Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಸೋಮವಾರ, 25 ಮೇ 2020 (09:05 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಸಾಮಾಜಿಕ ಕಾರ್ಯಗಳಿಂದ ಮನಸ್ಸಿಗೆ ತೃಪ್ತಿ ಸಿಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಸವಾಲುಗಳಿಗೆ ಸಿದ್ಧರಾಗಬೇಕಾಗುತ್ತದೆ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ಆದರೆ ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದು ಉತ್ತಮ.

ವೃಷಭ: ಭವಿಷ್ಯದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ರೂಪುರೇಷೆ ಸಿದ್ಧ ಮಾಡಲಿದ್ದೀರಿ. ಅವಿವಾಹಿತರಿಗೆ ಶೀಘ‍್ರದಲ್ಲೇ ಕಂಕಣ ಬಲ ಕೂಡಿಬರುವುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಭಿಸಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.

ಮಿಥುನ: ಕಾರ್ಯಕ್ಷೇತ್ರದಲ್ಲಿ ಕಷ್ಟಗಳು ಎದುರಾಗಲಿವೆ. ಅದನ್ನು ನೀವು ಹೇಗೆ ನಿಭಾಯಿಸುತ್ತೀರಿ ಎನ್ನುವುದು ಮುಖ್ಯವಾಗುತ್ತದೆ. ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಮಹಿಳೆಯರಿಗೆ ಉದ್ಯೋಗದಲ್ಲಿ ಮುನ್ನಡೆಯಿದ್ದರೂ ಹಿತಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ.

ಕರ್ಕಟಕ: ವ್ಯಾಪಾರ, ವ್ಯವಹಾರದಲ್ಲಿರುವವರಿಗೆ ಬಾಕಿ ಹಣ ವಸೂಲಿ ಚಿಂತೆ ಕಾಡಲಿದೆ. ನಿಮ್ಮ ಖರ್ಚು ವೆಚ್ಚಗಳಿಗೆ ಮಿತಿ ಹೇರಬೇಕಾಗುತ್ತದೆ. ನಿಮ್ಮ ಸುತ್ತಮುತ್ತಲಿದ್ದವರಿಂದಲೇ ವಂಚನೆಗೊಳಗಾಗುವ ಸಾಧ್ಯತೆಯಿದೆ. ಎಚ್ಚರಿಕೆ ಅಗತ್ಯ. ದೇವತಾ ಪ್ರಾರ್ಥನೆ ಮಾಡಿ.

ಸಿಂಹ: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ನಿರುತ್ಸಾಹ ಕಂಡುಬರಬಹುದು. ಉದ್ಯೋಗ ಕ್ಷೇತ್ರದಲ್ಲಿ ಅರೆಕ್ಷಣವೂ ಮೈಮರೆಯುವಂತಿಲ್ಲ. ಬೇಜವಾಬ್ಧಾರಿಯಿಂದ ನಡೆದುಕೊಂಡರೆ ಮುಂದೆ ಪಶ್ಚಾತ್ತಾಪ ಪಡಬೇಕಾಗಬಹುದು. ಕುಲದೇವರ ಪ್ರಾರ್ಥನೆ ಮಾಡಿ.

 
ಕನ್ಯಾ: ವೃತ್ತಿರಂಗದಲ್ಲಿ ಹೊಸ ಮಿತ್ರರ ಸಂಪಾದನೆ ಮಾಡಲಿದ್ದೀರಿ. ಆರ್ಥಿಕವಾಗಿ ಬಾಕಿ ಹಣ ಪಾವತಿ ಚಿಂತೆ ಕಾಡಲಿದೆ. ವೃತ್ತಿರಂಗದಲ್ಲಿ ಹೆಚ್ಚಿನ ಕಾರ್ಯದೊತ್ತಡ ಹೆಗಲಿಗೇರಲಿದೆ. ಮುಂದೆ ಸವಾಲಿನ ದಿನಗಳಿದ್ದು, ಇಂದೇ ಅದಕ್ಕೆ ಮಾನಸಿಕವಾಗಿ ಸಿದ್ಧರಾಗಿ.

ತುಲಾ: ಕಷ್ಟದ ಸಮಯದಲ್ಲಿ ಮಿತ್ರರ ಸಲಹೆಗಳು ಉಪಯೋಗಕ್ಕೆ ಬರುವುದು. ಸಂಗಾತಿಯ ಮನೋಕಾಮನೆಗಳನ್ನು ಪೂರೈಸಲಿದ್ದೀರಿ. ಆರ್ಥಿಕವಾಗಿ ಹೆಚ್ಚಿನ ಕಾಳಜಿ ಅಗತ್ಯ. ಸಾಂಸಾರಿಕವಾಗಿ ಸಂತಸದ ದಿನ ನಿಮ್ಮದಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಶ್ಚಿಕ: ಉದ್ಯೋಗ ಕ್ಷೇತ್ರದಲ್ಲಿ ಇದ್ದಕ್ಕಿದ್ದಂತೆ ಸಂಕಷ್ಟ ಎದುರಾದೀತು. ಮೇಲಧಿಕಾರಿಗಳ ಸಲಹೆ ಸೂಚನೆ ಪಾಲಿಸಬೇಕಾಗುತ್ತದೆ. ಹಿರಿಯರಿಗೆ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ದೂರ ಸಂಚಾರವನ್ನು ಅನಿವಾರ್ಯವಾಗಿ ಮುಂದೂಡಬೇಕಾಗುತ್ತದೆ.

ಧನು: ವೃತ್ತಿರಂಗದಲ್ಲಿ ನೀವು ಇಂದು ಕೈಗೊಳ್ಳುವ ನಿರ್ಧಾರವು ಹೊಸ ತಿರುವಿಗೆ ಕಾರಣವಾಗಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಲಸ್ಯತನ ಕಂಡುಬರಲಿದೆ. ಮಾನಸಿಕವಾಗಿ ಗಟ್ಟಿಯಾಗಬೇಕಾದ ಸಮಯವಿದು. ಸಂಗಾತಿಯ ಸಲಹೆಗಳಿಗೆ ಕಿವಿಗೊಡಿ.

ಮಕರ: ಅನಿರೀಕ್ಷಿತವಾಗಿ ನೀವು ಅಂದುಕೊಂಡಿದ್ದ ಕೆಲಸಗಳು ನೆರವೇರಲಿವೆ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವ ಯೋಗ ಒದಗಿಬರುವುದು. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟುಗಳು ನಿವಾರಣೆಯಾಗಲಿವೆ. ಕಾರ್ಯನಿಮಿತ್ತ ಕಿರು ಓಡಾಟ ನಡೆಸಬೇಕಾಗುತ್ತದೆ.

ಕುಂಭ: ಕೌಟುಂಬಿಕವಾಗಿ ನಿಮ್ಮ ಕೆಲವೊಂದು ನಿರ್ಧಾರಗಳು ಸದಸ್ಯರ ಅಸಮಾಧಾನಕ್ಕೆ ಕಾರಣವಾಗಬಹುದು. ಎಲ್ಲರ ಅಭಿಪ್ರಾಯಕ್ಕೆ ಬೆಲೆ ಕೊಡುವುದು ಮುಖ್ಯ. ಆಕಸ್ಮಿಕ ಧನಲಾಭಗಳಾಗಲಿವೆ. ನಿಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಕಾಲವಿದು.

ಮೀನ: ವೃತ್ತಿರಂಗದಲ್ಲಿ ತಾಳ್ಮೆ, ಸಂಯಮದಿಂದ ನಡೆದುಕೊಂಡರೆ ಅಂದುಕೊಂಡ ಕೆಲಸಗಳನ್ನು ನೆರವೇರಿಸುವಿರಿ. ಆಪ್ತರೊಂದಿಗೆ ಕಲಹಗಳಾಗದಂತೆ ಎಚ್ಚರಿಕೆ ವಹಿಸಿ. ಆದಾಯ ಗಳಿಕೆಗೆ ಹೊಸ ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮಾಮಾಸ್ಯೆ ದಿನ ಹುಟ್ಟಿದ ಹೆಣ್ಣುಮಕ್ಕಳ ಕೈಯಿಂದ ಅಪ್ಪಿತಪ್ಪಿಯೂ ಈ ಕೆಲಸ ಮಾಡಿಸಬೇಡಿ