Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಗುರುವಾರ, 16 ಏಪ್ರಿಲ್ 2020 (09:05 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನಕರ ವಾತಾವರಣವಿರಲಿದೆ. ಬಾಕಿ ಹಣ ವಸೂಲಿ ಚಿಂತೆ ಕಾಡಲಿದೆ. ವಿದ್ಯಾರ್ಥಿಗಳಿಗೆ ಭವಿಷ್ಯದ ಯೋಜನೆಗೆ ಹೊಸ ದಾರಿಗಳು ಗೋಚರವಾಗಲಿದೆ. ಹಿರಿಯರ ಸಲಹೆಗಳು ಉಪಯೋಗಕ್ಕೆ ಬರಲಿವೆ.

ವೃಷಭ: ಕಾರ್ಯರಂಗದಲ್ಲಿ ಚುರುಕಾಗಿ ಕೆಲಸ ನಿರ್ವಹಿಸಬೇಕಾಗುವುದು. ಕ್ರಿಯಾತ್ಮಕ ಬುದ್ಧಿ ಬಳಸಿ ಸಂಭಾವ್ಯ ಅಪಾಯ ತಪ್ಪಿಸಬಹುದು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ನಿರುದ್ಯೋಗಿಗಳು ಸ್ವಯಂ ಉದ್ಯೋಗದ ಕಡೆಗೆ ಗಮನಹರಿಸಲಿದ್ದೀರಿ.

ಮಿಥುನ: ನೂತನ ದಂಪತಿಗಳಲ್ಲಿ ಹೊಂದಾಣಿಕೆಯ ಕೊರತೆ ಕಂಡುಬರಲಿದೆ. ತಾಳ್ಮೆಯಿಂದ ಮುಂದುವರಿಯಬೇಕು. ನಿಮ್ಮ ಅರ್ಥಪೂರ್ಣ ಕೆಲಸಗಳಿಗೆ ವಿರೋಧಿಗಳೂ ಸಹಾಯ ಮಾಡಲಿದ್ದಾರೆ. ಸಾಂಸಾರಿಕವಾಗಿ ತಾಳ್ಮೆ, ಹೊಂದಾಣಿಕೆ ಅಗತ್ಯ. ಆರೋಗ್ಯದ ಕಡೆ ಗಮನಕೊಡಿ.

ಕರ್ಕಟಕ: ಕೋರ್ಟು ಕಚೇರಿ ಕಲಾಪಗಳಿಗೆ ಓಡಾಟ ನಡೆಸಬೇಕಾಗುತ್ತದೆ. ನಿಮ್ಮ ಪರವಾಗಿ ತೀರ್ಪು ಬರುವುದರಿಂದ ಸಂತಸವಾಗಲಿದೆ. ಬಂಧು ಮಿತ್ರರ ಸಹಕಾರ ಸಿಗಲಿದೆ. ಆರ್ಥಿಕ ಸಂಕಷ್ಟಗಳಿಗೆ ಪರಿಹಾರ ಸಿಗಲಿದೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಸಿಂಹ: ಸರಕಾರಿ ಕೆಲಸ ಕಾರ್ಯಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಸಾಮಾಜಿಕ ರಂಗದಲ್ಲಿ ಮುನ್ನಡೆಯ ಯೋಗವಿದೆ. ನಿಮ್ಮ ಕೆಲಸಗಳಿಗೆ ಜನಮನ್ನಣೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಧಾರ್ಮಿಕವಾಗಿ ಭಕ್ತಿ ಭಾವ ಹೆಚ್ಚಲಿದೆ.

ಕನ್ಯಾ: ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡುಕೊಳ್ಳಲಿದ್ದೀರಿ. ಕಷ್ಟ ಕಾಲದಲ್ಲಿ ಮಿತ್ರರ ಸಹಾಯ ದೊರಕಲಿದೆ. ಕನ್ಯಾಮಣಿಗಳಿಗೆ ಶೀಘ್ರ ಕಂಕಣ ಭಾಗ್ಯ ಒದಗಿಬರಲಿದೆ. ದಾನ ಧರ್ಮಾದಿಗಳಿಗೆ ಧನವ್ಯಯ ಮಾಡಲಿದ್ದೀರಿ. ಸಂಚಾರದಲ್ಲಿ ಜಾಗ್ರತೆ.

