ್ಥನೆ ಮಾಡಿ.
ಧನು: ಇತರರಿಗೆ ನಿಮ್ಮ ಮೇಲೆ ಸಂಶಯ ಬರುವಂತೆ ನಡೆದುಕೊಳ್ಳಬೇಡಿ. ಸಂಗಾತಿಯ ಸಲಹೆಗಳನ್ನು ಪಾಲಿಸಿದರೆ ಉತ್ತಮ. ಗೃಹಿಣಿಯರಿಗೆ ಕೆಲಸದೊತ್ತಡ ಹೆಚ್ಚಾಗಲಿದೆ. ವಾಹನ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ.
ಮಕರ: ನಿಮ್ಮ ಸುತ್ತಮುತ್ತಲಿರುವವರೇ ನಿಮಗೆ ವಂಚನೆ ಮಾಡುತ್ತಿದ್ದಾರೆ ಎನಿಸಬಹುದು. ತಾಳ್ಮೆ, ಸಂಯಮ ಮುಖ್ಯ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಕುಂಭ: ಕಳೆದುಕೊಂಡಿದ್ದನ್ನು ಮರಳಿ ಪಡೆಯಲು ಪ್ರಯತ್ನ ನಡೆಸಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ಸ್ಥಾನ ಮಾನ ಪಡೆಯಲಿದ್ದೀರಿ. ನಿಮ್ಮ ಕೆಲವೊಂದು ನಿರ್ಧಾರಗಳು ಪೋಷಕರಿಗೆ ಅಸಮಾಧಾನ ತರಲಿದೆ.
ಮೀನ: ಸಹೋದರರೊಂದಿಗಿನ ಭಿನ್ನಾಬಿಪ್ರಾಯಗಳನ್ನು ಸರಿಪಡಿಸಿಕೊಳ್ಳಲಿದ್ದೀರಿ. ಆರ್ಥಿಕವಾಗಿ ಚೇತರಿಕೆ ಕಂಡುಬರಲಿದ್ದು, ಹೊಸ ವ್ಯವಹಾರಕ್ಕೆ ಕೈ ಹಾಕಲಿದ್ದೀರಿ. ಮನೆಗೆ ಬಂಧು ಮಿತ್ರರ ಆಗಮನವಾಗಲಿದ್ದು, ಸಂತೋಷವಿರಲಿದೆ.