ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಪ್ರಯತ್ನ ಬಲ, ಆತ್ಮವಿಶ್ವಾಸವಿದ್ದರೆ ಎಂಥಾ ಕೆಲಸವಾದರೂ ನಿಭಾಯಿಸಬಲ್ಲೆ ಎಂಬ ಆತ್ಮವಿಶ್ವಾಸ ನಿಮ್ಮದಾಗಲಿದೆ. ಹೊಸ ಕೆಲಸಕ್ಕೆ ಕೈ ಹಾಕಲು ಪ್ರಯತ್ನಿಸಲಿದ್ದೀರಿ. ಸಂಗಾತಿಯೊಂದಿಗೆ ಅನಗತ್ಯ ಮನಸ್ತಾಪ ಬೇಡ. ತಾಳ್ಮೆಯಿರಲಿ.
ವೃಷಭ: ಹಿರಿಯರ ಸೂಕ್ತ ಸಲಹೆ, ಮಾರ್ಗದರ್ಶನ ಪಾಲಿಸಿದಲ್ಲಿ ಅಂದುಕೊಂಡ ಕೆಲಸಗಳು ನೆರವೇರಲಿವೆ. ಮಹತ್ವದ ಕೆಲಸಗಳಿಗೆ ಮುಂದಾಗಲಿದ್ದೀರಿ. ನಿರುದ್ಯೋಗಿಗಳು ಸ್ವಯಂ ಉದ್ಯೋಗದ ಬಗ್ಗೆ ಚಿಂತನೆ ನಡೆಸಲಿದ್ದಾರೆ.
ಮಿಥುನ: ಆರ್ಥಿಕವಾಗಿ ಆದಾಯ ವೃದ್ಧಿಯಾಗಲಿದೆ. ಆದರೆ ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ವೈದ್ಯಕೀಯ ವೃತ್ತಿಯವರಿಗೆ ಕಾರ್ಯದೊತ್ತಡವಿರಲಿದೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವು ಸಿಕ್ಕೀತು.
ಕರ್ಕಟಕ: ದೂರ ಸಂಚಾರಗಳನ್ನು ಅನಿವಾರ್ಯವಾಗಿ ಮುಂದೂಡಲಿದ್ದೀರಿ. ಮನೆಯಲ್ಲಿ ನಡೆಯಬೇಕಿದ್ದ ಶುಭ ಮಂಗಲ ಕಾರ್ಯಗಳು ಮುಂದೂಡಿಕೆಯಾಗಲಿದೆ. ಇಷ್ಟದೇವರ ಪ್ರಾರ್ಥನೆ ಮಾಡಿ. ಹಳೆಯ ಮಿತ್ರರನ್ನು ಭೇಟಿಯಾಗಲಿದ್ದೀರಿ.
ಸಿಂಹ: ಮನಸ್ಸಿನಲ್ಲಿ ಅಂದುಕೊಂಡಿದ್ದು ನೆರವೇರಿಸಲಾಗದೇ ನಿರಾಸೆಯಾದೀತು. ವೈಯಕ್ತಿಕವಾಗಿ ಮಾನಸಿಕ ಮತ್ತು ದೈಹಿಕ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಆರ್ಥಿಕವಾಗಿ ವಿವಿಧ ಮೂಲಗಳಿಂದ ಧನಾದಾಯ ವೃದ್ಧಿಯಾಗಲಿದೆ. ಚಿಂತೆ ಬೇಡ.
ಕನ್ಯಾ: ವೃತ್ತಿರಂಗದಲ್ಲಿ ಬದಲಾವಣೆ ಮನಸ್ಸು ಬಯಸೀತು. ಮೇಲಧಿಕಾರಿಗಳ ಕಿರಿ ಕಿರಿ ಮನಸ್ಸಿಗೆ ಬೇಸರವುಂಟು ಮಾಡಲಿದೆ. ಸಂಗಾತಿಯ ಸಹಕಾರ ಸಿಗಲಿದೆ. ಆದರೆ ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಿ.
