Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 7 ಫೆಬ್ರವರಿ 2021 (09:07 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಮನಸ್ಸಿನಲ್ಲಿ ಸಣ್ಣದಾಗಿ ಹುಟ್ಟಿಕೊಂಡ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಯತ್ನಿಸಲಿದ್ದೀರಿ. ಹೊಸ ವಿಚಾರಗಳಿಗೆ ಮನಸ್ಸು ತೆರೆದುಕೊಳ್ಳಲಿದೆ. ಗೃಹಿಣಿಯರು ಗೃಹ ಕೃತ್ಯಗಳಿಂದ ಹೈರಾಣಾಗಲಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ನಿಮ್ಮ ವೃತ್ತಿರಂಗದಲ್ಲಿ ದಿನೇ ದಿನೇ ಅಭಿವೃದ್ಧಿಯಾಗುತ್ತಿದ್ದೀರಿ ಎಂದು ನಿಮಗೆ ಅನಿಸಬಹುದು. ಆರ್ಥಿಕವಾಗಿ ಹಣಕಾಸಿನ ಖರ್ಚು ವೆಚ್ಚದ ಬಗ್ಗೆ ಮಿತಿಯಿರಲಿ. ಅನವಶ್ಯಕವಾಗಿ ಬೇಡದ ಸಮಸ್ಯೆಗಳನ್ನು ಮೈಮೇಲೆಳದುಕೊಳ್ಳಬೇಡಿ.

ಮಿಥುನ: ಮನೆಗೆ ಅನಿರೀಕ್ಷಿತವಾಗಿ ಬಂಧುಮಿತ್ರರ ಆಗಮನವಾಗಲಿದ್ದು, ಸಂಭ್ರಮದ ವಾತಾವರಣವಿರಲಿದೆ. ಆದಾಯ ಹೆಚ್ಚಿಸಲು ನಾನಾ ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ. ವಿದ್ಯಾರ್ಥಿಗಳು ಆಲಸ್ಯತನ ಬಿಟ್ಟು ಕಠಿಣ ಪರಿಶ್ರಮ ಪಡಬೇಕಿದೆ.

ಕರ್ಕಟಕ: ಎಷ್ಟೋ ದಿನಗಳಿಂದ ಭೇಟಿಯಾಗಬೇಕೆಂದಿದ್ದ ವ್ಯಕ್ತಿಗಳನ್ನು ಅನಿರೀಕ್ಷಿತವಾಗಿ ಭೇಟಿಯಾಗಲಿದ್ದೀರಿ. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಒದಗಿಬರಲಿವೆ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದ ಐಡಿಯಾ ಬರಲಿದೆ.

ಸಿಂಹ: ಕಲಾ ಕ್ಷೇತ್ರದಲ್ಲಿರುವವರಿಗೆ ಒಳ್ಳೆಯ ಅವಕಾಶಗಳು ತೋರಿಬರಲಿವೆ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ಬೇರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಮನಸ್ಸು ಅಂದುಕೊಂಡಂತೆ ನಡೆದುಕೊಳ್ಳಿ.

ಕನ್ಯಾ: ಸಂಗಾತಿಯ ಕಷ್ಟಗಳಿಗೆ ಹೆಗಲುಕೊಡಲಿದ್ದೀರಿ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಸರಕಾರಿ ಲೆಕ್ಕ ಪತ್ರಗಳನ್ನು ಜಾಗರೂಕತೆಯಿಂದ ಸಂರಕ್ಷಿಸಿ. ಕೃಷಿಕರಿಗೆ ಆದಾಯಕ್ಕೆ ಕೊರತೆಯಿರದು. ದೇವತಾ ಪ್ರಾರ್ಥನೆ ಮಾಡಿ.

ತುಲಾ: ಮನಸ್ಸು ಅಂದುಕೊಂಡಂತೆ ನಿರ್ಧಾರ ತೆಗೆದುಕೊಳ್ಳಲು ಹೋಗಿ ಪ್ರೀತಿಪಾತ್ರರ ಮನಸ್ಸಿಗೆ ಬೇಸರವುಂಟು ಮಾಡಲಿದ್ದೀರಿ. ಆದಾಯದ ಮೂಲಕ್ಕೆ ಪೆಟ್ಟು ಬೀಳಲಿದೆ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.

ವೃಶ್ಚಿಕ: ನೆರೆಹೊರೆಯವರು ನಿಮ್ಮ ಗುಟ್ಟುಗಳನ್ನು ಬಯಲು ಮಾಡಲು ಕಾಯುತ್ತಿರುತ್ತಾರೆ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗುವುದು. ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ಪ್ರೀತಿ ಪಾತ್ರರ ಭೇಟಿ ಮಾಡಲಿದ್ದೀರಿ.

ಧನು: ಉದ್ಯೋಗ ಸಂಬಂಧವಾಗಿ ಅನಿರೀಕ್ಷಿತವಾಗಿ ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮನೆಗೆ ಬಂಧು ಮಿತ್ರರ ಆಗಮನವಾಗಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗುವುದು.

ಮಕರ: ವೈಯಕ್ತಿಕ ಆರೋಗ್ಯದ ಬಗ್ಗೆ ಉಪೇಕ್ಷೆ ಸಲ್ಲದು. ನೂತನ ದಂಪತಿಗಳಲ್ಲಿ ಹೊಂದಾಣಿಕೆಯ ಕೊರತೆ ಕಂಡುಬಂದೀತು. ಸಾಂಸಾರಿಕ ವಿಚಾರದಲ್ಲಿ ಮೂರನೆಯವರ ಮಧ‍್ಯಪ್ರವೇಶಕ್ಕೆ ಅವಕಾಶ ಕೊಡಬೇಡಿ. ಗೃಹ ರಿಪೇರಿ ಕೆಲಸಗಳಿಗೆ ಮುಂದಾಗುವಿರಿ.

ಕುಂಭ: ಆಪ್ತರ ಮಾತುಗಳಿಂದ ಮನಸ್ಸು ಭಾವುಕವಾಗುವುದು. ದೇಹಾರೋಗ್ಯದಲ್ಲಿ ಹಲವು ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ವಾದ ವಿವಾದಗಳಲ್ಲಿ ಮೇಲುಗೈ ಸಾಧಿಸಲಿದ್ದೀರಿ. ತಾಳ್ಮೆಯಿರಲಿ.

ಮೀನ: ಹೆಚ್ಚಿನ ಧನಾರ್ಜನೆಗಾಗಿ ನಾನಾ ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ. ಸ್ವಯಂ ವ್ಯಾಪಾರಿಗಳಿಗೆ ಮುನ್ನಡೆಯ ಯೋಗವಿದೆ. ಸಂಗಾತಿಯ ಸಲಹೆಗಳು ಉಪಯೋಗಕ್ಕೆ ಬರಲಿವೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆಗಾಗಿ ಪಿಠೋಪಕರಣಗಳನ್ನು ಈ ದಿನದಂದು ಖರೀದಿಸಬೇಡಿ