Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಗುರುವಾರ, 17 ಜನವರಿ 2019 (09:01 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಹಳೆಯ ಸಂಬಂಧವೊಂದು ಹುಡುಕಿಕೊಂಡು ಬರಲಿದೆ. ಉದ್ದಿಮೆದಾರರಿಗೆ ಲಾಭದಾಯಕ ದಿನ. ಕುಟುಂಬದಲ್ಲಿ ಬಂಧು ಮಿತ್ರರ ಆಗಮನದಿಂದ ಸಂತಸ ನೆಲೆಯಾಗಲಿದೆ.

ವೃಷಭ: ಮನೆಯಲ್ಲಿ ಮಂಗಲ ಕಾರ್ಯ ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ. ಆರ್ಥಿಕವಾಗಿ ಧನಾಗಮನವಾದಷ್ಟೇ ಖರ್ಚೂ ಹೆಚ್ಚಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದಿಂದ ಯಶಸ್ಸು. ದೂರ ಸಂಚಾರದಲ್ಲಿ ಎಚ್ಚರಿಕೆ.

ಮಿಥುನ: ಹಳೇ ಬಾಕಿಗಳು ಪಾವತಿಯಾಗುವುದು. ಆರ್ಥಿಕವಾಗಿ ಲಾಭ ಗಳಿಸುವಿರಿ. ಉದ್ಯೋಗದಲ್ಲಿ ಅಡೆತಡೆಗಳು ತೋರಿಬಂದೀತು. ಸಹೋದ್ಯೋಗಿಗಳ ಅಸಹಕಾರ ಅನುಭವಕ್ಕೆ ಬರುವುದು. ವಿದ್ಯಾರ್ಥಿಗಳಿಗೆ ಶುಭ ದಿನ.

ಕರ್ಕಟಕ: ಆರ್ಥಿಕವಾಗಿ ಸಬಲರಾಗುತ್ತೀರಿ. ಉದ್ಯೋಗದಲ್ಲಿ ನಿರೀಕ್ಷಿತ ಮುನ್ನಡೆ ಪಡೆಯುವಿರಿ. ಮಂಗಲ ಕಾರ್ಯಗಳನ್ನು ನೆರವೇರಿಸುವಿರಿ. ಹೊಸ ಕೆಲಸಗಳಿಗೆ ಕೈ ಹಾಕಿದರೆ ವಿಘ್ನಗಳು ಎದುರಾದೀತು. ದೇವತಾ ಆರಾಧನೆಯಿಂದ ಎಲ್ಲವೂ ಶುಭ.

ಸಿಂಹ: ಮನೆಗೆ ಬೇಕಾದ ವಸ್ತುಗಳಿಗಾಗಿ ಖರ್ಚು ವೆಚ್ಚ ಮಾಡಬೇಕಾದೀತು. ಅನಗತ್ಯವಾಗಿ ಇನ್ನೊಬ್ಬರ ವಾದ ವಿವಾದದಲ್ಲಿ ಮೂಗು ತೂರಿಸಲು ಹೋಗಬೇಡಿ. ಅನಿರೀಕ್ಷಿತವಾಗಿ ಅತಿಥಿಗಳ ಆಗಮನವಾಗಲಿದೆ.

ಕನ್ಯಾ: ಕುಟುಂಬದಲ್ಲಿ ಸಂಗಾತಿಯೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಉದ್ಯೋಗದಲ್ಲಿ ಕಿರಿ ಕಿರಿ ಆಗುವುದು. ಮಿತ್ರರಿಂದ ಸಹಕಾರ ದೊರೆತು ಸಮಸ್ಯೆಗಳು ದೂರವಾಗುವುದು. ಅವಿವಾಹಿತರಿಗೆ ವಿವಾಹ ಭಾಗ್ಯವಿರಲಿದೆ.

ತುಲಾ: ಆರೋಗ್ಯದಲ್ಲಿ ಕೊಂಚ ಏರುಪೇರಾಗುವುದು. ಎಚ್ಚರಿಕೆ ಅಗತ್ಯ. ವೃತ್ತಿಯಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಅನುಭವಿಸುವಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣವಿರಲಿದೆ.

ವೃಶ್ಚಿಕ: ಆರ್ಥಿಕ ಮುಗ್ಗಟ್ಟು ಎದುರಾಗುವುದು. ಆತಂಕದ ಪರಿಸ್ಥಿತಿಯಲ್ಲಿ ಇರುವಿರಿ. ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯ. ಬೇಗನೇ ತಾಳ್ಮೆ ಕಳೆದುಕೊಳ್ಳುವಿರಿ. ಕಾರ್ಯ ಕ್ಷೇತ್ರದಲ್ಲಿ ಒತ್ತಡ ಹೆಚ್ಚಾಗುವುದು.

ಧನು: ಜೀರ್ಣ ಸಂಬಂಧೀ ಆರೋಗ್ಯ ಸಮಸ್ಯೆ ಎದುರಾಗವುದು. ಹಿರಿಯರ ಬಗ್ಗೆ ಚಿಂತೆ ಮಾಡುವಿರಿ. ಆರ್ಥಿಕವಾಗಿ ಖರ್ಚು ವೆಚ್ಚಗಳು ಹೆಚ್ಚಾಗುವುದು. ಉದ್ಯೋಗದಲ್ಲಿ ಮುನ್ನಡೆ ಸಿಗುತ್ತದೆ.

ಮಕರ: ಕಾರ್ಯಕ್ಷೇತ್ರದಲ್ಲಿ ಅಡೆತಡೆಗಳಿದ್ದರೂ ಅಂತಿಮವಾಗಿ ಜಯ ನಿಮ್ಮದೇ. ವ್ಯಾಪಾರ ವ್ಯವಹಾರ ಮಾಡುವವರಿಗೆ ಲಾಭ ಕಂಡುಬರುತ್ತದೆ. ಆದರೆ ಅಷ್ಟೇ ಖರ್ಚೂ ಇರುವುದು. ಎಚ್ಚರಿಕೆ ಅಗತ್ಯ.

ಕುಂಭ: ಮಾನಸಿಕವಾಗಿ ಯಾವುದೋ ಒಂದು ವಿಚಾರ ನಿಮಗೆ ಕ್ಷೋಭೆ ಉಂಟು ಮಾಡುವುದು. ತಾಳ್ಮೆ ಕಳೆದುಕೊಳ್ಳುವಿರಿ. ಆದರೆ ಧನಾಗಮನಕ್ಕೆ ಕೊರತೆಯಿರದು. ದೇವತಾ ಆರಾಧನೆಯಿಂದ ದಿನದಂತ್ಯಕ್ಕೆ ಶುಭವಾಗಲಿದೆ.

ಮೀನ: ಆರ್ಥಿಕವಾಗಿ ಮುಗ್ಗಟ್ಟು ಅನುಭವಿಸುತ್ತಿದ್ದರೆ ನಿಧಾನವಾಗಿ ಚೇತರಿಕೆ ಕಂಡುಬರುವುದು. ದಾಯಾದಿಗಳ ಜತೆ ಕಲಹ ಸಾಧ್ಯತೆಯಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳು ಹೆಚ್ಚುವುದು. ಕುಲದೇವರ ಪ್ರಾರ್ಥಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Durga Mantra: ಮಂಗಳವಾರ ಓದಲೇಬೇಕಾದ ದುರ್ಗಾ ಸ್ತೋತ್ರ ಇಲ್ಲಿದೆ ನೋಡಿ

Karnataka Weather: ಈ ವಾರದಿಂದ ರಾಜ್ಯದಲ್ಲಿ ಮಳೆ ಹೇಗಿರಲಿದೆ ಇಲ್ಲಿದೆ ಸಂಪೂರ್ಣ ವರದಿ

Shiva Mantra: ಸೋಮವಾರ ಶಿವ ಅಷ್ಟೋತ್ತರ ಭಕ್ತಿಯಿಂದ ಓದಿ

Subramanya Mantra: ಸುಬ್ರಹ್ಮಣ್ಯ ಸ್ವಾಮಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಪಾಂಡುರಂಗಾಷ್ಟಕಂ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments