ಬೆಂಗಳೂರು: ಆಷಾಢ ಮಾಸ ಬಂತೆಂದರೆ ಶುಭ ಕಾರ್ಯಗಳನ್ನು ಮಾಡಬಾರದು, ಹೊಸದಾಗಿ ಮದುವೆಯಾದ ಜೋಡಿ ಒಟ್ಟಿಗೆ ಇರಬಾರದು ಹೀಗೆಲ್ಲಾ ನಿಬಂಧನೆಗಳು ನಮಗೆ ಗೊತ್ತು. ಆದರೆ ಆಷಾಢ ಮಾಸ ಧಾರ್ಮಿಕವಾಗಿ ಯಾಕೆ ಮಹತ್ವದ್ದು ಗೊತ್ತಾ?
ಆಷಾಢ ಮಾಡದಲ್ಲಿ ಶಿವ ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿದ್ದನಂತೆ. ಇದೇ ಮಾಸದಲ್ಲಿ ಗಂಗೆ ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿದ್ದಳು. ಅನಸೂಯದೇವಿ ಇದೇ ಮಾಸದ ನಾಲ್ಕು ಸೋಮವಾರ ಶಿವನ ವ್ರತ ಮಾಡಿದ್ದಳಂತೆ. ಅಮರನಾಥನ ಹಿಮಲಿಂಗ ದರ್ಶನ ಪ್ರತಿ ವರ್ಷವಾಗುವುದು ಇದೇ ಮಾಸದಲ್ಲಿ.
ಅಷ್ಟೇ ಅಲ್ಲ, ಪ್ರಥಮ ಏಕಾದಶಿ ವ್ರತ ಬರುವುದು ಇದೇ ಮಾಸದಲ್ಲಿ. ಆಷಾಢ ಮಾಸದ ಶುಕ್ರವಾರಗಳಲ್ಲಿ ಲಕ್ಷ್ಮೀ ದೇವಿಯನ್ನು ಪೂಜಿಸಿದರೆ ಉತ್ತಮ ಮನೆಗೆ ಮಹಾಲಕ್ಷ್ಮಿ ಕಾಲಿಡುತ್ತಾಳೆ ಎಂಬ ನಂಬಿಕೆಯಿದೆ. ಹೀಗಾಗಿ ಆಷಾಢ ಮಾಸ ಎಂದರೆ ಅಶುಭ ಮಾತ್ರ ಎಂಬ ಮನೋಭಾವ ಬಿಡಿ.