ಮೇಷ: ಅನಿರೀಕ್ಷಿತವಾಗಿ ಬಂಧುಮಿತ್ರರ ಭೇಟಿ ಸಾಧ್ಯತೆಯಿದೆ. ಕೌಟುಂಬಿಕವಾಗಿ ಜವಾಬ್ಧಾರಿಗಳು ಹೆಚ್ಚಲಿವೆ. ಕಾರ್ಯದೊತ್ತಡದಿಂದ ದೇಹಾಯಾಸವಾಗಬಹುದು. ಆದರೂ ತಾಳ್ಮೆಯಿಂದ ನಡೆದುಕೊಂಡರೆ ನೆಮ್ಮದಿಗೆ ಕೊರತೆಯಿರದು. ಖರ್ಚು ವೆಚ್ಚದ ಬಗ್ಗೆ ಕಾಳಜಿಯಿರಲಿ.
ವೃಷಭ: ಅಂದುಕೊಂಡ ಕೆಲಸ ಕಾರ್ಯಗಳನ್ನು ನೆರವೇರಿಸಲು ವಿಘ್ನಗಳು ಎದುರಾಗಬಹುದು. ಎದೆಗುಂದದೇ ಮುನ್ನಡೆಯಬೇಕು. ಕುಲದೇವರ ಪ್ರಾರ್ಥನೆಯೊಂದಿಗೆ ದಿನದ ಆರಂಭ ಮಾಡಿ. ಹೊಸ ವಸ್ತುಗಳ ಖರೀದಿ ಸಾಧ್ಯತೆಯಿದೆ.
ಮಿಥುನ: ಮನೆಯಲ್ಲಿ ಶುಭ ಮಂಗಲ ಕಾರ್ಯ ನಡೆಸಲು ಸಿದ್ಧತೆ ನಡೆಸುವಿರಿ. ಪ್ರೀತಿ ಪಾತ್ರರ ಇಚ್ಛೆಗೆ ಬೆಲೆ ಕೊಡಬೇಕಾಗುತ್ತದೆ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡುವಿರಿ. ದೇಹಾರೋಗ್ಯದಲ್ಲಿ ಏರುಪೇರಾಗಬಹುದು. ಎಚ್ಚರಿಕೆ ಅಗತ್ಯ.
ಕರ್ಕಟಕ: ವ್ಯವಹಾರ, ವ್ಯಾಪಾರ ಕ್ಷೇತ್ರದಲ್ಲಿ ಉನ್ನತಿಯಿರಲಿದೆ. ಹೊಸ ಬಂಡವಾಳ ಹೂಡಿಕೆಗೆ ಇದು ಸಕಾಲ. ಹಿತಶತ್ರುಗಳ ಬಗ್ಗೆ ಎಚ್ಚರದಿಂದಿರಿ. ವಾಹನ ಸವಾರರು ಎಚ್ಚರವಾಗಿರಬೇಕು. ಸಂಗಾತಿಯ ಮನದಾಸೆ ಪೂರೈಸುವಿರಿ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.
ಸಿಂಹ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ಹೆಚ್ಚುವುದು. ಶುಭ ಕೆಲಸಗಳನ್ನು ಆರಂಭಿಸಲು ಇದು ಹೇಳಿ ಮಾಡಿಸಿದ ದಿನವಾಗಿರಲಿದೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಬಹುದು, ಕಾಳಜಿ ಅಗತ್ಯ. ಹಿರಿಯರ ಸಲಹೆಗಳಿಗೆ ಕಿವಿಗೊಡಿ. ದಿನದಂತ್ಯಕ್ಕೆ ಅಚ್ಚರಿಯ ವಾರ್ತೆ ಸಿಗಲಿದೆ.
ಕನ್ಯಾ: ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಕೌಟುಂಬಿಕವಾಗಿ ಸುಂದರ ಕ್ಷಣಗಳನ್ನು ಕಳೆಯುವಿರಿ. ಪ್ರೀತಿ ಪಾತ್ರರೊಂದಿಗೆ ಕಿರು ಪ್ರವಾಸ ಮಾಡುವಿರಿ. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡದ ಚಿಂತೆ ಕಾಡಲಿದೆ. ಖರ್ಚು ವೆಚ್ಚದ ಬಗ್ಗೆ ಹಿಡಿತವಿರಲಿ.
ತುಲಾ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಸಹೋದರಿಯರಿಂದ ಆಸ್ತಿ ವಿಚಾರವಾಗಿ ಕಿರಿ ಕಿರಿ ಉಂಟಾದೀತು. ಹಿರಿಯರ ಸಲಹೆಗಳಿಗೆ ಕಿವಿಗೊಡಿ. ಶುಭ ಕಾರ್ಯಗಳನ್ನು ನಡೆಸಲು ಸಕಾಲ.
ವೃಶ್ಚಿಕ: ಅಧಿಕ ಧನಲಾಭವಾಗುವ ಕೆಲಸಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ವಾಹನ ಖರೀದಿಗೆ ಮನಸ್ಸು ಮಾಡುವಿರಿ. ಸ್ವ ವ್ಯವಹಾರ ಮಾಡುವವರಿಗೆ ಸಣ್ಣ ಮಟ್ಟಿಗಿನ ಲಾಭ ಕಂಡುಬರಲಿದೆ. ಅವಿವಾಹಿತರ ವಿವಾಹ ಪ್ರಯತ್ನಗಳಿಗೆ ಮುನ್ನಡೆ ಸಿಗಲಿದೆ.
ಧನು: ಅನಿರೀಕ್ಷಿತವಾಗಿ ಇಷ್ಟಮಿತ್ರರು, ಬಂಧುಗಳ ಭೇಟಿಯಾಗಿ ಮನಸ್ಸಿಗೆ ನೆಮ್ಮದಿಯಾಗುವುದು. ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ಆದಾಯ ಲೆಕ್ಕಪತ್ರಗಳ ಬಗ್ಗೆ ಎಚ್ಚರಿಕೆ ಅಗತ್ಯ. ಹಿರಿಯರಿಂದ ಬಂದ ಬಳವಳಿಯನ್ನು ಕಾಪಾಡಿಕೊಳ್ಳುವ ಜವಾಬ್ಧಾರಿ ನಿಮ್ಮದಾಗಲಿದೆ.
ಮಕರ: ಹೆಚ್ಚು ಲಾಭ ಬರುವಂತಹ ಉದ್ಯೋಗದ ಕಡೆಗೆ ಚಿಂತನೆ ನಡೆಸುವಿರಿ. ಆದರೆ ವಂಚನೆಗೊಳಗಾಗುವ ಭೀತಿಯಿದೆ. ಎಚ್ಚರಿಕೆ ಅಗತ್ಯ. ವಾಹನ, ಭೂಮಿ ಖರೀದಿ ಯೋಗವಿದೆ. ಖರ್ಚು ವೆಚ್ಚದ ಬಗ್ಗೆ ಹಿಡಿತವಿರಲಿ. ಮಹಿಳೆಯರಿಗೆ ಇಂದು ಅಂದುಕೊಂಡಿದ್ದು ನೆರವೇರಿದ ಖುಷಿ ಸಿಗುವುದು.
ಕುಂಭ: ಉದರ ಸಂಬಂಧೀ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ನಾಲಿಗೆ ಚಪಲಕ್ಕೆ ಕಡಿವಾಣ ಹಾಕಿ. ವಿನಾಕಾರಣ ವಾಗ್ವಾದಕ್ಕಿಳಿಯಬೇಡಿ. ಮಕ್ಕಳ ವಿಚಾರದಲ್ಲಿ ಸಂತಸದ ವಾರ್ತೆ ಸಿಗಲಿದೆ. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ.
ಮೀನ: ಮಹಿಳಾ ಉದ್ಯೋಗಿಗಳಿಗೆ ಶುಭ ಫಲ ಪ್ರಾಪ್ತಿಯಾಗುವುದು. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರ. ನಿಮ್ಮ ಬೆಳವಣಿಗೆ ಕಂಡು ಸಹೋದ್ಯೋಗಿಗಳೇ ಅಸೂಯೆಪಡಬಹುದು. ಋಣಾತ್ಮಕ ಚಿಂತನೆಗಳಿಗೆ ಅವಕಾಶ ಕೊಡದಿರಿ. ಆರೋಗ್ಯದಲ್ಲಿ ಸುಧಾರಣೆಯಾಗುವುದು.