ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ನಿಧಾನಿಸಿ ನೋಡಿದಾಗ ನೀವು ಮಾಡಿದ ತಪ್ಪು ನಿಮಗೇ ತಿಳಿಯುವುದು. ಸಾಂಸಾರಿಕವಾಗಿ ಮಾತಿನ ಮೇಲೆ ನಿಗಾ ಇಲ್ಲದಿದ್ದರೆ ಭಿನ್ನಾಭಿಪ್ರಾಯಗಳು ತಪ್ಪದು. ಆರ್ಥಿಕವಾಗಿ ಕೊಂಚ ಚೇತರಿಕೆ ವಾತಾವರಣವಿರುವುದು. ತಾಳ್ಮೆಯಿರಲಿ.
ವೃಷಭ: ಮಂಗಳ ವಸ್ತ್ರಾದಿಗಳ ಖರೀದಿಗೆ ಖರ್ಚು ವೆಚ್ಚಗಳಾಗಲಿವೆ. ಹಿರಿಯರಿಗೆ ದೇಹಾರೋಗ್ಯದಲ್ಲಿ ಕೊಂಚ ಏರುಪೇರಾದೀತು, ಆತಂಕ ಬೇಡ. ನಿರುದ್ಯೋಗಿಗಳು ಉದ್ಯೋಗ ಸಂದರ್ಶನಕ್ಕೆ ಪರವೂರಿಗೆ ಸಂಚರಿಸಲಿದ್ದಾರೆ.
ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ಇದುವರೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಿ, ಅಂದುಕೊಂಡ ಕೆಲಸಗಳು ಸುಗಮವಾಗಿ ನೆರವೇರುವುದು. ಕಷ್ಟದಲ್ಲಿರುವ ಮಿತ್ರರಿಗೆ ಸಹಾಯ ಮಾಡಲಿದ್ದೀರಿ. ಹೊಸ ಸ್ಥಳಕ್ಕೆ ಭೇಟಿ ಕೊಡಲಿದ್ದೀರಿ.
ಕರ್ಕಟಕ: ನಿಮ್ಮ ವೈಯಕ್ತಿಕ ವಿಚಾರದಲ್ಲಿ ಮೂರನೆಯವರು ಮೂಗು ತೂರಿಸಲು ಅವಕಾಶ ಕೊಡಬೇಡಿ. ಕೌಟುಂಬಿಕ ವಿಚಾರಕ್ಕೆ ಬಂದರೆ ಸಿಂಹದಂತೆ ಹೋರಾಡಲಿದ್ದೀರಿ. ಪ್ರೀತಿ ಪಾತ್ರರ ಕಷ್ಟಕ್ಕೆ ಹೆಗಲು ಕೊಡಲಿದ್ದೀರಿ. ಚಿಂತೆ ಬೇಡ.
ಸಿಂಹ: ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಬಾರದೇ ನಿರಾಸೆಯಾದೀತು. ಇಂದು ಯಾರಿಗೂ ಸಾಲ ಕೊಡಲು ಹೋಗಬೇಡಿ. ನೆರೆಹೊರೆಯವರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲಿದ್ದೀರಿ.
ಕನ್ಯಾ: ಕರ್ತವ್ಯದ ವಿಚಾರಕ್ಕೆ ಬಂದರೆ ನಿಮ್ಮನ್ನು ತಡೆಯಲು ಯಾರಿಗೂ ಸಾಧ್ಯವಾಗದು. ದೇಹಾರೋಗ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸಲಿದ್ದೀರಿ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಶುಭವಾಗುವುದು.
ತುಲಾ: ಅರ್ಧಕ್ಕೇ ನಿಂತು ಹೋದ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಉದ್ಯೋಗ ಕ್ಷೇತ್ರದ ಸಮಸ್ಯೆಗಳಿಗೆ ಶನಿದೇವರ ಪೂಜೆ ಮಾಡಿ. ನೂತನ ದಂಪತಿಗಳಿಗೆ ಶೀಘ್ರದಲ್ಲೇ ಸಂತಾನ ಫಲ ಸೂಚನೆ ದೊರೆಯಲಿದೆ. ದೇವತಾ ಪ್ರಾರ್ಥನೆ ಮಾಡಿ.
ವೃಶ್ಚಿಕ: ಸಾಮಾಜಿಕವಾಗಿ ನೀವು ಮಾಡುವ ಕೆಲಸಗಳಿಂದ ನಿಮ್ಮ ಪ್ರತಿಷ್ಠೆ ಹೆಚ್ಚಲಿದೆ. ಸಂಗಾತಿಯ ಮನದಾಸೆ ಈಡೇರಿಸಲು ಮುಂದಾಗಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ಹೊಸ ಜನರ ಭೇಟಿಯಾಗಲಿದ್ದೀರಿ.
ಧನು: ಮಕ್ಕಳ ವಿಚಾರದಲ್ಲಿ ಅನಗತ್ಯವಾಗಿ ಮೂಗು ತೂರಿಸಲು ಹೋಗಬೇಡಿ. ಮನೆಗೆ ಅನಿರೀಕ್ಷಿತವಾಗಿ ನೆಂಟರಿಷ್ಟರ ಆಗಮನವಾಗಲಿದೆ. ಗೃಹಿಣಿಯರಿಗೆ ಬಿಡುವಿಲ್ಲದ ಕೆಲಸ. ಕೃಷಿಕರಿಗೆ ಆರ್ಥಿಕವಾಗಿ ನಷ್ಟ ಎದುರಿಸಬೇಕಾದೀತು.
ಮಕರ: ಅಂದುಕೊಂಡಿದ್ದ ಕೆಲಸ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂಬ ಬೇಸರ ಕಾಡಲಿದೆ. ಸಂಗಾತಿಯ ಸಲಹೆಗಳು ಉಪಯೋಗಕ್ಕೆ ಬರಲಿದೆ. ಮಕ್ಕಳ ವಿಚಾರದಲ್ಲಿ ಕೆಲವೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದೀರಿ.
ಕುಂಭ: ಹಳೆಯ ಮಿತ್ರರ ಸಮಾಗಮದಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ವ್ಯಾವಹಾರಿಕವಾಗಿ ಲಾಭದಾಯಕ ದಿನಗಳಿವು. ಆದರೆ ಆರ್ಥಿಕವಾಗಿ ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ. ಭವಿಷ್ಯದ ಬಗ್ಗೆ ಹೊಸ ಯೋಜನೆ ಹಾಕಿಕೊಳ್ಳಲಿದ್ದೀರಿ.
ಮೀನ: ನಿಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವ ಪರಿಸ್ಥಿತಿ ಎದುರಾದೀತು. ಮಾತಿನ ಮೇಲೆ ನಿಗಾ ಇರಲಿ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ.