Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜಾಗ ಕೊಳ್ಳಬೇಕಾಗುವಾಗ ಪಾಲಿಸಬೇಕಾದ ವಾಸ್ತು!

ಜಾಗ ಕೊಳ್ಳಬೇಕಾಗುವಾಗ ಪಾಲಿಸಬೇಕಾದ ವಾಸ್ತು!
ಬೆಂಗಳೂರು , ಮಂಗಳವಾರ, 6 ಮಾರ್ಚ್ 2018 (11:27 IST)
ಬೆಂಗಳೂರು: ಒಂದು ಮನೆ ಅಥವಾ ಮನುಷ್ಯನು ವಾಸ ಮಾಡುವ ಜಾಗವನ್ನು ಕೊಳ್ಳುವ ಮುನ್ನ ಮೊದಲೇ ಜಾಗದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು.  ಒಂದು ಜಾಗವು ಕೊಂಡುಕೊಳ್ಳುವಾಗ ಆ ಜಾಗವು ನಮ್ಮ ಜಾತಕಕ್ಕೆ ಅನುಕೂಲಕರವಾಗಿದ್ದರೆ  ಎಲ್ಲವೂ ಶುಭವಾಗುತ್ತದೆ. ಇಲ್ಲದಿದ್ದರೆ ಸರಿಯಾದ ಪರಿಹಾರ ಕ್ರಮಗಳನ್ನು ಅನುಸರಿಸಿದರೆ ಒಳ್ಳೆಯದು.


ಭೂಮಿ ಅಥವಾ ಸೈಟ್ ನ ಯಾವುದಾದರೂ ಒಂದು ಭಾಗದಲ್ಲಿ ಅರ್ಧ ಅಡಿ ವ್ಯಾಸ ಒಂದು ಅಡಿ ಆಳವಿರುವಂತೆ ಗುಂಡಿಯೊಂದನ್ನು ತೋಡಿ. ಹೀಗೆ ಅಗೆದ ಜಾಗದಲ್ಲಿ ತೋರು ಬೆರಳಿನಿಂದ ಓಂಕಾರ ಶಬ್ಧವನ್ನು ಬರೆಯಿರಿ. ಆಮೇಲೆ ಅಷ್ಟದಿಕ್ಕುಗಳ ದೇವರನ್ನು ನೆನೆಯಿರಿ. ಮಣ್ಣನ್ನು ಶೇಖರಣೆ ಮಾಡಿ. ಮೂರು ರಾತ್ರಿಗಳ ಕಾಲ ಆ ಜಾಗವನ್ನು ಹಾಗೇ ಬಿಡಿ. ನಾಲ್ಕನೆಯ ದಿನ ಅಗೆದ ಜಾಗದಲ್ಲಿ ಶೇಖರಿಸಿಟ್ಟುಕೊಂಡ ಮಣ್ಣನ್ನು ತುಂಬಿ. ಒಂದೊಮ್ಮೆ ಮಣ್ಣು ತುಂಬಿದ ಮೇಲೂ ಒಂದಷ್ಟು ಮಣ್ಣು ಉಳಿದರೆ ನೀವು ಕೊಳ್ಳಲಿರುವ ಜಾಗ ಒಳ್ಳೆಯದು ಮುಂದೆ ಅಭಿವೃದ್ಧಿ ಕಾಣುತ್ತದೆ ಎಂದು ಅರ್ಥ. ಶೇಖರಿಸಿದ ಮಣ್ಣು ತುಂಬದೇ ಹೋದರೆ ಆ ಜಾಗ ಪ್ರಶಸ್ತವಲ್ಲ ಎಂದು ಅರ್ಥ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಳಸಕ್ಕೆ ಸಿಂಗಾರ ಮಾಡಿದರೆ ಲಕ್ಷ್ಮೀ ದೇವಿ ಒಲಿಯುತ್ತಾಳಂತೆ!