ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಮಂಗಳವಾರ, 9 ಜೂನ್ 2020 (09:18 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಸರಕಾರಿ ಕೆಲಸಗಳಲ್ಲಿ ಅಡ್ಡಿ ಆತಂಕಗಳು ಎದುರಾಗಲಿವೆ. ಲೆಕ್ಕ ಪತ್ರಗಳ ಬಗ್ಗೆ ನಿಗಾ ಇರಲಿ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಖರ್ಚು ವೆಚ್ಚಗಳು ಮಿತವಾಗಿದ್ದರೆ ಭವಿಷ್ಯದ ದೃಷ್ಟಿಯಿಂದ ಉತ್ತಮ.

ವೃಷಭ: ದೈವಾನುಕೂಲದಿಂದ ನಿಮ್ಮ ಮನೋಕಾಮನೆಗಳು ಪೂರ್ತಿಯಾಗಲಿವೆ. ಅವಿವಾಹಿತರಿಗೆ ಶೀಘ‍್ರ ಕಂಕಣ ಬಲ ಕೂಡಿಬರಲಿದೆ. ಬಂಧು ಮಿತ್ರರ ಸಹಕಾರ ಸಿಗಲಿದೆ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಕೊಂಚ ಹಿನ್ನಡೆಯಾದರೂ ಚಿಂತೆ ಬೇಡ.

ಮಿಥುನ: ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದರಿಂದ ಅಂದುಕೊಂಡ ಕೆಲಸ ಕಾರ್ಯಗಳನ್ನು ಪೂರ್ತಿ ಮಾಡಲಿದ್ದೀರಿ. ಸಾಲಗಳಿಂದ ಮುಕ್ತಿ ಸಿಗಲಿದೆ. ಕಾರ್ಮಿಕ ವರ್ಗದವರಿಗೆ ಮಾನಸಿಕವಾಗಿ ಗೊಂದಲ ಕಾಡಲಿದೆ. ಕುಲದೇವರ ಪ್ರಾರ್ಥನೆ ನಡೆಸಿ.

ಕರ್ಕಟಕ: ಅನಿರೀಕ್ಷಿತವಾಗಿ ಕಾರ್ಯಸಾಧನೆಯಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಅಗತ್ಯ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಕೃಷಿಕರಿಗೆ ವ್ಯವಹಾರದಲ್ಲಿ ಮುನ್ನಡೆ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಸಿಂಹ: ಅವಿವಾಹಿತರಿಗೆ ಅನಿರೀಕ್ಷಿತ ರೀತಿಯಲ್ಲಿ ಯೋಗ್ಯ ಸಂಬಂಧಗಳು ಕೂಡಿಬರಲಿದ್ದು, ಮನಸ್ಸಿಗೆ ನೆಮ್ಮದಿಯಾಗಲಿದೆ. ನವದಂಪತಿಗಳಿಗೆ ಮಧುಚಂದ್ರದ ಭಾಗ್ಯವಿದೆ. ಅಚ್ಚರಿಯ ಉಡುಗೊರೆಗಳು ಸಿಗಲಿವೆ. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ.

ಕನ್ಯಾ: ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟುಗಳು ನಿವಾರಣೆಯಾಗಲಿವೆ. ಹೊಸ ವ್ಯಾಪಾರ, ವ್ಯವಹಾರದಲ್ಲಿ ಮುನ್ನಡೆ ಸಿಗಲಿದೆ. ಕೌಟುಂಬಿಕವಾಗಿ ನೆಮ್ಮದಿಗೆ ಭಂಗ ತರುವ ಕೆಲವು ಘಟನೆಗಳು ನಡೆದೀತು. ಎಚ್ಚರಿಕೆಯಿಂದಿರಿ. ತಾಳ್ಮೆ, ಸಂಯಮ ಅಗತ್ಯ.

ತುಲಾ: ದೂರ ಸಂಚಾರದಲ್ಲಿ ಅಪಘಾತದ ಭಯವಿದೆ. ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದಿರಿ. ನಿಮ್ಮ ಮಾನಸಿಕ ಸ್ಥಿತಿಯಲ್ಲಿ ಏರುಪೇರಾದೀತು. ದೇವತಾ ಪ್ರಾರ್ಥನೆ ಮಾಡಿ. ವ್ಯಾಪಾರಿಗಳಿಗೆ ಲಾಭವಿಲ್ಲದಿದ್ದರೂ ನಷ್ಟವಂತೂ ಆಗದು. ಚಿಂತೆ ಬೇಡ.

