ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶುಕ್ರವಾರ, 6 ಆಗಸ್ಟ್ 2021 (08:37 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನಿಮ್ಮ ಪ್ರೀತಿ ಪಾತ್ರರು ನೀಡುವ ಉಡುಗೊರೆಯಿಂದ ಸಂತುಷ್ಟರಾಗಲಿದ್ದೀರಿ. ಇಷ್ಟಮಿತ್ರರೊಂದಿಗೆ ಇಷ್ಟಭೋಜನ ಮಾಡುವ ಯೋಗ ನಿಮ್ಮದಾಗುವುದು. ಹಣಕಾಸಿನ ಖರ್ಚು ವೆಚ್ಚದ ಬಗ್ಗೆ ನಿಗಾ ಇರಲಿ. ತಾಳ್ಮೆ ಅಗತ್ಯ.

ವೃಷಭ: ಅಂದುಕೊಂಡ ಕೆಲಸವಾಗದ ಅಸಹನೆಯನ್ನು ಪ್ರೀತಿ ಪಾತ್ರರ ಮೇಲೆ ತೋರಿಸುವುದರಿಂದ ಭಿನ್ನಾಭಿಪ್ರಾಯಗಳಾಗಬಹದು. ತಾಳ್ಮೆ ಸಂಯಮ ಅಗತ್ಯ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಲಿದ್ದೀರಿ.

ಮಿಥುನ: ಅನ್ಯರ ಮೇಲೆ ಅತಿಯಾದ ಅವಲಂಬನೆ ಒಳ್ಳೆಯದಲ್ಲ. ನಿಮ್ಮ ವೃತ್ತಿರಂಗದಲ್ಲಿ ಉನ್ನತ ಸ್ಥಾನಕ್ಕೇರಲು ನೀವೇ ಅವಕಾಶಗಳನ್ನು ಕಂಡುಕೊಳ್ಳಲಿದ್ದೀರಿ. ಹಣ ಗಳಿಕೆಗೆ ಅನ್ಯ ಮಾರ್ಗಗಳತ್ತ ಚಿಂತನೆ ನಡೆಸಬೇಕಾಗುತ್ತದೆ.

ಕರ್ಕಟಕ: ಹಿರಿಯರ ಸಲಹೆಗಳಿಗೆ ಕಿವಿಗೊಟ್ಟು ನಿರ್ಧಾರಗಳನ್ನು ತೆಗೆದುಕೊಂಡರೆ ಯಶಸ್ಸು ಖಂಡಿತಾ. ಆರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ದೂರವಾಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರ ಕಂಕಣ ಬಲ ಕೂಡಿಬರುವುದು.

ಸಿಂಹ: ಅನಿವಾರ್ಯವಾಗಿ ನೀವು ಅಂದುಕೊಂಡಿದ್ದ ಯೋಜನೆಗಳನ್ನು ಕೆಲವು ದಿನಗಳ ಮಟ್ಟಿಗೆ ಮುಂದೂಡಬೇಕಾಗಬಹುದು. ಕೌಟುಂಬಿಕವಾಗಿ ಹೆಚ್ಚಿನ ಜವಾಬ್ಧಾರಿ ಹೆಗಲಿಗೇರಲಿದೆ. ಕಾರ್ಯನಿಮಿತ್ತ ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಕನ್ಯಾ: ನಿಮ್ಮ ಮುಂದಿನ ಭವಿಷ್ಯಕ್ಕೆ ಕೆಲವೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಅನಿವಾರ್ಯತೆ ಎದುರಾಗಲಿದೆ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಗೆ ಅವಕಾಶ ಮಾಡಿಕೊಡಬೇಡಿ.

ತುಲಾ: ವೃತ್ತಿರಂಗದಲ್ಲಿ ಉತ್ತಮ ಅವಕಾಶಗಳು ಬಂದಾಗ ಕಣ್ಮುಚ್ಚಿ ಕೂರದಿರಿ. ಮೇಲಧಿಕಾರಿಗಳ ವಿಶ್ವಾಸ ಗಳಿಸಲು ಯತ್ನಿಸಲಿದ್ದೀರಿ. ಕಟ್ಟಡ ಕಾಮಗಾರಿಗಳಿಗೆ ಚಾಲನೆ ನೀಡಲು ಸಕಾಲ. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ.

