Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶನಿವಾರ, 12 ಜೂನ್ 2021 (08:51 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವೃತ್ತಿರಂಗದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆಯಿರಲಿ. ಮೇಲಧಿಕಾರಿಗಳ ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ಕೌಟುಂಬಿಕವಾಗಿ ಮಕ್ಕಳ ದೇಹಾರೋಗ್ಯ ಚಿಂತೆಗೆ ಕಾರಣವಾಗಲಿದೆ. ತಾಳ್ಮೆಯಿರಲಿ.

ವೃಷಭ: ವ್ಯವಹಾರದಲ್ಲಿ ಲಾಭ-ನಷ್ಟಗಳು ಸಾಮಾನ್ಯ. ಎರಡನ್ನೂ ಸಮನಾಗಿ ಸ್ವೀಕರಿಸುವ ಮನೋಭಾವವಿರಲಿ. ಸಾಮಾಜಿಕವಾಗಿ ನಿಮ್ಮ ಸ್ಥಾನ ವೃದ್ಧಿಯಾದೀತು. ವಿದ್ಯಾರ್ಥಿಗಳಿಗೆ ಭವಿಷ್ಯದ ಹಾದಿ ಸುಗಮವಾಗಲಿದೆ.

ಮಿಥುನ: ನಿರುದ್ಯೋಗಿಗಳು ಉದ್ಯೋಗ ಬೇಟೆಗಾಗಿ ಪರವೂರಿಗೆ ಸಂಚರಿಸಲಿದ್ದಾರೆ. ಇಷ್ಟಮಿತ್ರರ ಭೇಟಿ ಸಾಧ‍್ಯತೆಯಿದೆ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಹೋದರೆ ಆರೋಗ್ಯ ಸಮಸ್ಯೆ ಕಂಡುಬಂದೀತು. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ಕರ್ಕಟಕ: ಮಹಿಳೆಯರ ವಿಚಾರದಲ್ಲಿ ಎಚ್ಚರಿಕೆಯಿಂದ ವ್ಯವಹರಿಸದೇ ಇದ್ದರೆ, ಅಪವಾದಕ್ಕೆ ಗುರಿಯಾಗಬೇಕಾದೀತು. ಕಳೆದು ಹೋದ ವಿಚಾರದ ಬಗ್ಗೆ ತಲೆಕೆಡಿಸಿಕೊಂಡು ನೆಮ್ಮದಿ ಹಾಳುಮಾಡಿಕೊಳ್ಳಬೇಡಿ. ಕಿರು ಓಡಾಟ ನಡೆಸಬೇಕಾಗುತ್ತದೆ.

ಸಿಂಹ: ಕಾರ್ಯನಿಮಿತ್ತ ಕತ್ತೆ ಕಾಲು ಹಿಡಿ ಎಂಬ ಗಾದೆ ನಿಮಗೆ ಇಂದು ಚೆನ್ನಾಗಿಯೇ ಅನ್ವಯಿಸಲಿದೆ. ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಶೈಕ್ಷಣಿಕ ರಂಗದಲ್ಲಿರುವವರಿಗೆ ಭವಿಷ್ಯದ ಭೀತಿ ಕಾಡೀತು. ದೇವತಾ ಪ್ರಾರ್ಥನೆ ಮಾಡಿ.

ಕನ್ಯಾ: ನಿಮ್ಮ ಕೆಲಸವನ್ನು ಪರರಿಗೆ ಹೋಲಿಸಿಕೊಂಡು ಕೀಳರಿಮೆ ಬೆಳೆಸಿಕೊಳ್ಳಬೇಡಿ. ಕೌಟುಂಬಿಕವಾಗಿ ನಿಮ್ಮ ಹಠಮಾರಿತನದಿಂದ ಭಿನ್ನಾಭಿಪ್ರಾಯಗಳುಂಟಾದೀತು. ಹಿರಿಯರಿಗೆ ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಮೂಡಲಿದೆ.

ತುಲಾ: ವೃತ್ತಿರಂಗದಲ್ಲಿ ಪ್ರಭಾವೀ ವ್ಯಕ್ತಿಗಳ ಭೇಟಿಯಿಂದ ನಿಮ್ಮ ಕಾರ್ಯಸಾಧನೆಯಾದೀತು. ಸರಕಾರಿ ಲೆಕ್ಕಪತ್ರಗಳನ್ನು ಜೋಪಾನವಾಗಿಟ್ಟುಕೊಳ್ಳಿ. ಆದಾಯ ವೃದ್ಧಿಗೆ ನಾನಾ ದಾರಿಗಳನ್ನು ಹುಡುಕಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ವೃಶ್ಚಿಕ: ಜೀವನದಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಮಯವಿದು. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿವೆ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದಿಂದ ಲಾಭವಾಗಲಿದೆ. ಚಿಂತೆ ಬೇಡ.

ಧನು: ನಿಮ್ಮ ವೈಯಕ್ತಿಕ ವಿಚಾರಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ಮಹಿಳೆಯರ ಗುಟ್ಟು ರಟ್ಟಾಗುವ ಸಮಯ. ಸಂಗಾತಿಯ ಕೆಲವು ಮಾತುಗಳು ಉಪದೇಶವೆನಿಸೀತು. ಆದರೆ ಅಲಕ್ಷಿಸದಿರಿ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಮಕರ: ಆತ್ಮೀಯರೊಂದಿಗಿನ ಅತಿಯಾದ ಸಲುಗೆಯೂ ಕೆಲವೊಮ್ಮೆ ತೊಂದರೆಗೆ ಕಾರಣವಾದೀತು. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ. ವ್ಯಾಪಾರಿಗಳಿಗೆ ಧನಗಳಿಕೆಯ ಚಿಂತೆಯಾಗಲಿದೆ. ಖರ್ಚು ವೆಚ್ಚದ ಬಗ್ಗೆ ನಿಗಾ ಇರಲಿ.

ಕುಂಭ: ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಕಾರ್ಯರೂಪಕ್ಕೆ ತರಲಿದ್ದೀರಿ. ಪ್ರೀತಿ ಪಾತ್ರರ ಕಷ್ಟಗಳಿಗೆ ಸ್ಪಂದಿಸಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಹಿರಿಯರೊಂದಿಗಿನ ಮಾತುಕತೆ ಹೊಸ ಚಿಂತನೆಗಳಿಗೆ ದಾರಿಯಾದೀತು.

ಮೀನ: ಹಣಕಾಸಿನ ವ್ಯವಹಾರ ಮಾಡುವಾಗ ಎಚ್ಚರಿಕೆಯಿರಲಿ. ಅಪರಿಚಿತರನ್ನು ನಂಬಿ ಬಂಡವಾಳ ಹೂಡಲು ಹೋಗಬೇಡಿ. ಕೆಳಹಂತದ ನೌಕರರಿಗೆ ಭವಿಷ್ಯದ ಚಿಂತೆ ಕಾಡೀತು. ಆದರೆ ಸಾಂಸಾರಿಕವಾಗಿ ಸಂಗಾತಿಯ ಸಹಕಾರ ನೆಮ್ಮದಿ ಕೊಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