ತುಲಾ: ನಿಮ್ಮ ದುಡುಕು ವರ್ತನೆಯಿಂದ ಕೈಗೆ ಬಂದಿದ್ದೂ ಬಾಯಿಗೆ ಬರದ ಸ್ಥಿತಿಯಾದೀತು. ಸಂಗಾತಿಯ ಅಸಮಾಧಾನಕ್ಕೆ ಗುರಿಯಾಗಲಿದ್ದೀರಿ. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸಬೇಕಾಗುತ್ತದೆ. ವ್ಯವಹಾರದಲ್ಲಿ ಮುನ್ನಡೆ ಕಂಡುಬರಲಿದೆ.
ವೃಶ್ಚಿಕ: ವ್ಯಾಪಾರಿಗಳು ಧನಗಳಿಕೆಗೆ ಅನ್ಯ ಮಾರ್ಗಗಳ ಬಗ್ಗೆ ಯೋಚನೆ ಮಾಡಲಿದ್ದೀರಿ. ಸರಕಾರಿ ಕಾಗದ ಪತ್ರಗಳನ್ನು ಜೋಪಾನ ಮಾಡುವ ಹೊಣೆಗಾರಿಕೆ ನಿಮ್ಮದಾಗಲಿದೆ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಧನು: ಮನಸ್ಸಿನಲ್ಲಿ ಅಂದುಕೊಂಡಿದ್ದು ಒಂದು, ಆಗಿದ್ದು ಇನ್ನೊಂದು ಎನ್ನುವ ಸ್ಥಿತಿ ನಿಮ್ಮದಾಗಲಿದೆ. ಅನಗತ್ಯ ಚಿಂತೆಗಳನ್ನು ಬದಿಗಿಟ್ಟು ಕೆಲಸದತ್ತ ಗಮನಹರಿಸಿ. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ತಾಳ್ಮೆಯಿರಲಿ.
ಮಕರ: ಇಂದು ನಿಮ್ಮ ಮಾತೇ ನಿಮಗೆ ಶತ್ರುವಾದೀತು. ಕೌಟುಂಬಿಕವಾಗಿ ಇತರರ ಅಸಮಾಧಾನಕ್ಕೆ ಗುರಿಯಾಗಲಿದ್ದೀರಿ. ಇಷ್ಟಮಿತ್ರರನ್ನು ಭೇಟಿಯಾಗುವ ಯೋಗ ನಿಮ್ಮದಾಗುವುದು. ನಾಲಿಗೆ ಚಪಲಕ್ಕೆ ಕಡಿವಾಣ ಹಾಕಬೇಕಾಗುತ್ತದೆ.
ಕುಂಭ: ಇತರರ ಕೆಲಸದಲ್ಲಿ ಮೂಗು ತೂರಿಸಲು ಹೋಗಿ ಸಮಸ್ಯೆಗೆ ಸಿಲುಕದಿರಿ. ವೃತ್ತಿರಂಗದಲ್ಲಿ ನಿಮ್ಮ ಕ್ರಿಯಾತ್ಮಕತೆ ಪ್ರಕಟಿಸಲು ಸಕಾಲ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಚಿಂತೆ ಬೇಡ.
ಮೀನ: ಹಿಂದೆ ಮಾಡಿ ತಪ್ಪುಗಳ ಬಗ್ಗೆ ಯೋಚಿಸುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ವೃತ್ತಿರಂಗದಲ್ಲಿ ಹೊಸಬಗೆಯ ಚಿಂತನೆಯಿದ್ದಲ್ಲಿ ಯಶಸ್ಸು ಸಾಧ‍್ಯ. ಕಟ್ಟಡ ಕಾಮಗಾರಿ ಕೆಲಸಗಳನ್ನು ಮುಂದೂಡುವುದು ಉತ್ತಮ. ದೇವರ ಪ್ರಾರ್ಥನೆ ಮಾಡಿ.