ವೃಶ್ಚಿಕ: ಹೊಸ ವ್ಯಾಪಾರ, ವ್ಯವಹಾರಗಳಿಗೆ ಕೈ ಹಾಕಲು ಇದು ಸಕಾಲ. ಆರ್ಥಿಕವಾಗಿ ಚೇತರಿಕೆಯ ವಾತಾವರಣ ಕಂಡುಬರಲಿದೆ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ಧನು: ನೀವು ಬಯಸಿದ್ದನ್ನು ಪಡೆಯಬೇಕೆಂದರೆ ಇನ್ನೊಂದನ್ನು ಕಳೆದುಕೊಳ್ಳಲೇಬೇಕಾಗುತ್ತದೆ. ಮಕ್ಕಳ ವಿಚಾರದಲ್ಲಿ ಸಂಗಾತಿಯೊಂದಿಗೆ ಅನಗತ್ಯ ಸಂಘರ್ಷ ಬೇಡ. ನೂತನ ದಂಪತಿಗಳಿಗೆ ವಿಶೇಷ ಸುದ್ದಿ ಕೇಳಿಬರಲಿದೆ.

ಮಕರ: ಯಂತ್ರೋಪಕರಣಗಳ ವೃತ್ತಿಯಲ್ಲಿರುವವರಿಗೆ ಮುನ್ನಡೆಯ ಯೋಗವಿದೆ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗುವುದು. ವ್ಯವಹಾರಕ್ಕೆ ಇದುವರೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಲಿದೆ. ಚಿಂತೆ ಬೇಡ.

ಕುಂಭ: ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಪಲ್ಲಟದ ಭೀತಿ ಎದುರಾಗಲಿದೆ. ನಿಮ್ಮದಲ್ಲದ ತಪ್ಪಿಗೆ ದಂಡ ತೆರುವ ಪರಿಸ್ಥಿತಿ ಬರಬಹುದು, ಎಚ್ಚರಿಕೆಯಿಂದಿರಿ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಶುಭ.

ಮೀನ: ಮನಸ್ಸಿನ ಮಾತುಗಳನ್ನು ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳಲಿದ್ದೀರಿ. ಮನೆಯಲ್ಲಿ ಶುಭ ಮಂಗಲ ಕಾರ್ಯಕ್ಕೆ ಸಿದ್ಧತೆ ನಡೆಸಲಿದ್ದೀರಿ. ಸಾಲ ವಸೂಲಾತಿ ಚಿಂತೆ ಕಾಡೀತು. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ದೊರೆಯಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿಷ್ಣು ಸಹಸ್ರನಾಮದ ಫಲ ಸಿಗಬೇಕಾದರೆ ಯಾವ ಕ್ರಮದಲ್ಲಿ ಓದಬೇಕು, ಸೂಕ್ತ ಸಮಯ ಯಾವುದು

ಸಂಕಟ ನಾಶನ ಗಣೇಶ ಸ್ತೋತ್ರ ಕನ್ನಡದಲ್ಲಿ

ಗಣಪತಿಯ ಮೂಲ ಮಂತ್ರವನ್ನು ಎಷ್ಟು ಬಾರಿ ಜಪಿಸಿದರೆ ಫಲ ಗೊತ್ತಾ

ರಾಜ ರಾಜೇಶ್ವರಿ ಅಷ್ಟಕಂ ಸ್ತೋತ್ರ ಕನ್ನಡದಲ್ಲಿ ಓದಿ

ಇಂದು ಶಿವನ ಈ ಮಂತ್ರವನ್ನು ತಪ್ಪದೇ ಓದಿ ಸಕಲ ಪಾಪ ಪರಿಹಾರವಾಗುತ್ತದೆ

ಮುಂದಿನ ಸುದ್ದಿ
Show comments