ವೃಶ್ಚಿಕ: ಶುಭ ಮಂಗಲ ಕಾರ್ಯ ನಡೆಸಲು ದೈವಾನುಕೂಲವಿದ್ದು, ತಯಾರಿ ನಡೆಸಲಿದ್ದೀರಿ. ಅಧಿಕ ಓಡಾಟದಿಂದ ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ನಾನಾ ರೀತಿಯ ಖರ್ಚು ವೆಚ್ಚಗಳಿದ್ದರೂ ಕಾರ್ಯಸಾಧನೆಯಾಗುವುದರಿಂದ ನೆಮ್ಮದಿಯಾಗಲಿದೆ.

ಧನು: ಮಾನಸಿಕವಾಗಿ ನೆಮ್ಮದಿಯ ದಿನಗಳಿವು. ಮಕ್ಕಳ ವಿಚಾರದಲ್ಲಿ ಅನಗತ್ಯ ಚಿಂತೆ ಮಾಡಲು ಹೋಗಬೇಡಿ. ವೃತ್ತಿರಂಗದಲ್ಲಿ ಆರಕ್ಕೇರದ, ಮೂರಕ್ಕಿಳಿಯದ ಸ್ಥಿತಿಯಿರಲಿದೆ. ಸಂಗಾತಿಯ ಮಾತಿಗೆ ಕಿವಿಗೊಡಬೇಕಾಗುತ್ತದೆ. ದೇವತಾ ಪ್ರಾರ್ಥನೆ ಮಾಡಿ.

ಮಕರ: ಗೃಹೋಪಯೋಗಿ ವಸ್ತುಗಳ ಖರೀದಿಗೆ ಹೆಚ್ಚಿನ ಖರ್ಚು ವೆಚ್ಚವಾಗಲಿದೆ. ವೃತ್ತಿರಂಗದಲ್ಲಿ ನಿಮ್ಮ ಐಡಿಯಾಗಳಿಗೆ ಬೆಲೆ ಸಿಗಲಿದೆ. ಸಾಮಾಜಿಕವಾಗಿ ಸ್ಥಾನ ಮಾನ ಹೆಚ್ಚಲಿದೆ. ಮಹಿಳೆಯರಿಗೆ ಆಕಸ್ಮಿಕ ಧನಲಾಭವಾಗಲಿದೆ. ಆದರೆ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕಾಗುತ್ತದೆ.

ಕುಂಭ: ಅನವಶ್ಯಕವಾಗಿ ಮಾನಸಿಕ ನೆಮ್ಮದಿಯನ್ನು ನೀವೇ ಹಾಳುಮಾಡಿಕೊಳ್ಳಲಿದ್ದೀರಿ. ಋಣಾತ್ಮಕ ಚಿಂತನೆಗಳನ್ನು ದೂರ ಮಾಡಿ. ಎಷ್ಟೋ ದಿನದಿಂದ ಬಾಕಿ ಬರಬೇಕಿದ್ದ ಹಣ ಪಾವತಿಯಾಗಲಿದೆ. ಮೇಲ್ವರ್ಗದ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ಧಾರಿ ಹೆಗಲಿಗೇರಲಿದೆ.

ಮೀನ: ಆರ್ಥಿಕವಾಗಿ ಹಂತ ಹಂತವಾಗಿ ಅಭಿವೃದ್ಧಿ ಕಾಣಲಿದ್ದು, ವ್ಯವಹಾರಗಳಲ್ಲಿ ಮಾಡಿದ್ದ ಹೂಡಿಕೆಗಳು ಫಲಪ್ರದವಾಗಲಿದೆ. ಬಂಧು ಬಳಗದವರ ಅನಿರೀಕ್ಷಿತ ಭೇಟಿ ಮನಸ್ಸಿನ ಖುಷಿ ಹೆಚ್ಚಿಸಲಿದೆ. ಮಹಿಳೆಯರಿಗೆ ತವರಿನ ಸಂಬಂಧಗಳು ಮತ್ತೆ ಬೆಸೆಯಲಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಗ್ರಹ ಪಂಚರತ್ನ ಸ್ತೋತ್ರ ಕನ್ನಡದಲ್ಲಿ

ಸೌಭಾಗ್ಯ ಲಕ್ಷ್ಮೀ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಗುರು ಪಾದುಕಾ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಜಾತಕದಲ್ಲಿ ಬುಧ ಗ್ರಹ ದೋಷವಿದ್ದರೆ ಈ ಮಂತ್ರ ಓದಿ

ಕುಜ ದೋಷವಿದ್ದರೆ ಇಂದು ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments