ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಸ್ಥಿರ ಉದ್ಯೋಗ ಲಭಿಸುವುದಾದರೂ ಕಿರಿ ಕಿರಿ ತಪ್ಪದು. ವಿಪರೀತ ಓಡಾಟ, ಕಾರ್ಯದೊತ್ತಡದಿಂದ ಹೈರಾಣಾಗುವಿರಿ. ಸಂಗಾತಿಯೊಂದಿಗೆ ಹಿಂದೆ ಮಾಡಿದ ಮನಸ್ತಾಪ ಮುಂದುವರಿಯುವುದು. ತಾಳ್ಮೆಯಿಂದಿರಿ.
ವೃಷಭ: ಗುರು ಲಾಭದಾಯಕನಾಗಿದ್ದು, ಉದ್ಯೋಗ, ಆರ್ಥಿಕ ಸ್ಥಿತಿ ಗತಿಗಳು ಸುಧಾರಿಸುವುದು. ಹೊಸ ವ್ಯವಹಾರಗಳಿಗೆ ಕೈ ಹಾಕುವಿರಿ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಉತ್ತಮ ಸ್ಥಾನ ಮಾನ ಪಡೆಯುವಿರಿ.
ಮಿಥುನ: ಕುಟುಂಬದಲ್ಲಿ ಕೆಲವೊಂದು ಸಮಸ್ಯೆಗಳಿಗೆ ನೀವೇ ಜವಾಬ್ಧಾರಿ ವಹಿಸಿಕೊಂಡು ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಸಂಗಾತಿಯ ಸಹಕಾರ ಲಭಿಸುವುದು. ತಾಳ್ಮೆಯಿಂದ ಮುನ್ನಡೆದರೆ ಮಾತ್ರ ಯಶಸ್ಸು ದೊರಕುವುದು.
ಕರ್ಕಟಕ: ವ್ಯಾಪಾರ, ವಹಿವಾಟಿನಲ್ಲಿ ತೊಡಗಿಸಿಕೊಂಡವರು ಉತ್ತಮ ಲಾಭ ಪಡೆಯುವರು. ವೈವಾಹಿಕ ಜೀವನದಲ್ಲಿ ಏರು ಪೇರು ಕಂಡುಬಂದೀತು. ಹಿರಿಯರ ಮಧ್ಯಸ್ಥಿಕೆ ಬೇಗಾಬಹುದು. ದೂರ ಸಂಚಾರದಿಂದ ಕಾರ್ಯಸಿದ್ಧಿಯಾಗುವುದು.
ಸಿಂಹ: ಕುಟುಂಬದಲ್ಲಿ ಶುಭ ಕಾರ್ಯಗಳನ್ನು ನೆರವೇರಿಸಲು ನೀವೇ ಓಡಾಟ ನಡೆಸಬೇಕಾಗುತ್ತದೆ. ಸಹೋದರಿಯಿದ್ದರೆ ವಿವಾಹ ಸಂಬಂಧೀ ಪ್ರಸ್ತಾಪಗಳು ಬರುವುದು. ಸಹನೆಯಿಂದ ಕೆಲಸ ನಿಭಾಯಿಸಿ. ಆರ್ಥಿಕವಾಗಿ ಖರ್ಚು ವೆಚ್ಚಗಳಾಗಬಹುದು.
ಕನ್ಯಾ: ಕಾರ್ಯಾರಂಭದಲ್ಲಿ ವಿಘ್ನಗಳಿದ್ದರೂ ಕಾರ್ಯಸಾಧನೆಗೆ ತೊಂದರೆಯಾಗದು. ಮಾನಸಿಕವಾಗಿ ಯಾವುದೋ ಬೇಸರ ಕಾಡಲಿದೆ. ಇದರಿಂದ ಕೆಲಸದಲ್ಲೂ ನಿರಾಸಕ್ತಿ ಮೂಡಬಹುದು. ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ.
ತುಲಾ: ದೂರ ಸಂಚಾರದಿಂದ ಆರೋಗ್ಯ ಹದಗೆಡಬಹುದು. ಅಪರಿಚಿತರೊಂದಿಗೆ ವ್ಯವಹರಿಸಲು ಹೋಗಬೇಡಿ. ದುಡುಕಿನ ವರ್ತನೆ ತೋರದಿರಿ. ತಾಳ್ಮೆ, ಸಮಾಧಾನದಿಂದ ಮುಂದುವರಿದರೆ ಎಲ್ಲಾ ಕ್ಷೇತ್ರದಲ್ಲೂ ಜಯ ಸಿಗುವುದು.
ವೃಶ್ಚಿಕ: ಕುಟುಂಬ ಸದಸ್ಯರಲ್ಲಿ ಯಾರಾದರೂ ಒಬ್ಬರಿಗೆ ಆರೋಗ್ಯ ಸಮಸ್ಯೆ ಕಾಡಿ ಆಸ್ಪತ್ರೆಗೆ ಅಲೆದಾಡಬೇಕಾಗಬಹುದು. ಉದ್ಯೋಗಿಗಳಿಗೆ ಮುನ್ನಡೆ, ಬಡ್ತಿ ಯೋಗವಿದೆ. ಮಕ್ಕಳ ವಿದ್ಯಾಭ್ಯಾಸದ ವಿಚಾರಕ್ಕೆ ಚಿಂತೆಯಾಗುವುದು.
ಧನು: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುತ್ತದೆ. ಪ್ರಯಾಣ ಮಾಡಬೇಕಾಗಿಬರುವುದು. ಮನೆಯಲ್ಲಿ ಕಳ್ಳತನದ ಭೀತಿಯಿದೆ. ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಿರಿ. ಎಚ್ಚರಿಕೆಯಿಂದಿರಿ.
ಮಕರ: ಯಾವುದಾದರೂ ಹೊಸ ಕೆಲಸಕ್ಕೆ ಕೈ ಹಾಕಬೇಕೆಂದುಕೊಂಡಿದ್ದರೂ ಹಣದ ಸಮಸ್ಯೆಯಿಂದ ಸಾಧ್ಯವಾಗದು. ಸಂಗಾತಿಯೊಂದಿಗೆ ತಾಳ್ಮೆಯಿಂದ ವರ್ತಿಸದೇ ಹೋದಲ್ಲಿ ಮನಸ್ತಾಪ ಗ್ಯಾರಂಟಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಭಿಸುವುದು.
ಕುಂಭ: ಪತಿ-ಪತ್ನಿಯರಲ್ಲಿ ಮಕ್ಕಳ ವಿಚಾರಕ್ಕೆ ಭಿನ್ನಾಭಿಪ್ರಾಯಗಳು ಮೂಡುವುದು. ಆರ್ಥಿಕವಾಗಿ ಹಲವು ಖರ್ಚು ವೆಚ್ಚಗಳು ಎದುರಾಗಲಿವೆ. ಹಿರಿಯರ ಸಲಹೆಗಳಿಗೆ ಬೆಲೆ ಕೊಡಿ. ಏಕಾಂಗಿ ನಿರ್ಧಾರಗಳು ಕೈಕೊಡುವ ಸಾಧ್ಯತೆಯಿದೆ.
ಮೀನ: ಕುಟುಂಬಕ್ಕೆ ಸಂಬಂಧಿಸಿದ ಕೆಲಸಗಳಿಗೆ ಹೆಚ್ಚಿನ ಓಡಾಟ ನಡೆಸಬೇಕಾಗುತ್ತದೆ. ಆರ್ಥಿಕ ಸಂಕಷ್ಟಗಳು ನಿಧಾನವಾಗಿ ದೂರವಾಗಿ ಅಭಿವೃದ್ಧಿ ಕಾಣುವಿರಿ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡಬೇಕಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