Publish Date: Mon, 11 Mar 2024 (08:14 IST)
Updated Date: Mon, 11 Mar 2024 (08:15 IST)
ಬೆಂಗಳೂರು: ಕೆಲವೊಂದು ರಾಶಿಯವರು ಸೌಂದರ್ಯ ಮತ್ತು ತಮ್ಮ ನಡೆಯಿಂದ ಹೆಚ್ಚು ಆಕರ್ಷಕವಾಗಿರುತ್ತಾರೆ. ರೂಪ ಮತ್ತು ಗುಣ ಎರಡರಲ್ಲು ಸುಂದರ ವ್ಯಕ್ತಿತ್ವ ಹೊಂದಿರುವ ರಾಶಿ ಯಾವುದು ಎಂದು ನಿಮಗೆ ತಿಳಿಯಬೇಕೇ? ಹಾಗಿದ್ದರೆ ಇಲ್ಲಿ ನೋಡಿ.
ಹೆಣ್ಣು ಇರಲಿ, ಗಂಡು ಇರಲಿ, ರೂಪ ಮತ್ತು ಗುಣ ಎರಡೂ ಸುಂದರವಾಗಿರುವುದು ಅಪರೂಪ. ಆದರೆ ಕೆಲವೊಂದು ರಾಶಿಯವರು ಎರಡರಲ್ಲೂ ಶ್ರೀಮಂತರಾಗಿರುತ್ತಾರೆ. ನೋಡಲು ಆಕರ್ಷಕವಾಗಿರುವುದು ದೇವರು ಕೊಟ್ಟ ವರ ಎಂದೇ ಹೇಳಬಹುದು. ಆಕರ್ಷಕ ವ್ಯಕ್ತಿತ್ವ ಹೊಂದಿರುವ ರಾಶಿಯಲ್ಲಿ ಮೊದಲ ಸ್ಥಾನ ತುಲಾ ರಾಶಿಗೆ.
ಈ ರಾಶಿಯನ್ನು ಶುಕ್ರ ಗ್ರಹನು ಆಳುತ್ತಾನೆ. ಶುಕ್ರನ ಶುಭ ದೃಷ್ಟಿ ನಿಮ್ಮ ಮೇಲಿದ್ದರೆ ಎಲ್ಲಾ ವಿಚಾರದಲ್ಲೂ ಯಶಸ್ಸು ಕಾಣುತ್ತೀರಿ. ಶುಕ್ರ ಎಂದರೆ ಸೌಂದರ್ಯಾಧಿಪತಿಯಾಗಿದ್ದಾನೆ. ಹೀಗಾಗಿ ಈ ರಾಶಿಯವರು ಸುಂದರ ಮತ್ತು ಪರ್ಫೆಕ್ಟ್ ಆಗಿ ಇತರರನ್ನು ಆಕರ್ಷಿಸುವ ಗುಣದವರಾಗಿರುತ್ತಾರೆ.
ಕೇವಲ ರೂಪದಲ್ಲಿ ಮಾತ್ರವಲ್ಲ, ಶೃಂಗಾರ, ಬಟ್ಟೆ-ಬರೆ, ಉಡುಪನ್ನು ಆಯ್ಕೆ ಮಾಡುವುದರಲ್ಲಿ ಈ ರಾಶಿಯವರು ಸಿದ್ಧಹಸ್ತರಾಗಿರುತ್ತಾರೆ. ಅವರು ತೊಡುವ ವಸ್ತ್ರಗಳೂ ಆಕರ್ಷಕವಾಗಿರುತ್ತಾರೆ. ಯಾಕೆಂದರೆ ಅವರ ಆಯ್ಕೆಯೇ ಅಷ್ಟು ಬೆಸ್ಟ್ ಆಗಿರುತ್ತಾರೆ. ಹೀಗಾಗಿ ಇತರರನ್ನು ಬಹುಬೇಗನೇ ಆಕರ್ಷಿಸುವ ರಾಶಿ ಇದಾಗಿದೆ.