ಬೆಂಗಳೂರು: ದೀಪಾವಳಿ ಇರಲಿ, ಯುಗಾದಿ ಇರಲಿ ಹಬ್ಬದ ದಿನಗಳಂದು ಎಣ್ಣೆ ಸ್ನಾನ ಮಾಡುವ ಪದ್ಧತಿಯಿದೆ. ಹಾಗೆ ಮಾಡುವಾಗ ಈ ಒಂದು ಆಚರಣೆಯನ್ನು ತಪ್ಪದೇ ಮಾಡಿ.
ಪುರಾಣಗಳ ಪ್ರಕಾರ ಅಶ್ವತ್ಥಾಮ, ಬಲೀಂದ್ರ, ವೇದ ವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ ಮತ್ತು ಪರಶುರಾಮ ಏಳು ಚಿರಂಜೀವಿಗಳಿದ್ದಾರೆ.
ಹಬ್ಬದ ದಿನಗಳಂದು ಈ ಏಳು ಚಿರಂಜೀವಿಗಳನ್ನು ಶ್ಲೋಕದ ರೂಪದಲ್ಲಿ ನೆನೆಸಿಕೊಂಡು ಎಣ್ಣೆ ಸ್ನಾನ ಮಾಡುವುದರಿಂದ ದೀರ್ಘ ಆಯುಷ್ಯ ಪಡೆಯಬಹುದು. ಆ ಶ್ಲೋಕ ಹೀಗಿದೆ.
ಅಶ್ವತ್ಥಾಮೋ ಬಲಿರ್ವ್ಯಾಸೋ
ಹನೂಮಾಶ್ಚ ವಿಭೀಷಣಃ
ಕೃಪಃ ಪರಶುರಾಮಶ್ಚ ಸಪ್ತೇತೇಃ
ಚಿರಂಜೀವಿನಃ
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.