Select Your Language

Notifications

webdunia
webdunia
webdunia
webdunia

ಊಟದ ನಡುವೆ ಮಹಾವಿಷ್ಣುವಿನ ಪ್ರಾರ್ಥನೆ ಮಾಡಬೇಕು ಯಾಕೆ ಗೊತ್ತಾ

Mahavishnu God
ಊಟ ಮಾಡುವಾಗ ಮಹಾವಿಷ್ಣುವಿನ ನಾಮಸ್ಮರಣೆ ಮಾಡುವುದು ಅತ್ಯಂತ ಶ್ರೇಯಸ್ಕರ ಎಂದು ನಂಬಲಾಗಿದೆ. ಅಷ್ಟಕ್ಕೂ ಊಟ ಮಾಡುವಾಗ ಮಹಾವಿಷ್ಣುವಿನ ಸ್ಮರಣೆ ಮಾಡುವುದು ಯಾಕೆ ಗೊತ್ತಾ?

ನಾವು ನೋಡಿರಬಹುದು, ವಿಶೇಷವಾಗಿ ಬ್ರಾಹ್ಮಣರು ಭೋಜನ ಮಾಡುವಾಗ ದೇವರ ಶ್ಲೋಕಗಳನ್ನು ಹೇಳುತ್ತಾರೆ. ಇದು ಊಟ ಮಾಡಿದ್ದು ಜೀರ್ಣವಾಗಲಿ ಎಂಬ ಕಾರಣಕ್ಕೆ ಅಲ್ಲ. ಊಟ ಮಾಡುವಾಗ ಮಹಾವಿಷ್ಣುವಿನ ಸ್ಮರಣೆ ಮಾಡುವುದು ಶ್ರೇಷ್ಠ ಎಂಬ ಕಾರಣಕ್ಕೆ.

ಅನ್ನ ಎಲ್ಲಕ್ಕಿಂತ ಶ್ರೇಷ್ಠವಾದುದು. ನಾವು ಊಟ ಮಾಡುವಾಗ ದೇವರ ಸ್ಮರಣೆ ಮಾಡುವುದರಿಂದ ಆ ಮಹಾವಿಷ್ಣುವೂ ಸಂತೃಪ್ತನಾಗುತ್ತಾನೆ ಎಂಬ ನಂಬಿಕೆಯಿದೆ. ಮಹಾವಿಷ್ಣುವು ಅನ್ನದ ರೂಪದಲ್ಲಿ ನಮ್ಮನ್ನು ಅನುಗ್ರಹಿಸುತ್ತಾನೆ ಎಂಬುದು ನಂಬಿಕೆ.

ನಾವು ಊಟ ಮಾಡುವಾಗ ಮಹಾವಿಷ್ಣುವಿನ ನಾಮಸ್ಮರಣೆ ಕೇಳುತ್ತಿದ್ದರೆ ನಮ್ಮ ಮಹಾವಿಷ್ಣುವು ಅತ್ಯಂತ ಸಂತೃಪ್ತನಾಗುತ್ತಾನೆ ಎಂದು ಶಾಸ್ತ್ರಗಳು ಹೇಳುತ್ತವೆ. ಈ ಕಾರಣಕ್ಕಾಗಿಯೇ ಊಟ ಮಾಡುವಾಗ ಮಹಾವಿಷ್ಣುವಿನ ನಾಮಸ್ಮರಣೆ ಕೇಳುತ್ತಿದ್ದರೆ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಸಕಲ ಗ್ರಹಗತಿಗಳ ದೋಷ ಪರಿಹಾರಕ್ಕೆ ಈ ಸ್ತೋತ್ರವನ್ನು ಓದಿ