ಮೇಷ: ಉದ್ಯೋಗ ಕ್ಷೇತ್ರದಲ್ಲಿ ನೀವು ಅಂದುಕೊಂಡ ಕೆಲಸ ಪೂರ್ತಿಗೊಳಿಸಲು ಕೊಂಚ ಶ್ರಮಪಡಬೇಕಾಗಬಹುದು. ಆದರೆ ಅಸಾಧ್ಯವಲ್ಲ. ಸಾಂಸಾರಿಕವಾಗಿ ಆದಷ್ಟು ತಾಳ್ಮೆ ಅಗತ್ಯ. ಗೃಹಕೃತ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ದೇಹಾರೋಗ್ಯದಲ್ಲಿ ಸುಧಾರಣೆಯಾಗಲಿದೆ.
ವೃಷಭ: ಕಾರ್ಯರಂಗದಲ್ಲಿ ಮಿತ್ರರು ಕೊಡುವ ಸಮಯೋಚಿತ ಸಲಹೆ ಉಪಯೋಗಕ್ಕೆ ಬರಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳು ಹೆಚ್ಚಾಗಲಿದ್ದು, ಆದಾಯದ ಮಾರ್ಗ ಕುಂಠಿತಗೊಳ್ಳಲಿದೆ. ಮಾನಸಿಕವಾಗಿ ಚಿಂತೆ ಕಾಡಲಿದೆ. ದೇವತಾ ಪ್ರಾರ್ಥನೆ ಮಾಡಿ.
ಮಿಥುನ: ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಕೌಟುಂಬಿಕವಾಗಿ ಸಂತಸದ ದಿನಗಳಿವು. ಆದರೆ ಆದಾಯ ಗಳಿಕೆಗೆ ಅಡ್ಡಿಯಾಗಲಿದ್ದು, ಚಿಂತೆಗೆ ಕಾರಣವಾಗಲಿದೆ. ಅವಿವಾಹಿತರ ವಿವಾಹ ಮಾತುಕತೆಗೆ ಮುನ್ನಡೆ ದೊರೆಯಲಿದೆ.
ಕರ್ಕಟಕ: ಬಂಧು ವರ್ಗ, ನೆಚ್ಚಿನ ಜನರ ಭೇಟಿಯಾಗಲು ಮನಸ್ಸು ಹಾತೊರೆಯುವುದು. ಚಿಂತಿತ ಕೆಲಸಗಳನ್ನು ಕೆಲವು ದಿನ ಮುಂದೂಡುವುದು ಒಳಿತು. ಸಾಂಸಾರಿಕವಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ. ಸರಕಾರಿ ಕೆಲಸಗಳನ್ನು ಮುಂದೂಡಬೇಕಾದೀತು.
ಸಿಂಹ: ಕಾರ್ಯರಂಗದಲ್ಲಿ ನಿಮ್ಮ ಜವಾಬ್ಧಾರಿ ಹೆಚ್ಚುವುದು. ನಿಮ್ಮ ಏಳಿಗೆಯನ್ನು ಸಹಿಸದ ಹಿತಶತ್ರುಗಳಿಂದ ತೊಂದರೆ ಅನುಭವಿಸಲಿದ್ದೀರಿ. ಅಧಿಕ ಧನಲಾಭ ತರುವ ಯೋಜನೆಗಳ ಬಗ್ಗೆ ಯೋಚನೆ ಮಾಡಲಿದ್ದೀರಿ. ದೇಹಾರೋಗ್ಯದ ಬಗ್ಗೆ ಕಾಳಜಿ ಅಗತ್ಯ.
ಕನ್ಯಾ: ವಿನಾಕಾರಣ ಬೇಡದ ವಿಚಾರಗಳಿಗೆ ತಲೆಕೆಡಿಸಿಕೊಂಡು ಮಾನಸಿಕ ನೆಮ್ಮದಿ ಹಾಳುಮಾಡಿಕೊಳ್ಳಬೇಡಿ. ವಿನಾಕಾರಣ ಕುಟುಂಬ ಸದಸ್ಯರ ಮೇಲೆ ಕೋಪ ತೋರಿಸಿ ನೋವುಂಟುಮಾಡಬೇಡಿ. ಕೃಷಿಕರಿಗೆ ಭರವಸೆಯ ದಾರಿಗಳು ಗೋಚರವಾಗಲಿದೆ.