ತುಲಾ: ಗೃಹ ನಿರ್ಮಾಣ ಭೂ ಖರೀದಿ ವ್ಯವಹಾರಗಳಿಗೆ ಅಡಚಣೆ ತೋರಿಬರಲಿದೆ. ಹೊಸ ಯೋಜನೆಗಳಿಗೆ ಕೈ ಹಾಕುವ ಮುನ್ನ ಕೆಲವು ದಿನ ಕಾಯುವುದು ಒಳಿತು. ಆರ್ಥಿಕವಾಗಿ ತುಸು ಚೇತರಿಕೆ ಕಂಡುಬರಲಿದೆ. ಸಂಯಮ ಪಾಲಿಸಿದಲ್ಲಿ ಜೀವನದಲ್ಲಿ ಯಶಸ್ಸು ಕಾಣಬಹುದು.

ವೃಶ್ಚಿಕ: ಅನಿರೀಕ್ಷಿತವಾಗಿ ಬರುವ ಸುದ್ದಿಯಿಂದ ಸಂತೋಷವಾಗಲಿದೆ. ಹೆಣ್ಣು ಮಕ್ಕಳಿಗೆ ತವರಿನಿಂದ ಉಡುಗೊರೆ ಸಿಗಲಿದೆ. ವ್ಯಾಪಾರ, ವ್ಯವಹಾರದಲ್ಲಿ ತುಸು ಚೇತರಿಕೆ ಕಂಡುಬರಲಿದೆ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಧನು: ಕೋರ್ಟು ಕಚೇರಿ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಆದರೂ ನಿಮ್ಮ ಮುನ್ನಡೆಯನ್ನು ಯಾರೂ ತಡೆಯಲಾಗದು. ಶಾಂತ ಮನೋಭಾವದಿಂದ ನಿಭಾಯಿಸಿದರೆ ಎಂತಹದ್ದೇ ಸಮಸ್ಯೆಯಾದರೂ ನಿವಾರಿಸುವಿರಿ. ಚಿಂತೆ ಬೇಡ.

ಮಕರ: ವ್ಯಾಪಾರ, ವ್ಯವಹಾರಗಳಲ್ಲಿ ಚೇತರಿಕೆ ಕಂಡುಬರಲಿದೆ. ಸೂಕ್ತ ಸಮಯದಲ್ಲಿ ಧನಾಗಮನವಾಗುವುದರಿಂದ ಸಂಭಾವ್ಯ ಸಂಕಷ್ಟದಿಂದ ಪಾರಾಗುವಿರಿ. ಮನಸ್ಸು ಏಕಾಗ್ರತೆ ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಿ. ಹಿರಿಯರಿಗೆ ಮನೋವ್ಯಾಕುಲತೆ ಕಾಡಲಿದೆ.

ಕುಂಭ: ಶ್ರಮ ಜೀವಿಗಳಿಗೆ ತಕ್ಕ ಫಲ ಸಿಗಲಿದೆ. ವೈಯಕ್ತಿಕ ಆರೋಗ್ಯದ ಕಡೆಗೆ ಗಮನಹರಿಸಬೇಕು. ಹಿತಶತ್ರುಗಳಿಗೆ ತಕ್ಕ ಪಾಠ ಕಲಿಸಲಿದ್ದೀರಿ. ಕಲಾ ಕ್ಷೇತ್ರದಲ್ಲಿರುವವರಿಗೆ ಕೀರ್ತಿ ಸಂಪಾದಿಸುವ ಯೋಗವಿದೆ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗವೇ ಸೂಕ್ತ.

ಮೀನ: ದೈವಾನುಗ್ರಹದಿಂದ ಇಂದು ನೀವು ಕೈಗೊಳ್ಳಲಿರುವ ಕೆಲಸವನ್ನು ಯಶಸ್ವಿಯಾಗಿ ಪೂರೈಸಲಿದ್ದೀರಿ. ನೀವು ಕೈಗೊಳ್ಳುವ ಯೋಜನೆಗಳು ನಿಮ್ಮ ಭವಿಷ್ಯಕ್ಕೆ ಲಾಭ ತಂದುಕೊಡಲಿದೆ. ಹಿರಿಯರಿಗೆ ವಾತ ಸಂಬಂಧೀ ಆರೋಗ್ಯ ಸಮಸ್ಯೆ ಕಾಡಬಹುದು, ಎಚ್ಚರಿಕೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾನಸಿಕ ನೆಮ್ಮದಿ ಇಲ್ಲವಾದರೆ ಮೊಸರನ್ನಕ್ಕೆ ಇದನ್ನ ಬೆರೆಸಿ ನೈವೇದ್ಯ ಮಾಡಿ