ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಸೋಮವಾರ, 7 ಜನವರಿ 2019 (08:49 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಸಾಂಸಾರಿಕವಾಗಿ ಹೊಂದಾಣಿಕೆ ಕೊರತೆಯಿಂದ ಸಂಗಾತಿ ಜತೆ ಮನಸ್ತಾಪ ಮಾಡಿಕೊಳ್ಳುವಿರಿ. ಆರೋಗ್ಯ ಹದತಪ್ಪುವುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದು.

ವೃಷಭ: ದೂರ ಸಂಚಾರ ಯೋಗವಿದ್ದು, ಬಂಧು ಮಿತ್ರರ ಜತೆಗೆ ಪ್ರವಾಸ ಕೈಗೊಳ್ಳುವಿರಿ. ಆದರೆ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಹೊಸ ವ್ಯವಹಾರಕ್ಕೆ ಕೈ ಹಾಕಿದರೆ ಲಾಭ ಪಡೆಯುವಿರಿ. ನಿರೀಕ್ಷಿತ ಮುನ್ನಡೆ ಪಡೆಯುತ್ತೀರಿ.

ಮಿಥುನ: ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ ಅನುಭವಿಸಬೇಕಾದೀತು. ವಿದ್ಯಾರ್ಥಿಗಳಿಗೆ ಅತೀವ ಪ್ರಯತ್ನ ಪಟ್ಟರೆ ಮಾತ್ರ ಯಶಸ್ಸು. ಕುಟುಂಬದಲ್ಲಿ ಸಮಾಧಾನ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.

ಕರ್ಕಟಕ: ಉದ್ಯೋಗದಲ್ಲಿ ಮುನ್ನಡೆ ದೊರಕೀತು. ನೀವು ಮಾಡಿದ ಕೆಲಸಕ್ಕೆ ಮನ್ನಣೆ ಸಿಕ್ಕಿ ಸಂತಸ ಅನುಭವಿಸುವಿರಿ. ಆರ್ಥಿಕವಾಗಿಯೂ ಅಭಿವೃದ್ಧಿ ಹೊಂದುವಿರಿ. ಮನೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವಿರಿ.

ಸಿಂಹ: ಸಂಗಾತಿ ಜತೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಸಂಸಾರದಲ್ಲಿ ತಾಳಮೇಳ ತಪ್ಪಲಿದೆ. ವಿದ್ಯಾರ್ಥಿಗಳು ಆಲಸಿಗಳಾಗುವರು. ಬಾಯ್ತಪ್ಪಿ ಆಡುವ ಮಾತು ಕಲಹಕ್ಕೆ ಕಾರಣವಾದೀತು. ದೂರ ಸಂಚಾರ ಯೋಗವಿದೆ.

ಕನ್ಯಾ: ಆರ್ಥಿಕ ಲಾಭವಾಗಲಿದೆ. ಎಷ್ಟೋ ದಿನದಿಂದ ಬಾಕಿಯಿದ್ದ ಸಾಲ ಮರುಪಾವತಿಯಾಗಲಿದೆ. ಆದರೆ ಕೈಗೊಳ್ಳುವ ಕಾರ್ಯಗಳಲ್ಲಿ ವಿಘ್ನಗಳು ಎದುರಾಗಬಹುದು. ಆರೋಗ್ಯವೂ ಕೊಂಚ ಕೈ ಕೊಟ್ಟೀತು.

ತುಲಾ: ಸಂಗಾತಿಯಿಂದ ದೂರವಿದ್ದು ವಿರಹ ವೇದನೆ ಅನುಭವಿಸುವಿರಿ. ವೃತ್ತಿಯಲ್ಲಿ ಮುನ್ನಡೆ ಸಾಧಿಸುವಿರಿ. ಆದರೆ ಖರ್ಚುವೆಚ್ಚಗಳು ಅಧಿಕವಾಗಲಿದೆ. ದೂರ ಸಂಚಾರ ಮಾಡುವಿರಿ.

ವೃಶ್ಚಿಕ: ಯಾವುದೇ ಕೆಲಸ ಮಾಡಬೇಕಾದರೂ ಹಣವಿಲ್ಲದೇ ಪರದಾಡಬೇಕಾದೀತು. ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ಅಲೆದಾಡಬೇಕಾದೀತು. ಆದರೆ ಉದ್ಯೋಗದಲ್ಲಿ ಮುನ್ನಡೆ ಲಭಿಸುತ್ತದೆ.

ಧನು: ಹಿರಿಯರ ಕೋಪಕ್ಕೆ ಗುರಿಯಾಗುವಿರಿ. ನಿಮಗೆ ಅರಿವಿಲ್ಲದೇ ಮಾಡುವ ತಪ್ಪು ಸಂಬಂಧವನ್ನು ಹಾಳು ಮಾಡಬಹುದು. ಅವಿವಾಹಿತರಿಗೆ ಕಂಕಣ ಭಾಗ್ಯ ಒದಗಿಬರಲಿದೆ. ಹೊಸ ಜನರ ಸಂಪರ್ಕ ಮಾಡುವಿರಿ.

ಮಕರ: ಕಾರ್ಯದೊತ್ತಡದ ನಿಮಿತ್ತ ದೂರ ಸಂಚಾರ ಮಾಡುವಿರಿ. ಸಂಗಾತಿ ಜತೆಗೆ ಸರಸಮಯ ಕ್ಷಣ ಕಳೆಯುವಿರಿ. ಆದರೆ ಖರ್ಚು ವಿಪರೀತವಾಗಿ, ಹಿಡಿತ ಅಗತ್ಯವಿದೆ.

ಕುಂಭ: ಆದಾಯದಷ್ಟೇ ಖರ್ಚುಗಳೂ ಮಿತಿ ಮೀರಿ ಮನಸ್ಸಿಗೆ ನೆಮ್ಮದಿ ಇರದು. ಸಂತಾನ ಭಾಗ್ಯಕ್ಕಾಗಿ ಪರಿತಪಿಸುತ್ತಿರುವವರಿಗೆ ಶುಭ ಸುದ್ದಿ ಕೇಳಲಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ.

ಮೀನ: ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನದಿಂದ ಅಚ್ಚರಿಯ ವಾರ್ತೆ ಕೇಳುವಿರಿ. ಅನಿರೀಕ್ಷಿತವಾಗಿ ಧನ ಲಾಭವಾಗಲಿದೆ. ಅವಿವಾಹಿತರಿಗೆ ಕಂಕಣ ಬಲ ಒದಗಿ ಬರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.                          

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸುಬ್ರಹ್ಮಣ್ಯನ ಅನುಗ್ರಹಕ್ಕೆ ಈ ಸ್ತೋತ್ರವನ್ನು ಓದಿ

ಅಂಬಾ ಪಂಚರತ್ನ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಗುರುವಾರ ಮಹಾವಿಷ್ಣುವಿನ ಅನುಗ್ರಹಕ್ಕೆ ಈ ಸ್ತೋತ್ರವನ್ನು ತಪ್ಪದೇ ಓದಿ

ಗಣಪತಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಪಠಿಸಿ

ಇಂದು ಚಂದ್ರಗ್ರಹಣ: ಕರ್ನಾಟಕದಲ್ಲಿ ಎಷ್ಟು ಹೊತ್ತು ಗೋಚರ, ಈ ರಾಶಿಗೆ ಲಾಭದಾಯಕ

ಮುಂದಿನ ಸುದ್ದಿ
Show comments