Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶನಿವಾರ, 4 ಜನವರಿ 2020 (08:45 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಇಂದು ನಿಮಗೆ ಮಿಶ್ರಫಲಗಳಿವೆ. ಸಾಂಸಾರಿಕವಾಗಿ ನೆಮ್ಮದಿಯಿರದೇ ಇದ್ದರೂ ವೃತ್ತಿರಂಗದಲ್ಲಿ ಹೊಸ ಉದ್ಯೋಗವಕಾಶಗಳು ಎದುರಾಗಲಿವೆ. ಆರ್ಥಿಕ ಖರ್ಚು ವೆಚ್ಚಗಳನ್ನು ಸರಿಯಾಗಿ ನಿಭಾಯಿಸಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಸಂಗಾತಿಯ ಸಲಹೆಗೆ ಕಿವಿಗೊಟ್ಟು ನಡೆದರೆ ಯೋಜನೆಗಳು ಸಫಲಗೊಂಡೀತು. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಮಹಿಳೆಯರಿಗೆ ಮುನ್ನಡೆಯ ಲಾಭವಾಗುವುದು. ಕೌಟುಂಬಿಕವಾಗಿ ನೆಮ್ಮದಿ ಮೂಡಲಿದೆ.

ಮಿಥುನ: ವೃತ್ತಿರಂಗದಲ್ಲಿ ಕಾರ್ಯನಿಮಿತ್ತ ಅಧಿಕ ಓಡಾಟ ನಡೆಸಬೇಕಾಗುತ್ತದೆ. ಮೇಲಧಿಕಾರಿಗಳ ನಿರೀಕ್ಷೆ ತಲುಪಲು ಶ್ರಮಪಡಬೇಕಾಗುತ್ತದೆ. ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ಸಂಗಾತಿಗೆ ಉಡುಗೊರೆ ನೀಡಲಿದ್ದೀರಿ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ ಕಾದಿದೆ.

ಕರ್ಕಟಕ: ಸಂತಾನಾಪೇಕ್ಷಿತ ದಂಪತಿಗಳಲ್ಲಿ ಶುಭ ಫಲಗಳು ಕಂಡುಬರಲಿವೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಸರಕಾರಿ ಉದ್ಯೋಗದ ಯೋಗವಿದೆ.

ಸಿಂಹ: ರಾಜಕೀಯ ರಂಗದಲ್ಲಿರುವವರಿಗೆ ಕಾರ್ಯ ಸಾಧನೆಗೆ ಹಲವು ಅಡೆತಡೆಗಳು ಎದುರಾದೀತು. ತಾಳ್ಮೆಯಿಂದ ನಿಭಾಯಿಸಿಕೊಂಡು ಹೋಗಬೇಕಿದೆ. ಅವಿವಾಹಿತರ ವಿವಾಹ ಪ್ರಯತ್ನಕ್ಕೆ ಫಲ ಸಿಗಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ಕನ್ಯಾ: ಆಸ್ತಿ ವಿಚಾರವಾಗಿ ಸಹೋದರರೊಂದಿಗೆ ಮನಸ್ತಾಪವಾದೀತು. ಸರಕಾರಿ ಕೆಲಸದಲ್ಲಿರುವವರಿಗೆ ಮುನ್ನಡೆಯ ಲಾಭವಾಗಲಿದೆ. ಮನೆ ಬದಲಾವಣೆಗೆ ಚಿಂತನೆ ನಡೆಸುವಿರಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸುವಿರಿ.

ತುಲಾ: ಅಧಿಕ ಲಾಭ ತರುವ ಯೋಜನೆಗಳಿಗೆ ಕೈ ಹಾಕುವ ಮುನ್ನ ಯೋಚಿಸಿ ನಿರ್ಧಾರ ಮಾಡುವುದು ಒಳಿತು. ಸಾಂಸಾರಿಕವಾಗಿ ಅನಿರೀಕ್ಷಿತ ಬಂಧು ಮಿತ್ರರ ಭೇಟಿ ಮನಸ್ಸಿಗೆ ಖುಷಿಕೊಡುವುದು. ಆರ್ಥಿಕವಾಗಿ ಖರ್ಚು ವೆಚ್ಚದ ಬಗ್ಗೆ ಜಾಗ್ರತೆಯಿರಲಿ.

ವೃಶ್ಚಿಕ: ಅನಗತ್ಯ ಚಿಂತೆಗಳಿಗೆ ಕಡಿವಾಣ ಹಾಕಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾಶೀಲತೆಗೆ ತಕ್ಕ ಫಲ ಸಿಗಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆಯ ಕೊರತೆಯುಂಟಾಗಬಹುದು. ವಾಹನ ಸವಾರರು ಎಚ್ಚರವಾಗಿರಬೇಕು. ದೇವತಾ ಪ್ರಾರ್ಥನೆ ಮಾಡಿ.

ಧನು: ಬೇಡದ ವಿಚಾರಗಳಿಗೆ ಮೂಗು ತೂರಿಸಲು ಹೋಗಿ ತೊಂದರೆಗೆ ಸಿಲುಕಿಕೊಳ್ಳಬೇಡಿ. ಹಿರಿಯರ ಮನಸ್ಸಿಗೆ ಬೇಸರವಾಗದಂತೆ ನಡೆದುಕೊಳ್ಳಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಗೃಹ ಬಳಕೆ ವಸ್ತುಗಳಿಗಾಗಿ ಖರ್ಚುಗಳಾಗಬಹುದು.

ಮಕರ: ಮಿತ್ರರೊಂದಿಗೆ ಅನವಶ್ಯಕ ವಾದ ವಿವಾದಗಳಲ್ಲಿ ತೊಡಗಿ ಸಂಬಂಧ ಹಾಳು ಮಾಡಿಕೊಳ್ಳಬೇಡಿ. ಸಂಯಮ ಕಾಪಾಡಿಕೊಳ್ಳುವುದು ಮುಖ್ಯ. ಚಾಡಿ ಮಾತುಗಳನ್ನು ಅಲಕ್ಷಿಸಿ. ಹಣಕಾಸಿನ ಹರಿವಿಗೆ ತೊಂದರೆಯಿರದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕುಂಭ: ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಹೊಸ ಮಿತ್ರರನ್ನು ಸಂಪಾದಿಸುವಿರಿ. ಕೆಲಸ ಕಾರ್ಯಗಳಲ್ಲಿ ವಿಘ್ನಗಳು ಎದುರಾದರೂ ತಾಳ್ಮೆಯಿಂದ ನಡೆದರೆ ಜಯ ಸಾಧ್ಯ. ಸಂಗಾತಿಯ ಮಾತಿಗೆ ಕಿವಿಗೊಡಬೇಕಾಗುತ್ತದೆ.

ಮೀನ: ಋಣಾತ್ಮಕ ಚಿಂತನೆಗಳಿಗೆ ಅವಕಾಶ ಕೊಡಬೇಡಿ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗುವಿರಿ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ಎದುರಾಗಬಹುದು. ಹೊಸ ಯೋಜನೆ ಆರಂಭಿಸಲು ಕೆಲವು ಕಾಲ ಕಾಯುವುದು ಒಳಿತು.

Share this Story:

Follow Webdunia kannada

ಮುಂದಿನ ಸುದ್ದಿ

ಕಟಕ ರಾಶಿಯವರು ಹುಣ್ಣಿಮೆ ದಿನ ಹಾಲಿನಿಂದ ಹೀಗೆ ಮಾಡಿದರೆ ನಿಮಗೆ ಧನಪ್ರಾಪ್ತಿಯಾಗುತ್ತದೆ