ತುಲಾ: ಇಷ್ಟ ಮಿತ್ರರ ಭೇಟಿ, ಭೋಜನ ಸಾಧ್ಯತೆ. ಕುಲದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗಲಿದೆ. ಪ್ರೀತಿ ಪಾತ್ರರ ಮನಸ್ಸಿಗೆ ನೋವಾಗುವಂತೆ ದುಡುಕಿ ಮಾತನಾಡಲು ಹೋಗಬೇಡಿ. ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯ.
ವೃಶ್ಚಿಕ: ದಾಯಾದಿ ಕಲಹಗಳು ದೂರವಾಗಲಿದೆ. ಭವಿಷ್ಯದ ಬಗ್ಗೆ ಹೊಸ ದಾರಿಗಳನ್ನು ಯೋಚನೆ ಮಾಡುವಿರಿ. ಮೇಲ್ವರ್ಗದ ಅಧಿಕಾರಿಗಳಿಗೆ ಚಿಂತೆ ತಪ್ಪದು. ಕೆಳ ಹಂತದ ನೌಕರರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ. ಗೃಹಿಣಿಯರಿಗೆ ಕಾರ್ಯದೊತ್ತಡ ಹೆಚ್ಚಲಿದೆ.
ಧನು: ಚಿನ್ನಾಭರಣಗಳನ್ನು ರಕ್ಷಿಸುವ ಹೊಣೆಗಾರಿಕೆ ಬೀಳಲಿದೆ. ಹಿರಿಯರ ಮಾತುಗಳಿಗೆ ಕಿವಿಗೊಡುವುದು ಅಗತ್ಯ. ಸಂಗಾತಿಯ ಪ್ರೀತಿಗೆ ಪಾತ್ರರಾಗಲಿದ್ದೀರಿ. ಮನಸ್ಸಿಗೆ ಖುಷಿ ಕೊಡುವ ಕೆಲಸ ಮಾಡಲಿದ್ದೀರಿ. ಕಿರು ಓಡಾಟ ನಡೆಸಬೇಕಾಗುತ್ತದೆ.
ಮಕರ: ಅನಿವಾರ್ಯ ಸ್ಥಿತಿಯಲ್ಲಿ ಸಿಲುಕಿಕೊಳ್ಳಲಿದ್ದೀರಿ. ಒಂದು ರೀತಿಯ ಉಭಯ ಸಂಕಟ ಕಾಡಲಿದೆ. ನಿರ್ಧಾರ ಕೈಗೊಳ್ಳಲು ಹಿಂದೆ ಮುಂದೆ ನೋಡಬೇಕಾದೀತು. ಸಂಗಾತಿಯ ಸಲಹೆಗಳಿಗೆ ಕಿವಿಗೊಡಿ. ಇಷ್ಟ ದೇವರ ಪ್ರಾರ್ಥನೆ ಮಾಡಿದರೆ ಮನಸ್ಸಿಗೆ ನೆಮ್ಮದಿ ಸಿಗುವುದು.
ಕುಂಭ: ಮಹಿಳೆಯರಿಗೆ ಮನೆ ನಿರ್ವಹಣೆಯ ಚಿಂತೆ ಕಾಡುವುದು. ಗೃಹ ಬಳಕೆಯ ವಸ್ತುಗಳ ಖರೀದಿ ಮಾಡಲಿದ್ದೀರಿ. ಕಾರ್ಯರಂಗದಲ್ಲಿ ಚಟುವಟಿಕೆಗಳಿಗೆ ತಾತ್ಕಾಲಿಕ ಅಡ್ಡಿಯಾಗಲಿದೆ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿ ಬರಲಿದೆ.
ಮೀನ: ವಿಧಿ ನಿಮ್ಮನ್ನು ಯಾವ ದಿಕ್ಕಿಗೆ ಕರೆದುಕೊಂಡು ಹೋಗುತ್ತದೋ ಆ ದಿಕ್ಕಿಗೆ ನಡೆಯುವುದೇ ಸರಿ. ಯಾವುದೂ ನಿಮ್ಮ ಕೈಯಲ್ಲಿ ಇಲ್ಲ ಎನ್ನುವುದು ಅನುಭವಕ್ಕೆ ಬರುವುದು. ಧಾರ್ಮಿಕವಾಗಿ ಭಕ್ತಿ ಭಾವ ಹೆಚ್ಚಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗದ ಭರವಸೆ ಸಿಗಲಿದೆ.