Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ವಸ್ತುಗಳನ್ನು ಪೂಜಿಸಿದರೂ ಸಾಕು ಶಿವನ ಅನುಗ್ರಹ ನಿಮಗೆ ದೊರಕುತ್ತದೆಯಂತೆ

ಈ ವಸ್ತುಗಳನ್ನು ಪೂಜಿಸಿದರೂ ಸಾಕು ಶಿವನ ಅನುಗ್ರಹ ನಿಮಗೆ ದೊರಕುತ್ತದೆಯಂತೆ
ಬೆಂಗಳೂರು , ಗುರುವಾರ, 18 ಜುಲೈ 2019 (08:48 IST)
ಬೆಂಗಳೂರು : ಶಿವನು ಭಕ್ತರ ಕಷ್ಟಗಳನ್ನು ಬಹಳ ಬೇಗ ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ. ಆದ್ದರಿಂದ ಎಲ್ಲರೂ ತಮ್ಮ ಕಷ್ಟಗಳನ್ನು ನಿವಾರಿಸೆಂದು ಶಿವನ ಮೊರೆ ಹೋಗುತ್ತಾರೆ. ಶಿವನನ್ನು ಪೂಜಿಸುವಾಗ ಶಿವಲಿಂಗ ಅಥವಾ ಶಿವನ ಫೋಟೋಗೆ ಮಾತ್ರ ಪೂಜಿಸಬೇಕೆಂದಿಲ್ಲ. ಶಿವನಿಗೆ ಸಂಬಂಧಪಟ್ಟ ಈ ವಸ್ತುಗಳನ್ನು ಪೂಜಿಸಿದರೂ ಶಿವನನ್ನೇ ಪೂಜಿಸಿದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆಯಂತೆ.




* ಶಿವನ ತ್ರಿಶೂಲ: ಶಿವನ ಎಡಗಡೆಯ ಕೈಯಲ್ಲಿ ಫಳಗುಟ್ಟುವ ತ್ರಿಶೂಲವಿದೆ. ತ್ರಿವಿದ್ಯೆಗಳಿಗೂ ಅದು ಸಂಕೇತವಾಗಿದೆ. ದೈಹಿಕ, ಆಧ್ಯಾತ್ಮಿಕ ಮತ್ತು ಭೌತಿಕ ಪಾಪಗಳನ್ನು ನಿವಾರಿಸುವ ಸಾಧನ.


* ಶಿವನ ವಿಭೂತಿ: ಶಿವ ಯಾವಾಗಲೂ ತನ್ನ ದೇಹದ ಮೇಲೆ ವಿಭೂತಿಯನ್ನು ಧರಿಸುತ್ತಿರುವುದರಿಂದ ಇದನ್ನು ಪೂಜಿಸಿದರೆ ಶಿವನ ಕೃಪೆಗೆ ಪಾತ್ರರಾಗಬಹುದು.


*ರುದ್ರಾಕ್ಷಿ: ಇದನ್ನು ಶಿವ ತನ್ನ ಕೊರಳಿನಲ್ಲಿ ಧರಿಸುತ್ತಾನೆ. ರುದ್ರಾಕ್ಷಿ ಹಿಡುದು ಜಪ ಮಾಡಿದರೆ ಆಥವಾ ಅದನ್ನು ಕೊರಳಿನಲ್ಲಿ ಧರಿಸಿದರೆ ಶಿವ ಅನುಗ್ರಹ ನಿಮಗೆ ದೊರೆಯುತ್ತದೆ.


* ಬಿಲ್ವ ಪತ್ರೆ : ಇದು ಶಿವನ ಅತ್ಯಂತ ಪ್ರಿಯ ವಸ್ತು. ಈ ಬಿಲ್ವ ಪತ್ರೆಯನ್ನು ಪೂಜಿಸಿದರೆ ಶಿವನನ್ನೇ ಪೂಜಿಸಿದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆಯಂತೆ.


* ನಂದಿ: ಶಿವನ ಎದುರು ನಂದಿ ಸದಾ ಕಾವಲು ಕಾಯುತ್ತಾ ಇರುತ್ತಾನೆ. ನಂದಿ ಇಲ್ಲದ ಶಿವನ ದೇವಾಲಯಗಳು ಇಲ್ಲ ಎಂದು ಹೇಳಬಹುದು. ನಂದಿ ಶಿವನ ಪ್ರೀತಿಯ ಭಕ್ತನಾದ್ದರಿಂದ ನಂದಿಯನ್ನು ಪೂಜಿಸಿದರೆ ಶಿವನ ಶ್ರೀರಕ್ಷೆ ನಮಗೆ ದೊರೆತಂತೆ.


*ನಾಗರ ಹಾವು: ಶಿವನ ಕೊರಳ ಆಭರಣವಾದ ನಾಗರಹಾವನ್ನು ಪೂಜಿಸಿದರೂ ಕೂಡ ಶಿವನ ಅನುಗ್ರಹ ದೊರೆಯುತ್ತದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರಾಷಾಢ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?