Select Your Language

Notifications

webdunia
webdunia
webdunia
webdunia

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

Astrology

Krishnaveni K

ಬೆಂಗಳೂರು , ಬುಧವಾರ, 24 ಡಿಸೆಂಬರ್ 2025 (13:16 IST)
ದ್ವಾದಶ ರಾಶಿಯವರ ಗ್ರಹಗತಿಗೆ ಅನುಗುಣವಾಗಿ ಆಯಾ ದೇವರ ಪೂಜೆ ಮಾಡುವುದು ಸೂಕ್ತ. ಅದೇ ರೀತಿ 2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪೂಜೆ ಮಾಡಬೇಕು ಇಲ್ಲಿದೆ ವಿವರ.

ಮೇಷ ರಾಶಿ: ಹನುಮಂತ, ಶನಿ ದೇವರ ಪೂಜೆ, ಮಂತ್ರಗಳನ್ನು ಪಠಿಸಿ. ಯಾಕೆಂದರೆ ಈ ರಾಶಿಯವರಿಗೆ ಸಾಡೇ ಸಾತಿ ಶನಿ ದೆಸೆ ಚಾಲ್ತಿಯಲ್ಲಿದೆ.

ವೃಷಭ: ಲಕ್ಷ್ಮೀ ದೇವಿಯ ಪೂಜೆ ಸೂಕ್ತ. ಹಣಕಾಸಿನ ಸಮಸ್ಯೆಗಳನ್ನು ನಿವಾರಿಸಲು ಲಕ್ಷ್ಮೀ ಪೂಜೆ ಮಾಡಿದರೆ ಉತ್ತಮ.
ಮಿಥುನ: ಶ್ರೀಕೃಷ್ಣನ ಮಂತ್ರ ಪಠಿಸುವುದು, ನವಿಲುಗರಿ ಇಟ್ಟು ಪೂಜೆ ಮಾಡುವುದರಿಂದ ಒಳಿತಾಗುವುದು.
ಕರ್ಕಟಕ: ಈ ರಾಶಿಯವರಿಗೆ ಗುರು ಗ್ರಹನ ಪ್ರವೇಶವಾಗುವುದರಿಂದ ಶಿವನ ಪೂಜೆ ಮಾಡುವುದು, ಸ್ತೋತ್ರ ಪಠಿಸುವುದು ಉತ್ತಮ.
ಸಿಂಹ: ಮಹಾವಿಷ್ಣುವಿನ ಪೂಜೆ ಮಾಡಬೇಕು. ಇದರಿಂದ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸುವಿರಿ.
ಕನ್ಯಾ: ವಿಘ್ನ ನಿವಾರಕ ಗಣೇಶನ ಪೂಜೆ ಮಾಡಿ. ಕೆಲವು ಅಡೆತಡೆಗಳು ಬರುವುದಿದ್ದು ಅದರ ನಿವಾರಣೆಗೆ ಬುಧವಾರಗಳಂದು ಗಣೇಶನ ಪೂಜೆ ಮಾಡಿ.
ತುಲಾ: ಲಕ್ಷ್ಮೀ ದೇವಿಯ ಪೂಜೆ ಸೂಕ್ತ. ಇದರಿಂದ ಸಂಬಂಧಗಳಲ್ಲಿ ಸುಧಾರಣೆ, ಮನೆಯಲ್ಲಿ ನೆಮ್ಮದಿ ನೆಲೆಸುವುದು.
ವೃಶ್ಚಿಕ: ವೈಯಕ್ತಿಕವಾಗಿ ಬದಲಾವಣೆಯ ಕಾಲವಿದು. ಹನುಮಾನ್ ಪ್ರಾರ್ಥನೆ, ಪೂಜೆಯಿಂದ ಒಳಿತಾಗುವುದು.
ಧನು: ಬೃಹಸ್ಪತಿಯ ಪ್ರಾರ್ಥನೆ ಮಾಡಿ. ಪ್ರಯಾಣದ ಅವಕಾಶಗಳು ಬರುವುದು, ಗುರಿ ಸಾಧನೆಯತ್ತ ಪಯಣ ಮಾಡಲಿದ್ದೀರಿ.
ಮಕರ: ದುರ್ಗಾ ದೇವಿಯ ಪ್ರಾರ್ಥನೆ ಸೂಕ್ತ. ಆರೋಗ್ಯ, ಮಾನಸಿಕ ಒತ್ತಡಗಳಿಂದ ನಿವಾರಣೆ ಪಡೆಯಲು ದುರ್ಗಾ ಮಾತೆಯ ಪೂಜೆ ಮಾಡಿ.
ಕುಂಭ: ಶನಿ ದೆಸೆ ಅಂತಿಮ ಹಂತದಲ್ಲಿದ್ದು ನೆಮ್ಮದಿಗಾಗಿ ಶನಿ ಪೂಜೆ, ಮಂತ್ರ ಪಠಿಸಿ.
ಮೀನ: ಶಿವ ಮತ್ತು ಶನಿ ಪ್ರಾರ್ಥನೆ. ಶನಿ ದೆಸೆ ಜಾರಿಯಲ್ಲಿದ್ದು ಇದರ ದೋಷ ನಿವಾರಣೆಗೆ ಶಿವ, ಶನಿಯ ಪೂಜೆ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