ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 29 ಸೆಪ್ಟಂಬರ್ 2019 (08:26 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ದೂರ ಸಂಚಾರದಿಂದ ಕಾರ್ಯಸಿದ್ಧಿ. ವೈಯಕ್ತಿಕವಾಗಿ ಆರೋಗ್ಯದ ಮೇಲೆ ಕಾಳಜಿ ಇರಲಿ. ಸಂಗಾತಿಯೊಂದಿಗೆ ಸಾಮರಸ್ಯದ ಕೊರತೆ ಕಾಡುವುದು. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸುವಿರಿ. ಧಾರ್ಮಿಕ ಕಾರ್ಯಳಿಗಾಗಿ ಧನವಿನಿಯೋಗವಾಗಲಿದೆ.

ವೃಷಭ: ಅನಗತ್ಯವಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಿದೆ. ಹಣಕಾಸಿನ ಮುಗ್ಗಟ್ಟಿನ ಪರಿಸ್ಥಿತಿ ಎದುರಿಸಲು ಇಂದೇ ಸಜ್ಜಾಗಿ. ದೂರ ಪ್ರಯಾಣದಲ್ಲಿ ವಿಘ್ನಗಳ ಸಾಧ್ಯತೆಯಿದೆ. ದೇಹಾರೋಗ್ಯದಲ್ಲಿ ಸುಧಾರಣೆಯಾಗುವುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ.

ಮಿಥುನ: ಹಳೆ ಮಿತ್ರರ ಭೇಟಿ ಮನಸ್ಸಿಗೆ ಖುಷಿ ಕೊಡುವುದು. ಕಷ್ಟದ ಸಮಯದಲ್ಲಿ ಪ್ರೀತಿ ಪಾತ್ರರಿಂದ ಸಹಾಯ ಸಿಗುವುದು. ಹಿರಿಯರ ಆರೋಗ್ಯದ ಮೇಲೆ ನಿಗಾ ವಹಿಸಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಲಸ್ಯತನ ಕಂಡುಬರುವುದು. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ಪ್ರೇಮಿಗಳ ವಿಚಾರ ಮನೆಯವರೆದುರು ಬಹಿರಂಗವಾಗಲಿದೆ. ವಾಹನ, ಭೂಮಿ ಖರೀದಿಗೆ ಇದು ಸಕಾಲ. ಆದರೆ ವಿಶ್ವಾಸ ಘಾತುಕರು ಇರುತ್ತಾರೆ, ಎಚ್ಚರಿಕೆಯಿಂದಿರಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನಕ್ಕಾಗಿ ದೂರ ಪ್ರಯಾಣ ಮಾಡಬೇಕಾಗುತ್ತದೆ.

ಸಿಂಹ: ಕಾರ್ಮಿಕ ವರ್ಗದವರಿಗೆ ಮೇಲಧಿಕಾರಿಗಳಿಂದ ಕಿರಿ ಕಿರಿಯಾಗಬಹುದು. ಪಾಲು ಬಂಡವಾಳ ವ್ಯವಹಾರದಲ್ಲಿ ಲಾಭ ಗಳಿಸಬಹುದು. ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿಂದಿರಿ. ರಾಜಕೀಯ ರಂಗದಲ್ಲಿರುವವರಿಗೆ ಮುನ್ನಡೆಯಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.

 
ಕನ್ಯಾ: ಕೋರ್ಟು ಕಚೇರಿ ವ್ಯವಹಾರಗಳು ನಿಮ್ಮ ಪರವಾಗಿ ಬಂದು ನೆಮ್ಮದಿಯಾಗಲಿದೆ. ಕಾರ್ಯನಿಮಿತ್ತ ದೂರ ಪ್ರಯಾಣ ಮಾಡುವಿರಿ. ದೇವತಾ ದರ್ಶನ ಭಾಗ್ಯವಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗಲಿದೆ. ಯಾವುದಕ್ಕೂ ಸರಿಯಾಗಿ ಆಲೋಚಿಸಿ ಹೆಜ್ಜೆಯಿಡುವುದು ಮುಖ್ಯ.

ತುಲಾ: ಕೌಟುಂಬಿಕವಾಗಿ ಕೆಲವೊಂದು ಬದಲಾವಣೆಗಳಾಗಲಿವೆ. ಅನಿರೀಕ್ಷಿತವಾಗಿ ಖರ್ಚು ವೆಚ್ಚಗಳು ಕಂಡುಬರಬಹುದು. ಸ್ವ ಉದ್ಯೋಗಿಗಳು ಲಾಭ ಗಳಿಸುವರು. ಅವಿವಾಹಿತರಿಗೆಕ ಕಂಕಣ ಬಲ ಕೂಡಿಬರುವುದು. ಬಂಧು ಬಳಗದವರ ಚಾಡಿ ಮಾತುಗಳನ್ನು ಅಲಕ್ಷಿಸಿ.

ವೃಶ್ಚಿಕ: ಹಿರಿಯರ ಸಲಹೆಗಳನ್ನು ಪಾಲಿಸಿದರೆ ಮನೆಯಲ್ಲಿ ನೆಮ್ಮದಿ. ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ, ಓಡಾಟ ನಡೆಸಬೇಕಾಗುತ್ತದೆ. ಸಾಂಸಾರಿಕವಾಗಿ ಸಂಗಾತಿಯ ವಿಶ್ವಾಸ ಗಳಿಸುವಿರಿ. ವಾಹನ ಚಾಲಕರಿಗೆ ಅಪಘಾತ ಭಯವಿದ್ದು, ಎಚ್ಚರಿಕೆಯಿಂದಿರಿ.

ಧನು: ಪ್ರೀತಿ ಪಾತ್ರರೊಂದಿಗೆ ಪ್ರವಾಸ, ದೂರ ಸಂಚಾರ ಸಾಧ‍್ಯತೆಯಿದೆ. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡುವಿರಿ. ವ್ಯಾಪಾರ, ವ್ಯವಹಾರದಲ್ಲಿ ಚೇತರಿಕೆ ಕಂಡುಬರುವುದು. ಕಾರ್ಯರಂಗದಲ್ಲಿ ದುಡುಕದೇ ಮುಂದುವರಿಯಿರಿ. ದಿನದಂತ್ಯಕ್ಕೆ ಶುಭ ಸುದ್ದಿ.

ಮಕರ: ಋಣಾತ್ಮಕ ಚಿಂತನೆಗಳು ನಿಮ್ಮನ್ನು ಹೊಸ ನಿರ್ಧಾರ ತೆಗೆದುಕೊಳ್ಳಲು ಅಡ್ಡಿ ಮಾಡುವುದು. ಆತ್ಮಸ್ಥೈರ್ಯದಿಂದ ಮುನ್ನಡೆಯಬೇಕು. ಸಾಮಾಜಿಕವಾಗಿ ಉತ್ತಮ ಸ್ಥಾನ ಮಾನ ಗಳಿಸುವಿರಿ. ಸಂಗಾತಿ ಪ್ರೀತಿ ಆದರಗಳಿಗೆ ಪಾತ್ರರಾಗುವಿರಿ. ಚಿಂತೆ ಬೇಡ.

ಕುಂಭ: ದೂರ ಸಂಚಾರದಿಂದ ದೇಹಾಯಾಸವಾಗುವುದು. ಮಕ್ಕಳ ವಿರೋಧ ಕಟ್ಟಿಕೊಳ್ಳುವಿರಿ. ಸಂಗಾತಿಯ ನಿರ್ಧಾರಗಳಿಗೆ ತಲೆದೂಗಬೇಕಾಗುತ್ತದೆ. ದೇವತಾ ಕಾರ್ಯಗಳಿಗಾಗಿ ಖರ್ಚು ವೆಚ್ಚಗಳಾಗುವುದು. ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ ಕಂಡುಬರುವುದು.

ಮೀನ: ಹಿರಿಯರ ಹಿತ ವಚನಗಳು ಪಥ್ಯವಾಗದೇ ಹೋಗಬಹುದು. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರುವುದು. ಸಂಗಾತಿಯ ಮನೋಕಾಮನೆ ಪೂರೈಸುವಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಲಿದೆ. ಮಕ್ಕಳಿಂದ ಸಂತಸದ ವಾರ್ತೆ ಆಲಿಸುವಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಗ್ರಹ ಪಂಚರತ್ನ ಸ್ತೋತ್ರ ಕನ್ನಡದಲ್ಲಿ

ಸೌಭಾಗ್ಯ ಲಕ್ಷ್ಮೀ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಗುರು ಪಾದುಕಾ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಜಾತಕದಲ್ಲಿ ಬುಧ ಗ್ರಹ ದೋಷವಿದ್ದರೆ ಈ ಮಂತ್ರ ಓದಿ

ಕುಜ ದೋಷವಿದ್ದರೆ ಇಂದು ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments